ಹೊಸ ಫಾರ್ಮ್‌ಹೌಸ್ ಖರೀದಿಸಿದ ಜೂ ಎನ್‌ಟಿಆರ್: ಹೆಸರೇನು ಗೊತ್ತೆ?

ಜೂ ಎನ್‌ಟಿಆರ್ ತೆಲುಗು ಚಿತ್ರರಂಗದ ಅತ್ಯಂತ ದುಬಾರಿ ನಟ. 'RRR' ಸಿನಿಮಾದ ಬಳಿಕವಂತೂ ಜೂ ಎನ್‌ಟಿಆರ್‌ಗೆ ದೊಡ್ಡ ಮಟ್ಟದ ಬೇಡಿಕೆ ಒದಗಿ ಬಂದಿದೆ. ಸಂಭಾವನೆಯೂ ಹೆಚ್ಚಾಗಿದೆ.

ಜೂ ಎನ್‌ಟಿಆರ್ ಕೇವಲ ಅತ್ಯಂತ ದುಬಾರಿ ನಟ ಮಾತ್ರವಲ್ಲ ಶ್ರೀಮಂತ ನಟ ಸಹ ಹೌದು. ಸಾಕಷ್ಟು ಉದ್ದಿಮೆಗಳಲ್ಲಿ ಜೂ ಎನ್‌ಟಿಆರ್ ಬಂಡವಾಳ ಹೂಡಿದ್ದಾರೆ. ಐಶಾರಾಮಿ ಮನೆ, ಕಾರು ಹೊಂದಿದ್ದಾರೆ. ತಮ್ಮ ಕಾರಿನ ನೊಂದಣಿ ಸಂಖ್ಯೆಗೆ ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ ಜೂ ಎನ್‌ಟಿಆರ್.

ತೆಲುಗು ಸಿನಿಮಾ ನಟರ ಹಳೆಯ ಅಭ್ಯಾಸವೆಂದರೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು. ತೆಲುಗಿನ ಹಿರಿಯ ನಟ ಶೋಭನ್ ರಾಜ್ ಈ ಹಾದಿ ಕೊಟ್ಟವರಂತೆ. ಶೋಭನ್ ರಾಜ್ ದೊಡ್ಡ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಬಂಡವಾಳ ಹೂಡಿ ಗೆದ್ದವರು. ಹಾಗಾಗಿ ಹಲವು ತೆಲುಗು ನಟರು ರಿಯಲ್ ಎಸ್ಟೇಟ್‌ ಅನ್ನು ನಂಬುತ್ತಾರೆ ಹೂಡಿಕೆ ಮಾಡುತ್ತಾರೆ.

ಉದ್ಯಮಿಯೂ ಹೌದು ಜೂ ಎನ್‌ಟಿಆರ್

ಉದ್ಯಮಿಯೂ ಹೌದು ಜೂ ಎನ್‌ಟಿಆರ್

ಈಗಾಗಲೇ ಸಾಕಷ್ಟು ಆಸ್ತಿ ಹೊಂದಿರುವ ನಟ ಜೂ ಎನ್‌ಟಿಆರ್, ಇದೀಗ ಮತ್ತೆ ರಿಯಲ್ ಎಸ್ಟೇಟ್‌ ಮೇಲೆ ಹೂಡಿಕೆ ಮಾಡಿದ್ದಾರೆ. ಹೊಸ ಫಾರ್ಮ್ ಹೌಸ್ ಒಂದನ್ನು ಖರೀದಿಸಿದ್ದಾರೆ. ಅಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಮನೆ, ಮೂಲಸೌಕರ್ಯಗಳನ್ನು ಮಾಡಿಸಿಕೊಂಡಿದ್ದಾರೆ. ನಗರಕ್ಕೆ ಹತ್ತಿರವಾಗಿರುವ ಸ್ಥಳದಲ್ಲಿಯೇ ವಿಶಾಲ ವಿಸ್ತೀರ್ಣದಲ್ಲಿ ಈ ಫಾರ್ಮ್‌ ಹೌಸ್‌ ಅನ್ನು ನಿರ್ಮಿಸಿದ್ದಾರೆ ಜೂ ಎನ್‌ಟಿಆರ್.

