'ಎದೆ' ಮೇಲೆ ವಿಕೃತ 'ಪೆದ್ದಿ' ಕಣ್ಣು ; ಶೂಟಿಂಗ್ ಸೆಟ್‌ನಲ್ಲೇ ಬಿಕ್ಕಿದ್ದರು ಜಾಹ್ನವಿ ಕಪೂರ್ - ವಾಟ್ಸಾಪ್ ಚಾಟ್ ಲೀಕ್

ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈಮಾಟವನ್ನು ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಚಿತ್ರರಂಗ ಕೂಡ ನಾಯಕಿಯರ ಈ ಆಲೋಚನೆಯನ್ನೇ ಬಂಡವಾಳ ಮಾಡಿಕೊಂಡು, ಅವರನ್ನು ಕೇವಲ ಗ್ಲಾಮರ್ ಗೊಂಬೆಗಳನ್ನಾಗಿ ಬಳಸಿಕೊಳ್ಳುತ್ತಾ ಬಂದಿದೆ.

ಬದಲಾದ ಈ ಕಾಲದಲ್ಲಿ ಇಂದು ಅಭಿನಯ ಸಾಮರ್ಥ್ಯ, ಹಾವ ಭಾವ, ಮುಖ್ಯವಾಗಿಲ್ಲ. ಪಾತ್ರದ ತೂಕದ ಕಡೆ ಕೂಡ ಯಾರು ಗಮನ ವಹಿಸುವುದಿಲ್ಲ. ಬದಲಿಗೆ ಎಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ ಅನ್ನೋದರ ಮೇಲೆಯೇ ಇಡೀ ಸಿನಿಮಾದ ಹೈಪ್ ಕ್ರಿಯೇಟ್ ಮಾಡಲಾಗುತ್ತಿದೆ. ಕಥೆಯಲ್ಲಿ ಯಾವುದೇ ದಮ್ ಇಲ್ಲದಿದ್ದರೂ ಪರವಾಗಿಲ್ಲ, ಹೀರೋಯಿನ್ ಮೈಮಾಟ ಪ್ರದರ್ಶನ ಮಾಡಿದರೆ ಸಾಕು ಥಿಯೇಟರ್‌ಗೆ ಜನ ನುಗ್ಗುತ್ತಾರೆ ಅನ್ನೋದು ಚಿತ್ರರಂಗದಲ್ಲಿ ಕೆಲವರಲ್ಲಿ ಇರುವ ವಿಕೃತ ನಂಬಿಕೆ.

Janhvi Kapoor s Leaked Peddi Chats Reveal She Opposed Objectification Ram Charan Backed Her Up

ಚಿತ್ರರಂಗದ ಇದೇ ಮಾನಸಿಕತೆಗೆ ''ಪೆದ್ದಿ'' ಸದ್ಯ ಕೈಗನ್ನಡಿ ಹಿಡಿದಿದ್ದು, ವಿವಾದ ಭುಗಿಲೆದ್ದಿದೆ. ಹಲವರು ನಿರ್ದೇಶಕ ಬುಚ್ಚಿ ಬಾಬು ವಿರುದ್ದ ಕಿಡಿ ಕಾರುತ್ತಿದ್ಧಾರೆ. ಹೆಣ್ಣೆಂದರೆ ಕೇವಲ ಭೋಗದ ವಸ್ತು ಅಲ್ಲ ಎಂದು ತಪರಾಕಿ ಹಾಕುತ್ತಿದ್ದಾರೆ.

ಆದರೆ, ಇದೇ ಸಮಯದಲ್ಲಿ ಜಾಹ್ನವಿ ಕಪೂರ್ ಸಾಮಾನ್ಯದವರಲ್ಲ. ಅತಿಲೋಕ ಸುಂದರಿ ಶ್ರೀದೇವಿಯ ಮಗಳು. ಖ್ಯಾತ ನಿರ್ಮಾಪಕ ಬೋನಿ ಕಪೂರ್ ಇವರ ತಂದೆ. ಈ ಹಿನ್ನೆಲೆ ಜಾಹ್ನವಿ ಕಪೂರ್ ಅವರನ್ನು ಬೆರಳ ತುದಿಯಲ್ಲಿ ಆಡಿಸಲು ಸಾಧ್ಯ ಇಲ್ಲ. ಒಪ್ಪಿಗೆ ಇಲ್ಲದೆ, ಕ್ಯಾಮರಾ ಎದೆಯ ಸುತ್ತ ಸುತ್ತುವ ಮಾತೇ ಇಲ್ಲ ಎನ್ನುವ ವಾದವನ್ನು ಕೂಡ ಕೆಲವರು ಮಾಡುತ್ತಿದ್ದು, ಜಾಹ್ನವಿ ಕಪೂರ್ ಅವರ ಸಮ್ಮತಿಯ ಮೇರೆಗೆ ಬುಚ್ಚಿ ಬಾಬು ಆ ತರಹದ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ ಎಂದು ಮಾತನಾಡುತ್ತಿದ್ಧಾರೆ. ವಿವಾದಕ್ಕೆ ಜಾಹ್ನವಿ ಕಪೂರ್ ಅವರೇ ನೇರ ಕಾರಣ ಎನ್ನುತ್ತಿದ್ಧಾರೆ.

