ಜೂ.ಎನ್‌ಟಿಆರ್, ವಿಜಯ್ ದೇವರಕೊಂಡನಿಗೆ NO ಎಂದ ಜಾಹ್ನವಿ ಕಪೂರ್!

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಿ ಸಿನಿಮಾ ಮಾಡಿ ನಟಿಯಾಗಿ ಹೊರ ಹೊಮ್ಮಿದ್ದಾರೆ. ಆದರೆ ಜಾಹ್ನವಿ ಅವರು ತಮ್ಮ ಸಿನಿಮಾಗಳಿಂದಲೂ, ಬೇರೆ ಬೇರೆ ವಿಚಾರಗಳಿಗೆ ಸುದ್ದಿ ಆಗುತ್ತಾ ಇರುತ್ತಾರೆ. ಆದರೆ ಇತ್ತೀಚೆಗೆ ಜಾಹ್ನವಿ ಕಪೂರ್ ಅವರು ಹೆಚ್ಚಾಗಿ ಸುದ್ದಿ ಆಗಿದ್ದು, ಆಕೆ ಸೌತ್ ಸಿನಿಮಾ ರಂಗಕ್ಕೆ ಬರ್ತಾರೆ ಎನ್ನುವ ಕಾರಣಕ್ಕೆ.

ನಟಿ ಶ್ರೀದೇವಿ ಸೌತ್‌ ಚಿತ್ರರಂಗದಲ್ಲಿ ದೊಟ್ಟ ಮಟ್ಟದ ಹೆಸರು ಮಾಡಿದ್ದರು. ಹಾಗಾಗಿ ಅಮ್ಮನಂತೆ ಪುತ್ರಿ ಜಾಹ್ನವಿ ಕಪೂರ್ ಕೂಡ ಸೌತ್ ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ ಎನ್ನಲಾಗಿತ್ತು. ಇಬ್ಬರು ಸ್ಟಾರ್ ನಟರ ಸಿನಿಮಾಗಾಗಿ ಜಾಹ್ನವಿ ತೆಲುಗಿಗೆ ಬರ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.

ಆದರೆ ಈ ಬಗ್ಗೆ ಈಗ ಹೊಸದೊಂದು ಸುದ್ದಿ ಬಂದಿದೆ. ಸೌತ್ ಚಿತ್ರರಂಗಕ್ಕೆ ನಟಿ ಜಾಹ್ನವಿ ಕಪೂರ್ ಬರುವುದೇ ಅನುಮಾನ ಎನ್ನಲಾಗುತ್ತಿದೆ. ಈಕೆ ಸ್ಟಾರ್ ನಟರ ಜೊತೆಗೆ ಅಭಿನಯಿಸುತ್ತಾರೆ ಎನ್ನುವುದು ಕೇವಲ ಗಾಳಿ ಸುದ್ದಿಯಾಗಿ ಉಳಿದಿದೆ. ಅಷ್ಟಕ್ಕೂ ಜಾಹ್ನವಿ ಸೌತ್ ಎಂಟ್ರಿ ವಿಚಾರದ ನಿಜಾಂಶ ಏನು ಎನ್ನುವ ಬಗ್ಗೆ ಮುಂದೆ ಓದಿ...

ಜೂ.ಎನ್‌ಟಿಆರ್ ಜೊತೆ ನಟಿಸುತ್ತಿಲ್ಲ ಜಾಹ್ನವಿ!

ಜೂ.ಎನ್‌ಟಿಆರ್ ಜೊತೆ ನಟಿಸುತ್ತಿಲ್ಲ ಜಾಹ್ನವಿ!

ಜೂ. ಎನ್‌ಟಿಆರ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ. ಈ ಚಿತ್ರದ ತಯಾರಿ ನಡೆದಿದೆ. ಇದೇ ಚಿತ್ರಕ್ಕಾಗಿ ಜಾಹ್ನವಿ ಕಪೂರ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗಿತ್ತು. ಅಷ್ಟೇ ಅಲ್ಲಾ ಈ ಚಿತ್ರದ ಕುರಿತಾಗಿ ಈಗಾಗಲೇ ಸಿನಿಮಾತಂಡ ಮಾತುಕತೆ ನಡೆಸಿದೆ ಎನ್ನಲಾಗಿತ್ತು. ಜೊತೆಗೆ ಚಿತ್ರದಲ್ಲಿ ನಟ ಜೂ.ಎನ್‌ಟಿಆರ್ ಅವರ ಜೊತೆಗೆ ಅಭಿನಯಿಸಲು ಬಾಲಿವುಡ್‌ ನಟಿ ಜಾಹ್ನವಿ ಕಪೂರ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ ಎನ್ನಲಾಗಿತ್ತು. ಆದರೆ ಈಗ ಬಂದಿರುವ ಅವರದಿ ಪ್ರಕಾರ ಜಾಹ್ನವಿ ಜೂ.ಎನ್‌ಟಿಆರ್ ಜೊತೆಗೆ ಅಭಿನಯಿಸುತ್ತಿಲ್ಲವಂತೆ.

ವಿಜಯ್ ದೇವರಕೊಂಡನ ಚಿತ್ರಕ್ಕೂ ಇಲ್ಲ ಶ್ರೀದೇವಿ ಪುತ್ರಿ!

ವಿಜಯ್ ದೇವರಕೊಂಡನ ಚಿತ್ರಕ್ಕೂ ಇಲ್ಲ ಶ್ರೀದೇವಿ ಪುತ್ರಿ!

