Jr.NTR ಎದುರೇ ಫ್ಯಾನ್ಸ್‌ನಿಂದ ಅನುಪಮಾ ಪರಮೇಶ್ವರನ್‌ಗೆ ಅವಮಾನ: ನಟಿಗೆ ನೆಟ್ಟಿಗರು ಭೇಷ್ ಅಂದಿದ್ದೇಕೆ?
ಜೂ.ಎನ್‌ಟಿಆರ್ ಕ್ರೇಜ್ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. RRR ಸಿನಿಮಾ ಬಳಿಕವಂತೂ ಜೂ.ಎನ್‌ಟಿಆರ್ ಕ್ರೇಜ್ ಗ್ಲೋಬಲ್‌ಗೂ ಮುಟ್ಟಿದೆ. ಇತ್ತೀಚೆಗೆ ಈ ನಟನ ಎದುರೇ 'ಟಿಲ್ಲು ಸ್ಕ್ವೇರ್' ಸಿನಿಮಾದ ನಾಯಕಿ ಅನುಪಮಾ ಪರಮೇಶ್ವರನ್‌ಗೆ ಅವಮಾನ ಆಗಿದೆ. ಆ ಅವಮಾನ ಆಗಿದ್ದು ಜೂ. ಎನ್‌ಟಿಆರ್ ಅಭಿಮಾನಿಗಳಿಂದಲೇ.
ಕೇರಳದ ಈ ಬ್ಯೂಟಿ ಅನುಪಮಾ ಪರಮೇಶ್ವರನ್ ಇತ್ತೀಚೆಗೆ ತೆಲುಗಿನ 'ಟಿಲ್ಲು ಸ್ಕ್ವೇರ್' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಸೂಪರ್ ಸಕ್ಸಸ್‌ಗಾಗಿ ಕಾಯುತ್ತಿದ್ದ ಟಾಲಿವುಡ್ ಮಂದಿಗೆ ಮತ್ತೊಂದು 100 ಕೋಟಿ ರೂಪಾಯಿ ಸಿನಿಮಾ ಸಿಕ್ಕಿದೆ.

ಇದೇ ಸಿನಿಮಾದ ಯಶಸ್ಸಿನ ಖುಷಿಯನ್ನು ಸಂಭ್ರಮಿಸುವುದಕ್ಕೆ ಚಿತ್ರತಂಡ ಮುಂದಾಗಿತ್ತು. ಈ ವೇಳೆ ನಟಿ ಅನುಪಮಾ ಪರಮೇಶ್ವರನ್‌ಗೆ ಜೂ.ಎನ್‌ಟಿಆರ್ ಫ್ಯಾನ್ಸ್ ಅವಮಾನ ಮಾಡಿದ್ದಾರೆ. ಅಷ್ಟಕ್ಕೂ ಈ ಘಟನೆ ಯಾಕೆ ನಡೀತು? ಜೂ.ಎನ್‌ಟಿಆರ್ ಎದುರೇ ನಡೆದಿದ್ದೇನು? ಈ ನಟಿಗೆ ನೆಟ್ಟಿಗರು ಭೇಷ್ ಎಂದಿದ್ದೇಕೆ? ತಿಳಿಯಲು ಮುಂದೆ ಓದಿ.
'ಟಿಲ್ಲು ಸ್ಕ್ವೇರ್' ಸಿನಿಮಾ ಗೆದ್ದಿದ್ದಕ್ಕೆ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮುಖ್ಯ ಅತಿಥಿಯಾಗಿ ಜೂ.ಎನ್‌ಟಿಆರ್ ಅವರನ್ನು ಕರೆಸಲಾಗಿತ್ತು. ಹೀಗಾಗಿ ಜೂ.ಎನ್‌ಟಿಆರ್ ನೋಡುವುದಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸೇರಿದ್ದರು. ಎಲ್ಲವರೂ ಸರಿಯಾಗೇ ಇತ್ತು. 'ಟಿಲ್ಲು ಸ್ಕ್ವೇರ್' ತಂಡದ ಒಬ್ಬೊಬ್ಬರೇ ಬಂದು ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಿದ್ದರು.
ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜೂ.ಎನ್‌ಟಿಆರ್ ಅಭಿಮಾನಿಗಳು ಗಲಾಟೆ ಶುರುವಿಟ್ಟುಕೊಂಡಿದ್ದರು. ಜೂ.ಎನ್‌ಟಿಆರ್ ವೇದಿಕೆ ಮೇಲೆ ಬರಬೇಕು ಅಂತ ಡಿಮ್ಯಾಂಡ್ ಮಾಡುವುದಕ್ಕೆ ಶುರು ಮಾಡಿದ್ದರು. ನಿರೂಪಕರು ಕಾರ್ಯಕ್ರಮವನ್ನು ಅದೆಷ್ಟೇ ನಿಯಂತ್ರಿಸುವುದಕ್ಕೆ ಪ್ರಯತ್ನ ಪಟ್ಟರೂ ಅದೂ ಸಾಧ್ಯವಾಗಿರಲಿಲ್ಲ. ಇದೇ ವೇಳೆ ವೇದಿಕೆ ಮೇಲೆ ನಟಿ ಅನುಪಮಾ ಪರಮೇಶ್ವರನ್ ಎಂಟ್ರಿ ಕೊಟ್ಟಿದ್ದರು.

