For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌ ಚಿತ್ರದ ಜೊತೆಯೇ ತ್ರಿವಿಕ್ರಮ್ ಚಿತ್ರ ಆರಂಭಿಸುತ್ತಿರುವ ಎನ್‌ಟಿಆರ್

  |

  ಜೂನಿಯರ್ ಎನ್ ಟಿ ಆರ್ ಮತ್ತು ತೆಲುಗಿನ ಸಕ್ಸಸ್ ಫುಲ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಈ ಹಿಂದೆಯೇ ಪ್ರಕಟವಾಗಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಆರ್ ಆರ್ ಆರ್ ಸಿನಿಮಾ ಮುಗಿದು ತ್ರಿವಿಕ್ರಮ್ ಸಿನಿಮಾ ಶುರುವಾಗುತ್ತಿತ್ತು.

  ಆದರೆ, ಕೊರೊನಾದಿಂದ ಲೆಕ್ಕಾಚಾರ ಸ್ವಲ್ಪ ಉಲ್ಟಾಪಲ್ಟ ಆಗಿತ್ತು. ಇದೀಗ, ಎನ್‌ಟಿಆರ್ ಮತ್ತು ತ್ರಿವಿಕ್ರಮ್ ಚಿತ್ರದ ಕುರಿತು ಅಪ್‌ಡೇಟ್ ಸಿಕ್ಕಿದೆ. ಆರ್‌ಆರ್‌ಆರ್ ಪ್ರಾಜೆಕ್ಟ್ ಜೊತೆ ಜೊತೆಯೇ ಈ ಸಿನಿಮಾವನ್ನು ಆರಂಭಿಸಲು ತೀರ್ಮಾನಿಸಿದಂತಿದೆ.

  ಇತ್ತೀಚಿಗಷ್ಟೆ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಜೂನಿಯರ್ ಎನ್‌ಟಿಆರ್ ಭೇಟಿ ಮಾಡಿದ್ದು, ''ಆದಷ್ಟೂ ಬೇಗ ಸಿನಿಮಾ ಆರಂಭಿಸುತ್ತಿದ್ದೇವೆ'' ಎಂದು ತಿಳಿಸಿದ್ದಾರೆ. ಹಾರಿಕಾ ಮತ್ತು ಹಸೈನ್ ಕ್ರಿಯೇಷನ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, 2021ರಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.

  ಆರ್‌ಆರ್‌ಆರ್‌ ಸಿನಿಮಾದ ಹೊಸ ಬಿಡುಗಡೆ ದಿನಾಂಕ!ಆರ್‌ಆರ್‌ಆರ್‌ ಸಿನಿಮಾದ ಹೊಸ ಬಿಡುಗಡೆ ದಿನಾಂಕ!

  2018ರಲ್ಲಿ ಬಿಡುಗಡೆಯಾಗಿದ್ದ 'ಅರವಿಂದ ಸಮೇರ ವೀರ ರಾಘವ' ಚಿತ್ರದ ಯಶಸ್ಸಿನ ಬಳಿಕ ಎನ್‌ಟಿಆರ್ ಮತ್ತು ತ್ರಿವಿಕ್ರಮ್ ಎರಡನೇ ಬಾರಿ ಸಿನಿಮಾ ಮಾಡ್ತಿದ್ದಾರೆ. ಹಾಗಾಗಿ, ಈ ಕಾಂಬಿನೇಷನ್‌ನ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.ಈ ಕಡೆ ಎಸ್ ಎಸ್ ರಾಜಮೌಳಿ ನಿರ್ದೇಶಿಸುತ್ತಿರುವ ಆರ್ ಆರ್ ಆರ್ ಚಿತ್ರದಲ್ಲಿ ಎನ್‌ಟಿಆರ್ ನಟಿಸುತ್ತಿದ್ದಾರೆ. ಈ ಚಿತ್ರ ಶೂಟಿಂಗ್ ಇನ್ನು ಮುಗಿದಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಚಿತ್ರದ ಮತ್ತೊಬ್ಬ ನಟ ರಾಮ್ ಚರಣ್ ತೇಜ ಅವರಿಗೆ ಕೊರೊನಾ ವೈರಸ್ ತಗುಲಿದೆ. ಈ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ.

  RRR ಸಿನಿಮಾಕ್ಕಾಗಿ ಪಟ್ಟ ಕಷ್ಟ ಹೇಳಿಕೊಂಡ ಆಲಿಯಾ ಭಟ್RRR ಸಿನಿಮಾಕ್ಕಾಗಿ ಪಟ್ಟ ಕಷ್ಟ ಹೇಳಿಕೊಂಡ ಆಲಿಯಾ ಭಟ್

  ತ್ರಿವಿಕ್ರಮ್ ಶ್ರೀನಿವಾಸ್ ಸಹ ಕಳೆದ ವರ್ಷ ಅಲ್ಲು ಅರ್ಜುನ್ ಜೊತೆ ಅಲಾ ವೈಕುಂಠಪುರಂಲೋ ಎಂಬ ಸೂಪರ್ ಹಿಟ್ ಚಿತ್ರ ನೀಡಿದ್ದರು. ಈಗ ಎನ್‌ಟಿಆರ್ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.

  English summary
  Telugu actor Jr NTR and director Trivikram Srinivas's new film to start soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X