ಇಂಟ್ರೆಸ್ಟಿಂಗ್ ಅಂದರೆ ಜಾಹ್ನವಿ ಕಪೂರ್, ತಮ್ಮ ಅಳಲನ್ನು ಹಿಂದೆ ಹಲವು ಬಾರಿ ತಂಡದ ಎದುರು ತೋಡಿಕೊಂಡಿದ್ದಾರೆ. ಆದರೆ, ಅವರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನು ಬುಚ್ಚಿ ಬಾಬು ನೀಡಿಲ್ಲ ಅನ್ನೋದು ಸದ್ಯ ಹೊರ ಬಿದ್ದಿರುವ ಜಾಹ್ನವಿ ಮಾತುಕಥೆಯ ಸ್ಕ್ರೀನ್ ಶಾಟ್‌ಗಳು ಸಾರಿ ಸಾರಿ ಹೇಳುತ್ತಿವೆ.

ಹೌದು, ಜಾಹ್ನವಿ ಕಪೂರ್ ಅವರದ್ದು ಎನ್ನಲಾದ ವಾಟ್ಸಾಪ್ ಸಂಭಾಷಣೆಯ ವಿವರ ಸದ್ಯ ಲೀಕ್ ಆಗಿದೆ. ಆ ಪ್ರಕಾರ ''ಪೆದ್ದಿ'' ವಿರುದ್ಧ ಮೊದಲಿಂದ ಜಾಹ್ನವಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮಗಾಗುತ್ತಿರುವ ಮುಜುಗರವನ್ನು ಇಲ್ಲಿ ಉಲ್ಲೇಖ ಮಾಡಿರುವ ಜಾಹ್ನವಿ ಕಪೂರ್ ಬುಚ್ಚಿ ಬಾಬು ಅವರ ವಿಕೃತ ದೃಷ್ಟಿಕೋನದ ವಿರುದ್ಧ ನೇರವಾಗಿಯೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

Janhvi Kapoor s Leaked Peddi Chats Reveal She Opposed Objectification Ram Charan Backed Her Up

ತಮ್ಮ ಆಪ್ತರ ಬಳಿ ಈ ಕುರಿತು ನೋವು ಹಂಚಿಕೊಂಡಿರುವ ಜಾಹ್ನವಿ, ಅವರು ಕ್ಯಾಮೆರಾವನ್ನು ನೇರವಾಗಿ ನನ್ನ ಎದೆಯ ಭಾಗದ ಮೇಲೆಯೇ ಇಡುತ್ತಾರೆ ಎಂದು ಬೇಸರದಿಂದ ಹೇಳಿದ್ದಾರೆ. ತನಗೆ ಇಷ್ಟವಿಲ್ಲದಿದ್ದರೂ ಕೇವಲ ಸೊಂಟ ಮತ್ತು ಎದೆಯ ಭಾಗವನ್ನೇ ಹೈಲೈಟ್ ಮಾಡುವ ಶಾರ್ಟ್ಸ್ ಮತ್ತು ಆಂಗಲ್‌ಗಳನ್ನ ಒತ್ತಾಯಪೂರ್ವಕವಾಗಿ ಚಿತ್ರೀಕರಿಸಲಾಗುತ್ತಿದೆ ಎಂದು ದೂರಿದ್ದಾರೆ.

