For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡ ಚಿತ್ರಕ್ಕೆ ನಾಯಕಿ ಆದ ಸ್ಟಾರ್ ನಟಿಯ ಪುತ್ರಿ

  |

  ಎವರ್ ಗ್ರೀನ್ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಸದ್ಯ ಬಾಲಿವುಡ್ನ ಇಂಡಸ್ಟ್ರಿಯ ಹೊಸ ಕ್ರಶ್. 'ದಡಕ್' ಸಿನಿಮಾ ಬಳಿಕ ಬೇಡಿಕೆ ಹೆಚ್ಚಿಸಿಕೊಂಡಿರುವ ಜಾಹ್ನವಿ ಕಪೂರ್ ಈಗ ಸೌತ್ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

  'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ್ ದೇವರಕೊಂಡ ಅವರ ಚಿತ್ರದಲ್ಲಿ ಜಾಹ್ನವಿ ಕಪೂರ್ ನಟಿಸುವ ಸಾಧ್ಯತೆ ಎಂಬ ಸುದ್ದಿ ಹಲವು ದಿನಗಳಿಂದ ಸದ್ದು ಮಾಡುತ್ತಿತ್ತು. ಆದ್ರೀಗ, ಈ ಸುದ್ದಿ ಪಕ್ಕಾ ಆಗುವ ಸೂಚನೆ ಸಿಕ್ಕಿದೆ.

  ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ಸ್ ಇವರೇಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ಸ್ ಇವರೇ

  ಎಲ್ಲ ಅಂದುಕೊಂಡಂತೆ ಆದರೆ, ವಿಜಯ್ ದೇವರಕೊಂಡ ನಟನೆಯ 'ಫೈಟರ್' ಚಿತ್ರಕ್ಕೆ ಜಾಹ್ನವಿ ಕಪೂರ್ ನಾಯಕಿಯಾಗಲಿದ್ದಾರೆ. ಈ ಚಿತ್ರವನ್ನ ಪೂರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು, ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ನಿರ್ಮಾಣದಲ್ಲಿ ಕೈಜೋಡಿಸಲಿದ್ದಾರೆ ಎಂಬ ಟಾಕ್ ಫಿಲಂ ನಗರಿಯಲ್ಲಿದೆ.

  ಫೈಟರ್ ಚಿತ್ರಕ್ಕೆ ಜಾಹ್ನವಿ ಕಪೂರ್ ಅವರ ಹೆಸರನ್ನು ಕರಣ್ ಜೋಹರ್ ಸೂಚಿಸಿದ್ದು, ಪೂರಿ ಜಗನ್ನಾಥ್ ಕೂಡ ಮಾತುಕತೆ ಮುಗಿಸಿದ್ದಾರಂತೆ.

  ಈ ಸೌತ್ ನಟನ ಸ್ಟೈಲ್ ಗೆ ಆಲಿಯಾ ಭಟ್ ಫಿದಾ ಆಗ್ಬಿಟ್ಟಿದ್ದಾರೆಈ ಸೌತ್ ನಟನ ಸ್ಟೈಲ್ ಗೆ ಆಲಿಯಾ ಭಟ್ ಫಿದಾ ಆಗ್ಬಿಟ್ಟಿದ್ದಾರೆ

  ಈ ಮೊದಲು ಈ ಚಿತ್ರಕ್ಕೆ ನಾಯಕಿಯಾಗಿ ಆಲಿಯಾ ಭಟ್, ಅನನ್ಯ ಪಾಂಡೆ ಅವರ ಹೆಸರು ಕೇಳಿ ಬಂದಿತ್ತು. ಫೆಬ್ರವರಿ ತಿಂಗಳಲ್ಲಿ ಈ ಚಿತ್ರ ಶುರುವಾಗಲಿದ್ದು, ಅಧಿಕೃತವಾಗಿ ಪ್ರಕಟಿಸಬೇಕಾಗಿದೆ.

  ಜಾಹ್ನವಿ ಕಪೂರ್ ಅವರ ತಂದೆ ಬೋನಿ ಕಪೂರ್ ಅವರು ಇತ್ತೀಚಿಗಷ್ಟೆಅಜಿತ್ ಅಭಿನಯದ ನೇರರ್ಕೊಂಡ ಪಾರವಿ ಸಿನಿಮಾ ನಿರ್ಮಿಸಿದ್ದರು.

  English summary
  Sridevi daughter Janhavi Kapoor playing female lead role in Vijay Devarakonda's movie Fighter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X