twitter
    For Quick Alerts
    ALLOW NOTIFICATIONS  
    For Daily Alerts

    'ಶ್ರೀದೇವಿ ಕಿಸ್ ಮಾಡಬಹುದು ಅಂತ ಮೌತ್ ವಾಷ್ ಮಾಡ್ಕೊಂಡೆ ಹೋಗಿದ್ದೆ' ಅಂದ ಆ ನಟ ಯಾರು?

    By ರವೀಂದ್ರ ಕೊಟಕಿ
    |

    'ಆಕೆ ದೇವಲೋಕದಿಂದ ಧರೆಗಿಳಿದು ಬಂದ ಅಪ್ಸರೆ. ಒಂದು ಸಲ ಬೋನಿಕಪೂರ್ ಮನೆಯಲ್ಲಿ ಸಾಧಾರಣ ಗೃಹಿಣಿಯಂತೆ ಆಕೆಯನ್ನು ನೋಡಿದಾಗ ಆಘಾತವಾಯಿತು. ದೇವಲೋಕದ ಕನ್ಯೆಯನ್ನು ಸಾಧಾರಣ ಗೃಹಿಣಿಯಂತೆ ಮಾಡಿದ ಬೋನಿಕಪೂರ್ ಮೇಲೆ ಕೆಟ್ಟ ಕೋಪ ಕೂಡ ಬಂತು' ಹೀಗಂತ ಬೋಲ್ಡ್ ಆಗಿ ಸ್ಟೇಟ್ಮೆಂಟ್ ಕೊಟ್ಟವರು ಮತ್ತ್ಯಾರು ಅಲ್ಲ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

    ರಾಮು, ಶ್ರೀದೇವಿಯ ಎಂತಹ ಅಭಿಮಾನಿ ಎಂಬುದು ಜಗಜ್ಜಾಹಿರವಾಗಿರುವ ಸಂಗತಿಯೆ. ಒಬ್ಬ ರಾಮ್ ಗೋಪಾಲ್ ವರ್ಮಾ ಅಂತಲ್ಲ, ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಆಕೆ ನಿಜಕ್ಕೂ ಕೂಡ ಅತಿಲೋಕ ಸುಂದರಿ, ಧರೆಗಿಳಿದ ಅಪ್ಸರೆ ಎಂಬ ಭಾವನೆ ಮನೆಮಾಡಿತ್ತು. ಶ್ರೀದೇವಿ ಭೌತಿಕವಾಗಿ ದೂರವಾಗಿ ಮೂರು ವರ್ಷಗಳೇ ಆಗಿದೆ, ಆದರೂ ಆಕೆಯ ಮೇಲಿನ ಅಭಿಮಾನವನ್ನು ಒಂದಲ್ಲ ಒಂದು ನಟ-ನಿರ್ದೇಶಕ

    ಯಾವುದಾದರೂ ಒಂದು ವೇದಿಕೆಯ ಮೇಲೆ ಎಕ್ಸ್ಪ್ರೆಸ್ ಮಾಡುತ್ತಲೇ ಬಂದಿದ್ದಾರೆ.

    ಹೌದು ಆಕೆಯನ್ನು ಅತಿಲೋಕ ಸುಂದರಿ ಎಂದರೆ ತಪ್ಪಾಗಲಾರದು. ಏಕೆಂದರೆ ಆಕೆ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದೇವಕನ್ಯೆ ಆಗಿದ್ದಳು. 1963ರಲ್ಲಿ ಜನಿಸಿದ ಈ ಚಿರುಯವ್ವನೇ ತನ್ನ ನಾಲ್ಕನೇ ವಯಸ್ಸಿನಲ್ಲೇ ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದಳು. ತಮಿಳು- ತೆಲುಗು- -ಕನ್ನಡ- ಮಲಯಾಳಂ ಚಿತ್ರರಂಗದಲ್ಲಿ ಬಾಲನಟಿಯಾಗಿ ಅಭಿನಯಿಸಿದ ಶ್ರೀದೇವಿ ತನ್ನ ಹದಿಮೂರನೇ ವಯಸ್ಸಿನಲ್ಲೇ ತಮಿಳಿನ 'ಮೂಂಡ್ರು ಮುಡಿಚು' ಚಿತ್ರದ ಮೂಲಕ ನಾಯಕ ನಟಿಯಾದಳು. '16 ವಯತಿನಿಲೆ' ಅದರ ತೆಲುಗು ವರ್ಷನ್ 'ಪದರೈಳ ವಯಸ್ಸು' ಚಿತ್ರಗಳ ಮೂಲಕ ದಕ್ಷಿಣ ಭಾರತ ಸಿನಿಮಾರಂಗದ ರಾಜಕುಮಾರಿ ಮಿಂಚಲು ಮುಂದಾದಳು. ಇಲ್ಲಿಂದ ಸತತವಾಗಿ ತೆಲುಗು ಮತ್ತು ತಮಿಳು ಚಿತ್ರರಂಗದ ನಂಬರ್ ಒನ್ ನಾಯಕ ನಟಿಯಾಗಿ ಶ್ರೀದೇವಿ ವಿಜೃಂಭಿಸಿದಳು.