ಅನುಪಮಾ ಪರಮೇಶ್ವರನ್ ವೇದಿಕೆ ಮೇಲೆ ಏರುತ್ತಿದ್ದಂತೆ ಜೋರಾಗಿ ಗಲಾಟೆ ಮಾಡುವುದಕ್ಕೆ ಶುರುವಿಟ್ಟುಕೊಂಡರು. ಅನುಪಮಾಗೆ ಮಾತಾಡದಂತೆ ಕೂಗುವುದಕ್ಕೆ ಶುರು ಮಾಡಿದ್ದರು. ಈ ವೇಳೆ ಅನುಪಮಾ ಪರಮೇಶ್ವರನ್ ಮಾತಾಡಬೇಕೋ ಬೇಡವೋ ಎಂದು ಕೇಳಿದರು. ಅದಕ್ಕೆ ಅನುಪಮಾ ಪರಮೇಶ್ವರನ್‌ಗೆ ಜೂ.ಎನ್‌ಟಿಆರ್ ಫ್ಯಾನ್ಸ್ ಬೇಡ ಎಂದು ಕೂಗಲಾರಂಭಿಸಿದರು.
ಈ ಗದ್ದಲದಲ್ಲಿಯೂ ಅನುಪಮಾ ಪರಮೇಶ್ವರನ್ ಮಾತಾಡುವುದಕ್ಕೆ ಪ್ರಯತ್ನ ಪಟ್ಟರು ಆದರೂ, " ನಾನು ಕೇವಲ ಒಂದೇ ಒಂದು ನಿಮಿಷ ತೆಗೆದುಕೊಳ್ಳುತ್ತೇನೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನಾನು ನಿಮ್ಮ ಸಮಯವನ್ನು ಹಾಳು ಮಾಡುವುದಿಲ್ಲ. ಎನ್‌ಟಿಆರ್ ಅವರೇ ನೀವು ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದಗಳು. ನನಗೆ ಏನೂ ಬೇಜಾರಾಗಿಲ್ಲ. ಯಾಕಂದ್ರೆ, ಅವರ ಭಾವನೆಗಳೇನು ಅನ್ನೋದನ್ನು ನಾನು ಅರ್ಥೈಸಿಕೊಳ್ಳಬಲ್ಲೆ." ಎಂದು ಹೇಳಿ ವೇದಿಕೆ ಇಳಿದರು.
ಅನುಪಮಾ ಪರಮೇಶ್ವರನ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಹ್ಯಾಂಡಲ್ ಮಾಡಿದ್ದಕ್ಕೆ ನೆಟ್ಟಿಗರು ನಟಿಗೆ ಭೇಷ್ ಎನ್ನುತ್ತಿದ್ದಾರೆ.


Click it and Unblock the Notifications











