For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್‌ಗೆ ಬರ್ಥಡೇ ಗಿಫ್ಟ್ ನೀಡುತ್ತೇನೆಂದು ಕೊಟ್ಟ ಮಾತು ತಪ್ಪಿದ ಎನ್‌ಟಿಆರ್

  |

  ತೆಲುಗಿನ ನಟ ರಾಮ್ ಚರಣ್ 35ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಅವರಿಗೆ ತಾರೆಯರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಲಾಕ್ ಡೌನ್ ಕಾರಣ ಅವರ ಜನ್ಮದಿನದ ಸಂಭ್ರಮಾಚರಣೆ ನಡೆಯುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿಯೇ ಅವರಿಗೆ ಶುಭ ಹಾರೈಸುವ, ಉಡುಗೊರೆ ನೀಡುವ ಚಟುವಟಿಕೆಗಳು ನಡೆಯುತ್ತಿವೆ.

  ರಾಮ್ ಚರಣ್, ಎಸ್ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್ಆರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಎರಡು ದಿನಗಳ ಹಿಂದೆ 'ಆರ್ಆರ್ಆರ್' ಚಿತ್ರತಂಡ ಮೊದಲ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಗ ಉಡುಗೊರೆ ನೀಡಿತ್ತು.

  ಟ್ವಿಟ್ಟರ್ ಲೋಕದಲ್ಲಿ ರಾಮ್ ಚರಣ್: 'ಸಿಂಹವನ್ನು ಅನುಸರಿಸಿದ ಮರಿ ಸಿಂಹ'ಟ್ವಿಟ್ಟರ್ ಲೋಕದಲ್ಲಿ ರಾಮ್ ಚರಣ್: 'ಸಿಂಹವನ್ನು ಅನುಸರಿಸಿದ ಮರಿ ಸಿಂಹ'

  ಈ ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕೂಡ ಅಭಿನಯಿಸುತ್ತಿದ್ದಾರೆ. ರಾಮ್ ಚರಣ್ ಜನ್ಮದಿನದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಹತ್ತು ಗಂಟೆಗೆ ಸರ್ಪ್ರೈಸ್ ನೀಡುವುದಾಗಿ ಜೂ. ಎನ್‌ಟಿಆರ್ ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಮಾತು ತಪ್ಪಿದ್ದಾರೆ. ಏನದು ಮಾತು? ಮುಂದೆ ಓದಿ.

  ಡಿಜಿಟಲ್ ಸರ್ಪ್ರೈಸ್ ನೀಡುತ್ತೇನೆ

  'ಸಹೋದರ ರಾಮ್ ಚರಣ್, ಒಳ್ಳೆಯ ಪರಿಸ್ಥಿತಿಯಲ್ಲಿ ನಿಮ್ಮ ಜನ್ಮದಿನವನ್ನು ನಾನು ಆಚರಿಸಬಹುದಾಗಿತ್ತು. ಆದರೆ ನಾವು ಲಾಕ್‌ಡೌನ್‌ನಲ್ಲಿದ್ದೇವೆ ಮತ್ತು ಮನೆಯಲ್ಲಿಯೇ ಇರುವುದು ಮುಖ್ಯವಾಗಿದೆ. ಹೀಗಾಗಿ ನಾನು ನಾಳೆ ಬೆಳಿಗ್ಗೆ 20 ಗಂಟೆಗೆ ಡಿಜಿಟಲ್ ಸರ್ಪ್ರೈಸ್ ನೀಡಲಿದ್ದೇನೆ. ನನ್ನನ್ನು ನಂಬಿ. ನೀವು ಇದನ್ನು ಎಂದಿಗೂ ಮರೆಯುವುದಿಲ್ಲ' ಎಂದು ಜೂನಿಯರ್ ಎನ್‌ಟಿಆರ್ ಹೇಳಿದ್ದರು.

  ರಾಮ್ ರಚಣ್ ಚಡಪಡಿಕೆ

  ಇದಕ್ಕೆ ರಾಮ್ ಚರಣ್ ಸಂತಸ ವ್ಯಕ್ತಪಡಿಸಿದ್ದರು. ಗುರುವಾರವಷ್ಟೇ ಟ್ವಿಟ್ಟರ್‌ನಲ್ಲಿ ಖಾತೆ ತೆರದಿರುವ ರಾಮ್ ಚರಣ್, 'ವಾವ್, ನಾನು ಸರಿಯಾದ ಸಮಯದಲ್ಲಿ ಟ್ವಿಟ್ಟರ್ ಸೇರಿಕೊಂಡಿದ್ದೇನೆ. ಇಲ್ಲದಿದ್ದರೆ ನಿಮ್ಮ ಸರ್ಪ್ರೈಸ್‌ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ನಾಳೆಗಾಗಿ ಕಾಯಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದ್ದರು.

