'RRR' ಸಿನಿಮಾದ ಪ್ರಮುಖ ದೃಶ್ಯ ಲೀಕ್: ಸಿಟ್ಟಾದ ರಾಜಮೌಳಿ

Recommended Video

ಅವರ ದುಡ್ಡಲ್ಲಿ ಫ್ರೀ ಊಟ ಮಾಡೊ ನಮ್ಮದು ಒಂದು ಜನ್ಮಾನ..? | SWIGGY | ZOMATO | UBEREATS | DUNZO | DELIVERY BOY

ದಕ್ಷಿಣ ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಆರ್ ಆರ್ ಆರ್ ಸಿನಿಮಾದ ಪ್ರಮುಖ ದೃಶ್ಯ ಲೀಕ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾ ಈಗ ಸೋರಿಕೆ ಸಮಸ್ಯೆಯನ್ನು ಎದುರಿಸುತ್ತಿದೆ.

ಚಿತ್ರದ ಜೂ. ಎನ್ ಟಿ ಆರ್ ಎಂಟ್ರಿ ದೃಶ್ಯ ಲೀಕ್ ಆಗಿದೆ. ಪ್ರಮುಖ ಸೀನ್ ಲೀಕ್ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡಿರುವ ಚಿತ್ರತಂಡ ಎಲ್ಲ ಸ್ಕ್ರೀನ್ ಶಾಟ್ ಮತ್ತು ಲೀಕ್ ಆದ ವಿಡಿಯೋವನ್ನು ಡಿಲಿಟ್ ಮಾಡಿಸಿದೆ. ಹಾಗಾಗಿ ಲೀಕ್ ಆದ ದೃಶ್ಯ ಈಗ ಎಲ್ಲಿಯೂ ಲಭ್ಯವಾಗುತ್ತಿಲ್ಲ. ಅಂದ್ಹಾಗೆ ಜ್ಯು.ಎನ್ ಟಿ ಆರ್ ಸಿಂಹದ ಜೊತೆ ಫೈಟ್ ಮಾಡುತ್ತಿರುವ ದೃಶ್ಯ ಲೀಕ್ ಆಗಿದ್ದು, ಜೂ. ಎನ್ ಟಿ ಆರ್ ಟಾರ್ಜನ್ ಹಾಗೆ ಕಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ತಂಡದ ಮೇಲೆ ಸಿಟ್ಟಾದ ರಾಜಮೌಳಿ

ತಂಡದ ಮೇಲೆ ಸಿಟ್ಟಾದ ರಾಜಮೌಳಿ

ಸಿನಿಮಾ ದೃಶ್ಯ ಲೀಕ್ ಆಗಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ ರಾಜಮೌಳಿ ತಂಡದ ಮೇಲೆ ಫುಲ್ ಗರಂ ಆಗಿದ್ದರಂತೆ. ಕಷ್ಟಪಟ್ಟು, ಶ್ರಮವಹಿಸಿ ಚಿತ್ರೀಕರಿಸಿದ ದೃಶ್ಯ ಲೀಕ್ ಆಗಿದ್ದು ನೋಡಿ ಸಿಟ್ಟಾದ ಮೌಳಿ ಈಗ ತಂಡದಲ್ಲಿ ಬಿಗಿ ಭದ್ರತೆ ಹೆಚ್ಚಿಸಿದ್ದಾರಂತೆ. ಎಡಿಟಿಂಗ್ ರೂಮ್ ನಲ್ಲಿ ಹೆಚ್ಚು ಭದ್ರತೆ ಮಾಡಿದ್ದಾರಂತೆ. ಚಿತ್ರೀಕರಣ ಸೆಟ್ ನಲ್ಲಿ ಯಾರು ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ್ದಾರಂತೆ. ಪ್ರತಿಯೊಬ್ಬರನ್ನು ಪರೀಕ್ಷಿಸಿ ಸೆಟ್ ಒಳಗೆ ಬಿಡಲಾಗುತ್ತಿದೆಯಂತೆ.

ಮಗಧೀರ- ಈಗ ಸಿನಿಮಾ ದೃಶ್ಯ ಲೀಕ್ ಆಗಿತ್ತು

ಮಗಧೀರ- ಈಗ ಸಿನಿಮಾ ದೃಶ್ಯ ಲೀಕ್ ಆಗಿತ್ತು

ರಾಜಮೌಳಿಗೆ ಈ ಸಮಸ್ಯೆ ಎದುರಾಗುತ್ತಿರುವುದು ಇದೆ ಮೊದಲೇನಲ್ಲ. ಈ ಹಿಂದೆ 'ಮಗಧೀರ' ಮತ್ತು 'ಈಗ' ಸಿನಿಮಾ ಚಿತ್ರೀಕರಣ ವೇಳೆಯೂ ಪ್ರಮುಖ ದೃಶ್ಯಗಳು ಲೀಕ್ ಆಗಿತ್ತು. ಆಗಲು ರಾಜಮೌಳಿ ತಂಡದ ಮೇಲೆ ಸಿಟ್ಟಾಗಿದ್ದರಂತೆ. ಈಗ ಮತ್ತದೆ ಸಮಸ್ಯೆ ಎದುರಾಗಿದ್ದು ಕಟ್ಟುನಿಟ್ಟಿನ ಕ್ರಮ ಕೈಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊನೆಯ ಹಂತದ ಚಿತ್ರೀಕರಣ

ಕೊನೆಯ ಹಂತದ ಚಿತ್ರೀಕರಣ

ಆರ್ ಆರ್ ಆರ್ ಸಿನಿಮಾ ಚಿತ್ರೀಕರಣ ಸದ್ಯ ಕೊನೆಯ ಹಂತಕ್ಕೆ ಬಂದಿದ್ದು, ಮಾರ್ಚ್ ನಲ್ಲಿ ಚಿತ್ರೀಕರಣ ಎಲ್ಲಾ ಮುಗಿಸಿ ಪ್ರಮೋಷನ್ ಪ್ರಾರಂಭಿಸುವ ಸಾಧ್ಯತೆ ಇದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಇದಾಗಿದ್ದು ಇದುವರೆಗೂ ಚಿತ್ರದಿಂದ ಒಂದು ಫೋಟೋ ಕೂಡ ರಿಲೀಸ್ ಮಾಡಿಲ್ಲ ಚಿತ್ರತಂಡ. ಆದರೀಗ ದೃಶ್ಯ ಲೀಕ್ ಆಗುತ್ತಿರುವುದು ಸಿನಿಮಾ ತಂಡಕ್ಕೆ ದೊಡ್ಡ ತಲೆನೋವಾಗಿದೆ.

ಅಜಯ್ ದೇವಗನ್ ಎಂಟ್ರಿ

ಅಜಯ್ ದೇವಗನ್ ಎಂಟ್ರಿ

ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಅಭಿನಯಿಸುತ್ತಿದ್ದಾರೆ. ಈಗಾಗಲೆ ಅಜಯ್ ದೇವಗನ್ ಚಿತ್ರತಂಡ ಸೇರಿಕೊಂಡಿದ್ದಾರೆ. ನಾಯಕಿಯಾಗಿ ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಬಣ್ಣಹಚ್ಚಿದ್ದಾರೆ. ಇನ್ನು ಬ್ರಿಟಿಷ್ ನಟಿ ಒಲಿವಿಯಾ ಮೋರಿಸ್ ಕೂಡ ಆರ್ ಆರ್ ಆರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Jr. NTR and Ram Charan starrer RRR movie important Scene leaked. tight security at RRR movie set after leaked important scene.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X