6.5 ಎಕರೆ ಪ್ರದೇಶದಲ್ಲಿ ಫಾರ್ಮ್‌ ಹೌಸ್

6.5 ಎಕರೆ ಪ್ರದೇಶದಲ್ಲಿ ಫಾರ್ಮ್‌ ಹೌಸ್

ಹೈದರಾಬಾದ್‌ ಬಳಿಯ ಶಿವಾರ್ ಎಂಬಲ್ಲಿ ಕಳೆದ ವರ್ಷವೇ ಸುಮಾರು 20 ಎಕರೆ ಭೂಮಿಯನ್ನು ಜೂ ಎನ್‌ಟಿಆರ್ ಖರೀದಿಸಿದ್ದರು. ಅದರಲ್ಲಿ ಸುಮಾರು 6.5 ಎಕರೆ ಪ್ರದೇಶದಲ್ಲಿ ವಿಶಾಲವಾದ ಫಾರ್ಮ್‌ ಅನ್ನು ನಿರ್ಮಾಣ ಮಾಡಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯೊಂದನ್ನು ಸಹ ನಿರ್ಮಾಣ ಮಾಡಿದ್ದಾರೆ. ಈ ಫಾರ್ಮ್‌ ಹೌಸ್‌ನಲ್ಲಿ ಹಲವು ವಿಧವಾದ ಹೂ, ಹಣ್ಣು, ತರಕಾರಿ ಗಿಡಗಳನ್ನು ಒಳಗೊಂಡ ತೋಟ. ಮರಗಳು, ಫೌಂಟೇನ್ ಎಲ್ಲವೂ ಇದೆ ಎನ್ನಲಾಗಿದೆ.

ಸುಂದರ ಹೆಸರಿಟ್ಟಿರುವ ಜೂ ಎನ್‌ಟಿಆರ್

ಸುಂದರ ಹೆಸರಿಟ್ಟಿರುವ ಜೂ ಎನ್‌ಟಿಆರ್

ಈ ಫಾರ್ಮ್‌ ಹೌಸ್‌ಗೆ ಜೂ ಎನ್‌ಟಿಆರ್ ಇಟ್ಟಿರುವ ಹೆಸರು ಅಭಿಮಾನಿಗಳ ಮನ ಗೆದ್ದಿದೆ. ಈ ಫಾರಂ ಹೌಸ್‌ಗೆ 'ಬೃಂದಾವನಂ' ಎಂದು ಜೂ ಎನ್‌ಟಿಆರ್ ಹೆಸರಿಟ್ಟಿದ್ದಾರೆ. 'ಬೃಂದಾವನಂ' ಎಂದರೆ ನಂದನವನ ಎಂಬರ್ಥ ತೆಲುಗಿನಲ್ಲಿದೆ ಜೊತೆಗೆ ಇದೇ ಹೆಸರಿನ ಸಿನಿಮಾದಲ್ಲಿ ಸ್ವತಃ ಜೂ ಎನ್‌ಟಿಆರ್ ನಟಿಸಿದ್ದರು. 2010 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಕಾಜಲ್, ಸಮಂತಾ, ಪ್ರಕಾಶ್ ರೈ, ಕೊಟಾ ಶ್ರೀನಿವಾಸ ರಾವ್ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದರು.

ಇಬ್ಬರು ಹಿಟ್ ನಿರ್ದೇಶಕರೊಟ್ಟಿಗೆ ಸಿನಿಮಾ

ಇಬ್ಬರು ಹಿಟ್ ನಿರ್ದೇಶಕರೊಟ್ಟಿಗೆ ಸಿನಿಮಾ

ಜೂ ಎನ್‌ಟಿಆರ್ ಹಲವು ಸಿನಿಮಾಗಳಲ್ಲಿ ಪ್ರಸ್ತುತ ಬ್ಯುಸಿಯಾಗಿದ್ದಾರೆ. 'RRR' ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿರುವ ಜೂ ಎನ್‌ಟಿಆರ್ ಇದೀಗ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಹಿಂದಿ ಸಿನಿಮಾ ಒಂದರಲ್ಲಿ ಜೂ ಎನ್‌ಟಿಆರ್ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಆದರೆ ಅದಿನ್ನೂ ಖಾತ್ರಿಯಾಗಿಲ್ಲ.

More from Filmibeat

English summary
Tollywood star actor Jr NTR bought land near Hyderabad and built a Farm house. He named it on his hit movie Brindavanam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X