    ಹಿಂದಿಯಲ್ಲೂ ಶ್ರೀದೇವಿ ಹವಾ

    ಹಿಂದಿಯಲ್ಲೂ ಶ್ರೀದೇವಿ ಹವಾ

    ಒಂದಡೆ ತೆಲುಗು-ತಮಿಳಿನಲ್ಲಿ ಮಿಂಚುತ್ತಿದ್ದ ಶ್ರೀದೇವಿ, ಇಲ್ಲಿನ ಸೂಪರ್ ಹಿಟ್ ಚಿತ್ರಗಳು ಹಿಂದಿಗೆ ರಿಮೇಕ್ ಆದ ಸಂದರ್ಭದಲ್ಲಿ ಮೂಲ ಸಿನಿಮಾದ ಕಥಾನಾಯಕಿ ಯಾದ ಶ್ರೀದೇವಿಯನ್ನು ರಿಮೇಕ್ ಚಿತ್ರದಲ್ಲಿ ಕೂಡ ನಾಯಕಿಯನ್ನಾಗಿ ಹಿಂದಿ ನಟ ಮತ್ತು ನಿರ್ಮಾಪಕರು ಉಳಿಸಿಕೊಳ್ಳುತ್ತಿದ್ದರು. ಹೀಗೆ ಹಿಂದಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ಮುಂದೆ 'ಹಿಮ್ಮತ್ವಾಲಾ', 'ತೋಫಾ', Mr. 'ಇಂಡಿಯಾ' 'ಚಾಂದಿನಿ', 'ಸದ್ಮ' 'ನಾಗಿನ್', 'ಖುದಾ ಗವಾ' ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳ ಮೂಲಕ ಅಕ್ಷರಶಃ

    1975ರಿಂದ 1990 ರವರಿಗೆ ಹಿಂದಿ ಚಿತ್ರರಂಗವನ್ನು ನಂಬರ್ ಒನ್ ನಟಿಯಾಗಿತನ್ನಿಷ್ಟದಂತೆ

    ಹಿಂದಿ ಸಿನಿಮಾ ರಂಗದ ದಿಗ್ಗಜರನ್ನು ಕೂಡ ಕುಣಿಸಿದಳು ತೆಲುಗು ಮನೆತನದ ಈ ಚೆಲುವೆ.

    ಅದೊಂದು ನಿಗೂಢ ಸಾವು

    ಅದೊಂದು ನಿಗೂಢ ಸಾವು

    1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದ ಶ್ರೀದೇವಿ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಮಕ್ಕಳಾದ ಮೇಲೆ ಕೆಲಕಾಲ ಸಿನಿಮಾರಂಗದಿಂದ ದೂರವಾಗಿದ್ದ ಶ್ರೀದೇವಿ 'ಇಂಗ್ಲಿಷ್-ವಿಂಗ್ಲಿಷ್' 'ಮಮ್ಮಿ' ಚಿತ್ರಗಳ ಮೂಲಕ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದರು.

