'ಪೆದ್ದಿ' ಜೊತೆ ನಟಿಸಿ ವಿವಾದಕ್ಕೀಡಾದ ಜಾನ್ವಿ ಕಪೂರ್ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?

ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರದಲ್ಲಿ ನಾಯಕಿ ಪಾತ್ರ, ಅದನ್ನು ಚಿತ್ರಿಸಿರುವ ರೀತಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಈಗಾಗಲೇ ನಿರ್ದೇಶಕ ಬುಚ್ಚಿಬಾಬು ಕ್ಷಮೆ ಕೇಳಿ ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕುವುದಾಗಿ ಹೇಳಿದ್ದಾರೆ. ಆದರೂ ಚರ್ಚೆ ನಿಂತಿಲ್ಲ. ಆದರೆ ಜಾನ್ವಿ ಕಪೂರ್ ಮಾತ್ರ ವಿವಾದದ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.

ಇತ್ತೀಚೆಗೆ 'ಪೆದ್ದಿ' ಚಿತ್ರದ ಸಕ್ಸಸ್ ಮೀಟ್ ಕೂಡ ನಡೀತು. ರಾಮ್‌ಚರಣ್, ಬುಚ್ಚಿಬಾಬು, ಜಗಪತಿ ಬಾಬು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಿನಿಮಾ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಆದರೆ ಕಾರ್ಯಕ್ರಮಕ್ಕೆ ಜಾನ್ವಿ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅಂದಹಾಗೆ ತೆಲುಗಿನಲ್ಲಿ ಇದು ಆಕೆಯ 2ನೇ ಸಿನಿಮಾ. ಇದಕ್ಕೂ ಮುನ್ನ ಜ್ಯೂ. ಎನ್‌ಟಿಆರ್ ಜೊತೆ 'ದೇವರ' ಚಿತ್ರದಲ್ಲಿ ಶ್ರೀದೇವಿ ಪುತ್ರಿ ಮಿಂಚಿದ್ದರು. ಅಲ್ಲಿ ಕೂಡ ಗ್ಲಾಮರ್ ಬೊಂಬೆಯಾಗಿಯೇ ಕಾಣಿಸಿಕೊಂಡಿದ್ದರು.

Janhvi Kapoor s Remuneration for Peddi Revealed Amid Ongoing Controversy

'ಪೆದ್ದಿ' ಚಿತ್ರದಲ್ಲಿ ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ಜಾನ್ವಿ ನಟಿಸಿದ್ದಾರೆ. ಊರಿನ ರಾಜಕೀಯ ಮುಖಂಡನ ಮಗಳ ಪಾತ್ರ. ಬಹಳ ಬಜಾರಿ, ಜೋರು ಮಾಡುವ ಬಿಂದಾಸ್ ಹುಡುಗಿನ ಪಾತ್ರ ಅದು. ಲಂಗಾ ದಾವಣಿಯಲ್ಲೇ ಇಡೀ ಸಿನಿಮಾ ಕಾಣಿಸಿಕೊಂಡಿದ್ದಾರೆ. ಪದೇ ಪದೆ ದಾವಣಿ ತೆಗೆದು, ಮೈಮಾಟ ಪ್ರದರ್ಶಿಸುತ್ತಾ ಸುತ್ತಾಡುವಂತೆ ತೋರಿಸಲಾಗಿದೆ. ಯಾವ ಊರಿನಲ್ಲಿ ಹೆಣ್ಣು ಮಕ್ಕಳು ಹೀಗೆ ಓಡಾಡುತ್ತಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ.

