'ಪೆದ್ದಿ' ಚಿತ್ರದಲ್ಲಿ ಜಾನ್ವಿ ಪಾತ್ರವನ್ನು ಅಸಭ್ಯವಾಗಿ ಚಿತ್ರಿಸಿದ್ರಾ? ಸ್ವತಃ ಶ್ರೀದೇವಿ ಪುತ್ರಿಗೆ ಅಸಮಾಧಾನ?

ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಊರಿನ ರಾಜಕಾರಣಿ ಮಗಳಾಗಿ ಬಣ್ಣ ಹಚ್ಚಿದ್ದಾರೆ. ನಾಯಕ- ನಾಯಕಿಯ ನಡುವೆ ದೊಡ್ಡ ಲವ್ ಟ್ರ್ಯಾಕ್ ಇಲ್ಲದೇ ಇದ್ದರೂ ಇಬ್ಬರ ನಡುವಿನ ದೃಶ್ಯಗಳ ಬಗ್ಗೆ ಟೀಕೆ ವ್ಯಕ್ತವಾಗ್ತಿದೆ.

ಶ್ರೀದೇವಿ ಪುತ್ರಿಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಹಾಗಾಗಿ ದಕ್ಷಿಣದ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ತೆಲುಗಿನ 'ದೇವರ' ಚಿತ್ರದಲ್ಲಿ ನಟಿಸಿದ್ದ ಚೆಲುವೆಗೆ ಇದು 2ನೇ ಸಿನಿಮಾ. ಅದ್ಯಾಕೋ ಜಾನ್ವಿಗೆ ಒಳ್ಳೆ ಪಾತ್ರಗಳು ಸಿಗ್ತಿಲ್ಲ. ಗ್ಲಾಮರ್ ಡಾಲ್ ಆಗಿ ನಟಿಸೋದು ಬಿಟ್ರೆ ಗಂಭೀರ ಪಾತ್ರ ಯಾರು ಕೊಡ್ತಿಲ್ಲ. ಸದ್ಯ 'ಪೆದ್ದಿ' ಚಿತ್ರದಲ್ಲಿ ಕೂಡ ಅದು ಪುನರಾವರ್ತನೆಯಾಗಿದೆ. ಲಂಗಾ ದಾವಣಿಯಲ್ಲಿ ಅಚ್ಚಿಯಮ್ಮ ಆಗಿ ಜಾನ್ವಿ ಬಂದು ಹೋಗುತ್ತಾರೆ. ಆದರೆ ಸೊಂಟ, ಎದೆ ತೋರಿಸುವುದು ಬಿಟ್ಟರೆ ಬೇರೆನೂ ಮಾಡಿಲ್ಲ ಎಂದು ಟ್ರೋಲ್ ಆಗುತ್ತಿದ್ದಾರೆ.

Janhvi Kapoor s Glamorous Look in Peddi Becomes a Talking Point Among Fans

ಊರಿನ ದೊಡ್ಡ ರಾಜಕಾರಣಿ ಮಗಳು ಯಾರು ಕೂಡ ಹೀಗೆ ಮೈಮಾಟ ಪ್ರದರ್ಶನ ಮಾಡುತ್ತಾ ಸುತ್ತಾಡಲ್ಲ. ಬರೀ ಗ್ಲಾಮರ್‌ಗಾಗಿ ಈ ಪಾತ್ರ ತುರುಕಿದಂತೆ ಇದೆ ಎಂದು ಟೀಕೆ ವ್ಯಕ್ತವಾಗ್ತಿದೆ. ಮೊದಲಾರ್ಧ ಒಂದೆರಡು ದೃಶ್ಯಗಳಲ್ಲಿ ಜಾನ್ವಿ ಕಾಣಿಸಿಕೊಂಡಿದ್ದಾರೆ. ದಾವಣಿ ತೆಗೆದು ಸೊಂಟ ತಿರುಗಿಸುತ್ತಾ ದರ್ಶನ ಕೊಡುತ್ತಾರೆ. 'ಚಿಕ್ಕಿರಿ ಚಿಕ್ಕಿರಿ' ಸಾಂಗ್‌ನಲ್ಲಿ ಕೂಡ ಅದೇ ಮುಂದುವರೆಯುತ್ತದೆ. ಸೆಕೆಂಡ್ ಹಾಫ್‌ನಲ್ಲಿ ಒಂದೆರಡು ನಿಮಿಷ ಮಾತ್ರ ಆಕೆಯ ಪಾತ್ರ ಬಂದು ಹೋಗುತ್ತದೆ. ಕ್ಲೈಮ್ಯಾಕ್ಸ್ ವೇಳೆಗೆ ಎಮೋಷನಲ್ ಟಚ್ ಕೊಟ್ಟು ಪೆದ್ದಿ ಮಡದಿ ಅಚ್ಚಿಯಮ್ಮ ಆಗಿ ಪಾತ್ರವನ್ನು ತೋರಿಸಿದ್ದಾರೆ.