    ಆದರೆ ದುರಂತ 2018 ರಲ್ಲಿ UAEಲ್ಲಿ 'ಮಿಸ್ಟೀರಿಯಸ್ ಡೆತ್' ಎಂಬುವಂತೆ ಹೋಟೆಲಿನ ಬಾತ್ ರೂಮ್ ನಲ್ಲಿ

    ನಿಧನಹೊಂದಿದರು. ತನ್ನ 55ನೇ ವಯಸ್ಸಿನಲ್ಲಿ ಜಗತ್ತನ್ನು ತೊರೆದು ಹೋದಳು. ಆದರೆ ದುರಂತವೆಂದರೆ ಆಕೆಯ ಸಾವು ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಅಸ್ಪಷ್ಟವಾದ ಅಥವಾ ಅಸಮಂಜಸವಾದ ಉತ್ತರಗಳು ಮಾತ್ರವೇ ಇಂದಿಗೂ ಉಳಿದು ಹೋಗಿದೆ.

    ಅಭಿಮಾನಿಗಳ ಹೃದಯದಲ್ಲಿ ಶಾಶ್ವತ

    ಅಭಿಮಾನಿಗಳ ಹೃದಯದಲ್ಲಿ ಶಾಶ್ವತ

    ವಿವಿಧ ಭಾಷೆಗಳ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅಭಿನಯ ತಾರೆ ಇಂದಿಗೂ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅತಿಲೋಕ ಸುಂದರಿಯಾಗಿಯೇ ನೆಲೆಗೊಂಡಿದ್ದಾಳೆ. ಇಂದಿಗೂ ಅನೇಕರು, ಅನೇಕ ಸಂದರ್ಭದಲ್ಲಿ ತಮ್ಮ ನೆಚ್ಚಿನ ಈ ಸುಂದರಿಯ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಆಕೆಯ ಬಗ್ಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈಗ ಇದರ ಸಾಲಿಗೆ ಮತ್ತೊಬ್ಬ ನಟನ ಮಾತುಗಳು ಕೂಡ ಈಗ ಸೇರ್ಪಡೆಯಾಗಿದೆ.

    ಆ ನಟ ಜೆಡಿ...

    ಆ ನಟ ಜೆಡಿ...

    ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಶಿವ' ಚಿತ್ರದ ವಿಲನ್ ಭವಾನಿ ಬೆಂಬಲದಿಂದ ಕಾಲೇಜಿನಲ್ಲಿ ಮಿಂಚುವ ರೌಡಿ ಪಡೆಯ ಪ್ರಮುಖ ಪಾತ್ರಧಾರಿಯಾಗಿ ಜೆಡಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದವರು. ಮೂಲ ಹೆಸರು ಜೆಡಿ ಚಕ್ರವರ್ತಿ, ಆದರೆ ಇಂದಿಗೂ 'ಜೆಡಿ' ಅಂತಲೇ ಜನಪ್ರಿಯ. ಅನೇಕ ಚಿತ್ರಗಳಲ್ಲಿ ಖಳನಟನಾಗಿ, ಎರಡನೇ ನಾಯಕನಾಗಿ, ನಾಯಕನಟನಾಗಿ ಮಿಂಚಿ ಕೊನೆಗೆ ಹಿಂದಿಯ 'ಸತ್ಯ' ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದ ಜೆಡಿ ಚಕ್ರವರ್ತಿ ತನ್ನ ನೆಚ್ಚಿನ ತಾರೆಯಾದ ಶ್ರೀದೇವಿ ಜೊತೆಗೆ 'ಕ್ಷಣಕ್ಷಣಂ' ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸುವ ಅವಕಾಶ ಸಿಕ್ಕಿತು. ಆದರೆ ಆಗ ಸಾಧಾರಣ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದ ಜೆಡಿಗೆ ಆ ಸಮಯದಲ್ಲಿ ಅತಿಲೋಕ ಸುಂದರಿ ಯನ್ನು ದೂರದಲ್ಲಿ ನಿಂತು ನೋಡುವುದೇ ದೊಡ್ಡ ಭಾಗ್ಯವಾಗಿತ್ತು.