ಇಷ್ಟೇ ಅಲ್ಲ ನಾನು ಇದಕ್ಕೆ ಒಪ್ಪದಿದ್ದಾಗ ಅವರಿಗೆ ನಿರಾಸೆಯಾಯ್ತು ಎಂದು ಹೇಳಿರುವ ಜಾಹ್ನವಿ, ರಾಮ್ ಚರಣ್ ಖುದ್ದು ಮಧ್ಯ ಪ್ರವೇಶಿಸಿ ಈ ತರಹದ ದೃಶ್ಯಗಳನ್ನು ಚಿತ್ರೀಕರಿಸದಂತೆ ಬುಚ್ಚಿ ಬಾಬುಗೆ ತಾಕೀತು ಮಾಡಿದ್ದಾರೆ ಎಂದು ಕೂಡ ಇಲ್ಲಿ ಹೇಳಿದ್ಧಾರೆ.

ರಾಮ್ ಚರಣ್ ಅವರ ಜಂಟಲ್ ಮ್ಯಾನ್' ಗುಣಗಳನ್ನು ಹೊಗಳುತ್ತಲೇ ಮಾತು ಮುಂದುವರೆಸಿರುವ ಜಾಹ್ನವಿ, ಯಾವಾಗಲೂ ನಾಯಕಿಯರಿಗೆ ಯಾಕೆ ಹೀಗಾಗುತ್ತೆ..? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಚಿತ್ರರಂಗದಲ್ಲಿ ಇದೆಲ್ಲವೂ ಮಾಮೂಲು ಎಂಬರ್ಥದಲ್ಲಿ ಮೆಸೇಜ್ ಮಾಡಿದ್ಧಾರೆ.

ಒಪ್ಪಿಗೆ ಇಲ್ಲದೇ ನಟಿಯ ಅಂಗಾಂಗಗಳನ್ನು ತೋರಿಸುವ ಇವರಿಗೆಲ್ಲಾ ಏನಾಗಿದೆ ಎಂದು ಕೂಡ ಪ್ರಶ್ನೆ ಮಾಡಿರುವ ಜಾಹ್ನವಿ ಕಪೂರ್, ಇದೇ ಸಮಯದಲ್ಲಿ ಶ್ರೀಲೀಲಾ ಸೇರಿ ಇನ್ನು ಕೆಲವರ ಜೊತೆ ಅವರ ತಾಯಿ ಸದಾ ಕಾಲ ಇರುತ್ತಾರೆ, ಜೊತೆಯಲ್ಲಿ ತಾಯಿ ಇರುವುದರಿಂದ ಇಂತಹ ವಿಷಯಗಳಲ್ಲಿ ತುಂಬಾ ವ್ಯತ್ಯಾಸಗಳಾಗುತ್ತವೆ ಎಂದು ಕೂಡ ತಮ್ಮ ಈ ಮಾತುಕಥೆಯಲ್ಲಿ ಹೇಳಿದ್ಧಾರೆ.

ಸದ್ಯ ಜಾಹ್ನವಿ ಕಪೂರ್ ಅವರ ಈ ಚಾಟ್ಸ್ ವೈರಲ್ ಆಗಿದ್ದು, ಸಿನಿಮಾ ಬ್ಯಾಕ್‌ಗ್ರೌಂಡ್ ಇರುವ ಒಬ್ಬ ಸ್ಟಾರ್ ಕಿಡ್‌ಗೂ ಕೂಡ ಇಂತಹ ಪರಿಸ್ಥಿತಿ ಎದುರಾಗಿದೆ ಎಂದರೆ, ಚಿತ್ರರಂಗದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಎಷ್ಟು ಕೀಳಾಗಿದೆ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Disclaimer : ವೈರಲ್ ಆಗಿರುವ ಈ ಸ್ಕ್ರೀನ್ ಶಾಟ್‌ಗಳು ಜಾಹ್ನವಿ ಕಪೂರ್ ಅವರದ್ದೇ ಎಂದು ಸ್ವತಂತ್ರವಾಗಿ ''ಫಿಲ್ಮಿಬೀಟ್ ಕನ್ನಡ'' ದೃಢಪಡಿಸುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಾಹ್ನವಿ ಕಪೂರ್ ಅಥವಾ ರಾಮ್ ಚರಣ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಚಿತ್ರತಂಡದ ಕಡೆಯಿಂದಲೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಈ ಚಾಟ್‌ ಲೀಕ್ ಸತ್ಯಾಸತ್ಯತೆ ಬಗ್ಗೆ ಇನ್ನೂ ಸ್ಪಷ್ಟನೆಯಿಲ್ಲ.

English summary
"What I'm dealing with..." Janhvi Kapoor's leaked WhatsApp chats about her 'Peddi' role and controversial camera angles go viral. Get the full scoop here.
Read more about: jhanvi kapoor tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X