ಆರಂಭದಲ್ಲಿ ನಾಯಕಿ ಮುಖ ನೋಡದೇ ನಾಯಕ ಆಕೆಯ ಸೊಂಟವನ್ನು ಮಾತ್ರ ನೋಡುವಂತೆ ಕ್ಯಾಮರಾ ಫೋಕಸ್ ಮಾಡಲಾಗಿದೆ. ಈ ಬಗ್ಗೆ ಕೂಡ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಚ್ಚಿಯಮ್ಮ ಒಪ್ಪಿಗೆ ಇಲ್ಲದೇ ಪೆದ್ದಿ ಆಕೆಗೆ ಮುತ್ತು ಕೊಡುತ್ತಾನೆ. ಅದನ್ನು ಹೀರೊಯಿಸಂ ರೀತಿ ತೋರಿಸಿದ್ದಾರೆ. ಇನ್ನು ಎದುರಾಳಿ ಪಡೆಯ ಕಡೆ ಜಾನ್ವಿ ಮಧ್ಯದ ಬೆರಳು ತೋರಿಸಿ ಅಸಹ್ಯಕರ ಸಂಜ್ಞೆ ಮಾಡುವ ಸನ್ನಿವೇಶ ಕೂಡ ಇದೆ. ಒಟ್ಟಾರೆ ಇಡೀ ಚಿತ್ರದಲ್ಲಿ ಅಚ್ಚಿಯಮ್ಮ ಪಾತ್ರ ಪೋಷಣೆಯೇ ಸರಿಯಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

'ದೇವರ' ಚಿತ್ರದಲ್ಲಿ ಕೂಡ ಹೆಚ್ಚು ಕಮ್ಮಿ ಇದೇ ರೀತಿ ಗ್ಲಾಮರ್ ಬೊಂಬೆಯಂತೆ ಜಾನ್ವಿ ಅವರನ್ನು ತೋರಿಸಲಾಗಿತ್ತು. ಈಗ 'ಪೆದ್ದಿ' ಚಿತ್ರದಲ್ಲಿ ಕೂಡ ಅದು ಮುಂದುವರೆದಿದೆ. ಈ ವಿಚಾರದಲ್ಲಿ ನಿರ್ದೇಶಕ ಬುಚ್ಚಿಬಾಬು ಅವರನ್ನು ಟ್ರೋಲ್ ಮಾಡಲಾಗ್ತಿದೆ. ಇದೆಲ್ಲದರ ನಡುವೆ ಸ್ವತಃ ಜಾನ್ವಿ ಕಪೂರ್ ಕೂಡ 'ಪೆದ್ದಿ' ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಜಾನ್ವಿ ಒಂದು ಪೋಸ್ಟ್‌ಗೆ ಮಾಡಿರುವ ಲೈಕ್ ಎನ್ನಲಾಗ್ತಿದೆ.

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಪಾತ್ರದ ಬಗ್ಗೆ recommendation community ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ನಾಯಕಿಗೆ ತೋರಿಸಿರುವ ಅತ್ಯಂತ ಅಗೌರವ ಇದು ಎಂದು ಬರೆಯಲಾಗಿದೆ. ಈ ಪೋಸ್ಟ್ ಅನ್ನು ಜಾನ್ವಿ ಕಪೂರ್ ಲೈಕ್ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನು ನೋಡಿ ಸ್ವತಃ ಜಾನ್ವಿ 'ಪೆದ್ದಿ' ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಟ್ರೋಲ್ ಮಾಡಲಾಗ್ತಿದೆ.

ನಾಯಕಿಯರ ಪಾತ್ರವನ್ನು ಹೀಗೆ ಚಿತ್ರಿಸಿರುವುದು ಇದೇ ಮೊದಲಲ್ಲ. 'ಪುಷ್ಪ' ಸರಣಿ ಸಿನಿಮಾಗಳಲ್ಲಿ ಶ್ರೀವಲ್ಲಿ ಪಾತ್ರವನ್ನು ಇದೇ ರೀತಿ ತೋರಿಸಿದ್ದರು. ಬಾಲಿವುಡ್ ಸಿನಿಮಾಗಳಲ್ಲಿ ಇದು ಸರ್ವೇಸಾಮಾನ್ಯ. ಸ್ವತಃ ಜಾನ್ವಿ ಕೂಡ ಇಂತಹ ಗ್ಲಾಮರಸ್ ಪಾತ್ರಗಳಲ್ಲಿ ಹಿಂದಿ ನಟಿಸಿದ್ದಾರೆ ಎಂದು ಮತ್ತೆ ಕೆಲವರು ವಾದಿಸುತ್ತಿದ್ದಾರೆ.

ಅಂದಹಾಗೆ 'ಪೆದ್ದಿ' ಸಿನಿಮಾ ರಿಲೀಸ್ ಬೆನ್ನಲ್ಲೇ ಜಾನ್ವಿ ಕಪೂರ್ ತಿರುಪತಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ನಿರ್ದೇಶಕ ಬುಚ್ಚಿಬಾಬು ಕೂಡ ತಿರುಪತಿಗೆ ಭೇಟಿ ನೀಡಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಫಸ್ಟ್ ವೀಕೆಂಡ್ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗ್ತಿದೆ.

Read more about: ramcharan janhvi kapoor tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X