ಮೊದಲ ಬಾರಿ ನಾಯಕಿಯನ್ನು ನಾಯಕ ನೋಡುವಾಗ ಕ್ಯಾಮರಾ ಕೋನ ಸರಿಯಾಗಿಲ್ಲ. ಆಕೆಯ ಮುಖದ ಅಂದಚೆಂದ ವರ್ಣಿಸುತ್ತಿದ್ದರೆ ಕ್ಯಾಮರಾ ಫೋಕಸ್ ಮಾತ್ರ ಎದೆ, ನಡುವಿನ ಸುತ್ತಾ ಇರುತ್ತದೆ. ಇನ್ನು ಆಕೆಯ ಅನುಮತಿ ಇಲ್ಲದೇ ನಾಯಕ 'ಪೆದ್ದಿ' ಹೋಗಿ ಕತ್ತಲಲ್ಲಿ ಮುತ್ತು ಕೊಟ್ಟು ಬರುವ ಸನ್ನಿವೇಶ ಕೂಡ ಚಿತ್ರದಲ್ಲಿದೆ. ಹೆಣ್ಣಿನ ಒಪ್ಪಿಗೆ ಇಲ್ಲದೇ ಆತ ಹೀಗೆ ಮಾಡುವುದು ಎಷ್ಟು ಸರಿ, ಅದನ್ನು ಹೀರೋಯಿಸಂ ರೀತಿ ಬಿಂಬಿಸುವುದು ಸರೀನಾ ಎನ್ನುವ ಟೀಕೆಗಳು ವ್ಯಕ್ತವಾಗ್ತಿದೆ.

Janhvi Kapoor s Remuneration for Peddi Revealed Amid Ongoing Controversy

ಬಾಲಿವುಡ್ ಅಂಗಳದಲ್ಲಿ ಜಾನ್ವಿಗೆ ಈವರೆಗೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಹಾಗಾಗಿ ತಾಯಿ ಶ್ರೀದೇವಿ ರೀತಿ ದಕ್ಷಿಣದಲ್ಲಿ ಗೆಲುವು ಸಿಗುತ್ತಾ ಎಂದು ಕಾಯುತ್ತಿದ್ದಾರೆ. 'ಪೆದ್ದಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸೋಕೆ 8 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ. ದೇವರ ಚಿತ್ರಕ್ಕಾಗಿ 5 ಕೋಟಿ ರೂ. ತೆಗೆದುಕೊಂಡಿದ್ದರು. ಆ ಸಿನಿಮಾ ಸೋತ್ರು 2ನೇ ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬರ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ಉತ್ತರ ಭಾರತದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಆಕೆಯನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿತ್ತು. ಆದರೆ ಆ ಲೆಕ್ಕಾಚಾರ ನಿಜವಾಗಲಿಲ್ಲ. ಉತ್ತರದಲ್ಲಿ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಕ್ಕಿಲ್ಲ.

ಚಿರಂಜೀವಿ ಹಾಗೂ ಶ್ರೀದೇವಿ ಸೂಪರ್ ಹಿಟ್ ಜೋಡಿ. ಇಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಜಗದೇಕ ವೀರುಡು ಅತಿಲೋಕ ಸುಂದರಿ' ಸಿನಿಮಾ ಆವರೆಗಿನ ಎಲ್ಲಾ ತೆಲುಗು ಸಿನಿಮಾಗಳ ದಾಖಲೆ ಮುರಿದಿತ್ತು. ಇದೀಗ ಚಿರು ಮಗ ಹಾಗೂ ಶ್ರೀದೇವಿ ಮಗಳು ಜೊತೆಯಾದರೆ ಕ್ರೇಜ್ ಹುಟ್ಟುತ್ತದೆ ಎನ್ನುವ ಕಾರಣಕ್ಕೂ ಇಬ್ಬರನ್ನು ಒಟ್ಟುಗೂಡಿಸುವ ಪ್ರಯತ್ನ ನಡೀತು. ಆದರೆ ಫಲಿತಾಂಶ ಮಾತ್ರ ಉಲ್ಟಾ ಆಗಿದೆ.

'ಪೆದ್ದಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 7 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 345 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ಬಿಟ್ಟರೆ ಉಳಿದ ಕಡೆಗಳಲ್ಲಿ ನಿರೀಕ್ಷೆ ಹುಸಿಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಪೂರ್ಣವಾಗಿ ಸಿನಿಮಾ ಗೆದ್ದಿಲ್ಲ. ಜಾನ್ವಿ ಕಪೂರ್ ಪಾತ್ರದ ವಿವಾದ ಕೂಡ ಚಿತ್ರಕ್ಕೆ ಪೆಟ್ಟು ಕೊಟ್ಟಿದೆ.

Read more about: janhvi kapoor ramcharan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X