ಮತ್ತೊಂದು ತೆಲುಗು ಸಿನಿಮಾ ಆರಂಭಿಸಿದ ನೀಲ್; ರಿಲೀಸ್ ಡೇಟ್ ಕೇಳಿ ಫ್ಯಾನ್ಸ್ ಸುಸ್ತು

'ಸಲಾರ್' ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಕುತೂಹಲ ಇತ್ತು. ಕೊನೆಗೂ ಆ ಕುತೂಹಲಕ್ಕೆ ತೆರೆ ಬಿದ್ದಿದೆ. 'ಸಲಾರ್'-2 ಕೂಡ ಶೀಘ್ರದಲ್ಲೇ ಸೆಟ್ಟೇರುತ್ತದೆ ಎಂದು ನೀಲ್ ಹೇಳಿದ್ದೇ ಗೊಂದಲಕ್ಕೆ ಕಾರಣವಾಗಿತ್ತು. ಕಾರಣ ಮೂರ್ನಾಲ್ಕು ವರ್ಷಗಳ ಹಿಂದೆ ಘೋಷಣೆ ಆಗಿದ್ದ ಎನ್‌ಟಿಆರ್ ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ಎದ್ದಿತ್ತು.

ಜ್ಯೂ. ಎನ್‌ಟಿಆರ್ ಮುಂದಿನ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಜೊತೆ ಸಿನಿಮಾ ರಿಲೀಸ್ ಡೇಟ್ ಸಹ ಘೋಷಣೆ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಆಕ್ಷನ್ ಎಂಟರ್‌ಟ್ರೈನರ್ ಸಿನಿಮಾ ಮೂಡಿ ಬರಲಿದೆ. ತಾರಕ್ ಮಡದಿ ಮಕ್ಕಳು ಹಾಗೂ ನೀಲ್ ಪತ್ನಿ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು.

Jr NTR and Prashanth neel Movie Launched with a Pooja Ceremony

ಸ್ವತಃ ಜ್ಯೂ. ಎನ್‌ಟಿಆರ್ ಇನ್ನು ಹೆಸರಿಡದ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ತಾರಕ್ ಪತ್ನಿ ಹಾಗೂ ನೀಲ್ ಪತ್ನಿ ಕ್ಯಾಮರಾ ಸ್ವಿಚ್ ಆನ್ ಮಾಡಿ ಚಾಲನೆ ಕೊಟ್ಟರು. ಚಿತ್ರತಂಡದ ಸದಸ್ಯರು ಹಾಗೂ ಆಪ್ತರು ಮಾತ್ರ ಮುಹೂರ್ತ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಉಳಿದಂತೆ ಯಾರಿಗೂ ಆಹ್ವಾನ ಇರಲಿಲ್ಲ. 'ಉಗ್ರಂ', 'ಕೆಜಿಎಫ್', 'ಸಲಾರ್' ರೀತಿಯಲ್ಲೇ ಮತ್ತೊಂದು ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ನೀಲ್ ತಯಾರಿ ನಡೆಸಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.

ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. 'ಡ್ರ್ಯಾಗನ್' ಎನ್ನುವ ಟೈಟಲ್ ಚಾಲ್ತಿಯಲ್ಲಿದೆ. ಇದೇ ಟೈಟಲ್‌ನಲ್ಲಿ ಸಿನಿಮಾ ಬರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಚಿತ್ರತಂಡ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಜ್ಯೂ. ಎನ್‌ಟಿಆರ್ ಬಹಳ ಇನ್‌ಟೆನ್ಸ್ ಆಕ್ಟರ್. ಸದ್ಯ 'ದೇವರ' ಚಿತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ ಕೊನೆಗೆ ಈ ಸಿನಿಮಾ ತೆರೆಗೆ ಬರಲಿದೆ. ಬಳಿಕ 'ವಾರ್-2' ಚಿತ್ರದಲ್ಲಿ ಹೃತಿಕ್ ರೋಷನ್ ಎದುರು ಅಬ್ಬರಿಸಲಿದ್ದಾರೆ. ಆ ಬಳಿಕ ನೀಲ್ ಸಿನಿಮಾ ಬರಲಿದೆ.

Jr NTR and Prashanth neel Movie Launched with a Pooja Ceremony

'ದೇವರ' ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ಮುಂದಿನ ವರ್ಷ ಬಾಲಿವುಡ್ ಸಿನಿಮಾ 'ವಾರ್-2' ರಿಲೀಸ್ ಆಗಲಿದೆ. 2026ರ ಜನವರಿ 9ಕ್ಕೆ ನೀಲ್- ತಾರಕ್ ಸಿನಿಮಾ ತೆರೆಗಪ್ಪಳಿಸಲಿದೆ. ಮುಹೂರ್ತ ಸಮಾರಂಭದಲ್ಲೇ ಈ ವಿಚಾರ ರಿವೀಲ್ ಆಗಿದೆ. ಅಂದರೆ ಈ ಬಹುನಿರೀಕ್ಷಿತ ಸಿನಿಮಾ ನೋಡಲು ಇನ್ನು ಒಂದೂವರೆ ವರ್ಷ ಕಾಯಬೇಕು. ಇದನ್ನು ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಹೊಸ ಚಿತ್ರಕ್ಕೂ ಪ್ರಶಾಂತ್ ನೀಲ್ ಹಳೇ ತಂಡವೇ ಮುಂದುವರೆಯಲಿದೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ ಇರಲಿದೆ. ಅವರಿಬ್ಬರು ಮುಹೂರ್ತ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕಾರ್ಯಕ್ರಮ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ.

ಪ್ರಶಾಂತ್ ನೀಲ್ 'ಸಲಾರ್-2' ಸಿನಿಮಾ ಕೂಡ ಮಾಡಬೇಕಿದೆ. ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ನೀಲ್ ಇತ್ತ ತಾರಕ್ ಚಿತ್ರಕ್ಕೆ ಕೈ ಹಾಕಿದ್ದಾರೆ. 'KGF' ಸರಣಿಯಿಂದ ಅವರು ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದರು. ಹಾಗಾಗಿ ತೆಲುಗಿನ ಸ್ಟಾರ್ ನಟರ ಜೊತೆ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಮತ್ತಷ್ಟು ದೊಡ್ಡ ದೊಡ್ಡ ಸಿನಿಮಾಗಳಿಗೆ ನೀಲ್ ಪ್ಲ್ಯಾನ್ ಮಾಡುತ್ತಿದ್ದಾರೆ.

More from Filmibeat

English summary
After Salaar director Prashanth neel join hands with Jr NTR
Read more about: ntr prashanth neel telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X