    ಶ್ರೀದೇವಿನೇ ಕೊಟ್ಟಳು ಅತಿದೊಡ್ಡ ಕಂಪ್ಲೇಮೆಂಟ್

    ಶ್ರೀದೇವಿನೇ ಕೊಟ್ಟಳು ಅತಿದೊಡ್ಡ ಕಂಪ್ಲೇಮೆಂಟ್

    ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದ ಜೆಡಿ ಮುಂದೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಮನಿ' ಚಿತ್ರದಲ್ಲಿ ನಾಯಕನಟನಾಗಿ ನಟಿಸುವ ಅವಕಾಶ ಸಿಕ್ಕಿತು. ಚಿತ್ರ ಭರ್ಜರಿ ಯಶಸ್ಸು ಕೂಡ ಕಂಡಿತು. 'ಮನಿ' ಚಿತ್ರ ನೋಡಿದ ಶ್ರೀದೇವಿ ನಾನು ಇದುವರೆಗೆ ನೋಡಿದ ಇಬ್ಬರು ಬೆಸ್ಟ್ ಆಕ್ಟರ್ ಗಳಲ್ಲಿ ಈತ ಕೂಡ ಒಬ್ಬ ಅಂತ ಕಂಪ್ಲಿಮೆಂಟ್ ಕೊಟ್ಟರಂತೆ. ಈ ಸುದ್ದಿ ಜೆಡಿ ಕಿವಿಗೆ ಬಿದ್ದಿದ್ದೇ ತಡ ಶ್ರೀದೇವಿಯನ್ನು ನೇರವಾಗಿ ಭೇಟಿಯಾಗಲು ಶೂಟಿಂಗ್ ಸೆಟ್ಟಿಗೆ ಹೋಗಿ ಬಿಟ್ಟರಂತೆ.

    ಶ್ರೀದೇವಿಯನ್ನು ಭೇಟಿಯಾದಾಗ ನಡೆದದ್ದೇನು?

    ಶ್ರೀದೇವಿಯನ್ನು ಭೇಟಿಯಾದಾಗ ನಡೆದದ್ದೇನು?

    ಶ್ರೀದೇವಿ ಮೆಚ್ಚಿದ ಇಬ್ಬರೇ ಇಬ್ಬರು ನಟರಲ್ಲಿ ತಾನು ಒಬ್ಬನೆಂಬ ಹೆಮ್ಮೆಯಿಂದ ಅವಳ ಮುಂದೆ ಹೋಗಿ ನಿಂತು ಜೆಡಿ 'ಹಾಯ್ ಮೇಡಂ....' ಅಂತ ಹಲ್ಲುಕಿಸಿದರೆ ಅದಕ್ಕೆ ಯಾವುದೇ ರಿಯಾಕ್ಷನ್ ಕೊಡದೆ ಹೊರಟು ಹೋದಳಂತೆ ಸಹಜ ಸುಂದರಿ. 'ನನ್ನ ಬಗ್ಗೆ ಅಷ್ಟು ದೊಡ್ಡ ಕಾಂಪ್ಲಿಮೆಂಟ್ ಕೊಟ್ಟ ಅತಿಲೋಕ ಸುಂದರಿ ತನ್ನನ್ನು ಅಪ್ಪಿಕೋಬಹುದು, ಇಲ್ಲ ಕನಿಷ್ಠ ಒಂದು ಕಿಸ್ ಆದರೂ ಮಾಡಬಹುದು ಅಂತ ಭಾವಿಸಿದ್ದೆ.

    ಅದಕ್ಕಾಗಿಯೇ ಆಕೆಯನ್ನು ಭೇಟಿ ಮಾಡುವುದಕ್ಕೆ ಹೊರಡುವ ಮೊದಲು ಮೌತ್ ವಾಷ್ ಕೂಡ ಮಾಡಿಕೊಂಡಿದ್ದೆ, ಆದರೂ ನೆಚ್ಚಿನ ತಾರೆಯಿಂದ ನಿರಾಸೆಯೇ ಉಳಿದುಹೋಯಿತು' ಅಂತ ಹಾಸ್ಯದ ದಾಟಿಯಲ್ಲಿ ಹೇಳುತ್ತಾ ಆ ದಿನದ ಘಟನೆಯನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದಾರೆ ಜೆಡಿ.

    English summary
    Actor JD Chakravarthy recalled a incident when he met actress Sridevi. He said I was expecting Sridevi may kiss me but she didn't even response.
    Friday, October 1, 2021, 16:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X