ಜೂ.ಎನ್‌ಟಿಆರ್ ಚಿತ್ರಕ್ಕೂ ಮುನ್ನ, ನಟ ವಿಜಯ್ ದೇವರಕೊಂಡ ಜೊತೆಗೆ ಜಾಹ್ನವಿ ಹೆಸರು ಕೇಳಿ ಬಂದಿತ್ತು. ಜಾಹ್ನವಿ ಕಪೂರ್ ವಿಜಯ್ ದೇವರಕೊಂಡ ಮುಂದಿನ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎನ್ನಲಾಗಿತ್ತು. 'ಲೈಗರ್' ಸಿನಿಮಾಗಾಗಿ ಜಾಹ್ನವಿ ಕಾಲ್ ಶೀಟ್ ಕೇಳಲಾಗಿತ್ತು, ಆದರೆ ಅದು ಸಾಧ್ಯ ಆಗಿರಲಿಲ್ಲ. ಹಾಗಾಗಿ ಅವರ ಮುಂದಿನ ಚಿತ್ರಕ್ಕೆ ಜಾಹ್ನವಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಅದನ್ನು ಕೂಡ ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ ನಿರಾಕರಿಸಿದ್ದಾರೆ.

ಜಾಹ್ನವಿ ಬಗ್ಗೆ ಮಾತನಾಡಿದ ತಂದೆ ಬೋನಿ ಕಪೂರ್!

ಜಾಹ್ನವಿ ಬಗ್ಗೆ ಮಾತನಾಡಿದ ತಂದೆ ಬೋನಿ ಕಪೂರ್!

ಜಾಹ್ನವಿ ಕಪೂರ್ ಸದ್ಯಕ್ಕೆ ಬಾಲಿವುಡ್‌ಗೆ ಎಂಟ್ರಿ ಕೊಡ್ತಿಲ್ಲ ಎನ್ನುವ ಬಗ್ಗೆ ತಂದೆ ಬೋನಿ ಕಪೂರ್ ಸ್ಪಷ್ಟ ಪಡಿಸಿದ್ದಾರೆ. ಹೈದ್ರಾಬಾದ್‌ನಲ್ಲಿ ಮಾತನಾಡಿದ ಅವರು "ಇದು ಸಾಮಾಜಿಕ ಜಾಲತಾಣದ ವದಂತಿಯಲ್ಲದೆ ಮತ್ತೇನೂ ಅಲ್ಲ. ಸಾಮಾಜಿಕ ಮಾಧ್ಯಮವು ಒಂದು ವಿಚಿತ್ರ ತಾಣವಾಗಿದೆ. ಪ್ರತಿ ದಿನ, ಹೊಸ ವದಂತಿ ಹುಟ್ಟಿಕೊಳ್ಳುತ್ತವೆ. ಜೂ.ಎನ್‌ಟಿಆರ್ ಚಿತ್ರದಲ್ಲಿ ಜಾಹ್ನವಿ ನಟಿಸುತ್ತಾಳೆ ಎಂಬ ವದಂತಿಗಳು ಅದೇ ವರ್ಗಕ್ಕೆ ಸೇರುತ್ತವೆ. ಟಾಲಿವುಡ್ ಚಿತ್ರದಲ್ಲಿ ಜಾಹ್ನವಿ ನಟಿಸುವುದನ್ನು ನೋಡಲು ನಾನು ಬಯಸುತ್ತೇನೆ."ಎಂದು ಹೇಳುವ ಮೂಲಕ ಸದ್ಯಕ್ಕೆ ಜಾಹ್ನವಿ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

ಜಾಹ್ನವಿ ಹಿಟ್ ಕೊಡುವುದು ಯಾವಾಗ?

ಜಾಹ್ನವಿ ಹಿಟ್ ಕೊಡುವುದು ಯಾವಾಗ?

ನಟಿ ಜಾಹ್ನವಿ ಕಪೂರ್ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. 'ಧಡಕ್' ಚಿತ್ರದ ಮೂಲಕ ನಾಯಕಿ ಆಗಿ ಜಾಹ್ನವಿ ಬಾಲಿವುಡ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ ಅವರ ಮೊದಲ ಸಿನಿಮಾ ಅಂದುಕೊಂಡ ಮಟ್ಟಿಗೆ ಅಷ್ಟೇನು ದೊಡ್ಡ ಯಶಸ್ಸು ಕಂಡಿಲ್ಲ. ನಂತರ 'ಗುಂಜನ್ ಸಕ್ಸೇನ', 'ರೂಹಿ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರಗಳು ಕೂಡ, ಜಾಹ್ನವಿಗೆ ದೊಡ್ಡ ಹೆಸರು ತಂದುಕೊಡುವಲ್ಲಿ ಸೋತಿವೆ. ಹಾಗಾಗಿ ಜಾಹ್ನವಿ ಉತ್ತಮ ಸಿನಿಮಾಗಾಗಿ ಕಾಯುತ್ತಿದ್ದಾರೆ. ಅದು ಸೌತ್ ಚಿತ್ರವೇ ಆಗಿರಲಿದೆಯಾ ಎನ್ನುವುದನ್ನು ನೋಡಬೇಕು.

More from Filmibeat

English summary
Janhvi Kapoor Not Acting In Any South Indian Films, Boney Kapoor Ends The Rumours,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X