  ಪರಿಹಾರ ನಿಧಿಗೆ 1 ಕೋಟಿ ರೂ ಘೋಷಿಸಿದ ಪವನ್ ಕಲ್ಯಾಣ್, 70 ಲಕ್ಷ ನೀಡಲಿದ್ದಾರೆ ರಾಮ್ ಚರಣ್ಪರಿಹಾರ ನಿಧಿಗೆ 1 ಕೋಟಿ ರೂ ಘೋಷಿಸಿದ ಪವನ್ ಕಲ್ಯಾಣ್, 70 ಲಕ್ಷ ನೀಡಲಿದ್ದಾರೆ ರಾಮ್ ಚರಣ್

  ರಾಜಮೌಳಿಯಿಂದಾಗಿ ವಿಳಂಬ

  ಆದರೆ, ಎನ್‌ಟಿಆರ್ ಭರವಸೆ ನೀಡಿದಂತೆ ಅವರಿಂದ ಈ ಅಚ್ಚರಿ ನೀಡಲು ಸಾಧ್ಯವಾಗಿಲ್ಲ. 'ಸಾರಿ ಬ್ರದರ್. ನಿಮ್ಮ ಉಡುಗೊರೆಯನ್ನು ಕಳೆದ ರಾತ್ರಿ ಜಕ್ಕಣ್ಣ ರಾಜಮೌಳಿ ಅವರಿಗೆ ಅವರ ಅಭಿಪ್ರಾಯಕ್ಕಾಗಿ ಕಳುಹಿಸಿದ್ದೆ. ರಾಜಮೌಳಿ ಅವರ ಬಳಿ ಅದು ಹೇಗೆ ಆಗುತ್ತದೆ ಎನ್ನುವುದು ನಿಮಗೂ ಗೊತ್ತು. ಸ್ವಲ್ಪ ತಡವಾಗಿದೆ' ಎಂದು ಎನ್‌ಟಿಆರ್ ಕ್ಷಮೆ ಕೇಳಿದ್ದರು.

  ರಾಜಮೌಳಿ ಕಾಲೆಳೆದ ರಾಮ್ ಚರಣ್

  ಅದಕ್ಕೆ ರಾಮ್ ಚರಣ್ ಆಘಾತ ವ್ಯಕ್ತಪಡಿಸಿದ್ದಾರೆ. ರಾಜಮೌಳಿ ಅವರಿಗೆ ಕಳುಹಿಸಿದ್ದೀರಾ? ಅದು ನನಗೆ ಇವತ್ತೇ ಸಿಗುತ್ತಾ? ಎಂದು ರಾಜಮೌಳಿ ಬಳಿ ಹೋಗುವ ಕೆಲಸ ಆ ಕ್ಷಣಕ್ಕೆ ಆಗುವುದಿಲ್ಲ ಎಂದು ಅವರ ಕಾಲೆಳೆದಿದ್ದಾರೆ. 'ಹೌದು. ಈಗಷ್ಟೇ ಅದರ ಬಗ್ಗೆ ಜಕ್ಕಣ್ಣ (ರಾಜಮೌಳಿ) ಬಳಿ ಪರಿಶೀಲಿಸಿದೆ. ಅವರು ಖಂಡಿತವಾಗಿಯೂ ಸಂಜೆ 4 ಗಂಟೆಗೆ ಕೊಡುತ್ತಾರಂತೆ' ಎಂದು ಎನ್‌ಟಿಆರ್ ಹೇಳಿದ್ದಾರೆ. ಹೀಗಾಗಿ ಸದ್ಯಕ್ಕೆ ರಾಮ್ ಚರಣ್‌ಗೆ ನೀಡುವ ಸರ್ಪ್ರೈಸ್ ಮುಂದಕ್ಕೆ ಹೋಗಿದೆ.

  ಆರ್‌ಆರ್‌ಆರ್ ಚಿತ್ರತಂಡದಿಂದ ಹೊಸ ಸುದ್ದಿ: ಮೂರು ಅವತಾರಗಳಲ್ಲಿ ಜೂ. ಎನ್‌ಟಿಆರ್?ಆರ್‌ಆರ್‌ಆರ್ ಚಿತ್ರತಂಡದಿಂದ ಹೊಸ ಸುದ್ದಿ: ಮೂರು ಅವತಾರಗಳಲ್ಲಿ ಜೂ. ಎನ್‌ಟಿಆರ್?

  English summary
  Jr NTR had assured Ram Charan that he will give him a digital surprise for his birthday on morning, but he failed to deliver because of the delay by Rajamouli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X