twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ನಟ ರಾನಾ ದಗ್ಗುಬಾಟಿಗೆ ಜಪಾನ್ ನಲ್ಲೂ ಫ್ಯಾನ್ಸ್ ಇದ್ದಾರೆ ಕಣ್ರೀ.!

    |

    'ಲೀಡರ್' ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ರಾನಾ ದಗ್ಗುಬಾಟಿ ನ್ಯಾಷನಲ್ ಮತ್ತು ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡಿದ್ದು 'ಬಾಹುಬಲಿ' ಚಿತ್ರದ ಮೂಲಕ.

    'ಬಾಹುಬಲಿ' ಸಿನಿಮಾದಲ್ಲಿ ಬಲ್ಲಾಳದೇವನಾಗಿ ಅಬ್ಬರಿಸಿದ್ದ ರಾನಾ ದಗ್ಗುಬಾಟಿಗೆ ಭಾರತದಾದ್ಯಂತ ಮಾತ್ರ ಅಲ್ಲ.. ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. 'ಬಾಹುಬಲಿ-2' ಚಿತ್ರದ ಮೂಲಕ ಜಪಾನ್ ನಲ್ಲಿ ರಾನಾ ದಗ್ಗುಬಾಟಿಗೆ ಫ್ಯಾನ್ಸ್ ಸಂಖ್ಯೆ ದುಪ್ಪಟ್ಟಾಗಿದೆ.

    ಇತ್ತೀಚೆಗಷ್ಟೇ ರಾನಾ ದಗ್ಗುಬಾಟಿ 35ನೇ ವಸಂತಕ್ಕೆ ಕಾಲಿಟ್ಟರು. ರಾನಾ ದಗ್ಗುಬಾಟಿ ಹುಟ್ಟುಹಬ್ಬದ ಸಂಭ್ರಮ ಜಪಾನ್ ನಲ್ಲೂ ಜೋರಾಗಿಯೇ ಇತ್ತು.

    ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?

    japan-fans-celebrate-rana-daggubati-birthday

    ಜಪಾನ್ ನಲ್ಲಿ ಇರುವ ಅಭಿಮಾನಿ ದೇವರುಗಳು ರಾನಾ ದಗ್ಗುಬಾಟಿಯ ಜನ್ಮದಿನವನ್ನ ವಿಶಿಷ್ಟವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ರಾನಾ ದಗ್ಗುಬಾಟಿ ಕಟೌಟ್ ಗೆ ಹಾರ ಹಾಕಿ ಜಪಾನ್ ಫ್ಯಾನ್ಸ್ ಬರ್ತಡೇ ವಿಶ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ವಿದೇಶದಲ್ಲೂ ತಮಗಿರುವ ಅಭಿಮಾನಿಗಳನ್ನು ಕಂಡು ರಾನಾ ದಗ್ಗುಬಾಟಿ ಸಂತಸ ಪಟ್ಟಿದ್ದಾರೆ.

    ಅಂದ್ಹಾಗೆ, ಸದ್ಯ ರಾನಾ ದಗ್ಗುಬಾಟಿ ಕೈಯಲ್ಲಿ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ', 'ಹಾಥಿ ಮೇರೆ ಸಾಥಿ' ಚಿತ್ರಗಳಿವೆ.

    English summary
    Japan fans celebrate Rana Daggubati birthday.
    Tuesday, December 17, 2019, 10:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X