ಪ್ರಶಾಂತ್ ನೀಲ್ ಮೇಲೆ ಯಂಗ್ ಟೈಗರ್ ಎನ್‌ಟಿಆರ್ ಫ್ಯಾನ್ಸ್ ಬೇಸರ
ತೆಲುಗು ನಟ ಜ್ಯೂ. ಎನ್‌ಟಿಆರ್ ಈಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. 'ವಾರ್-2' ಚಿತ್ರದಲ್ಲಿ ಹೃತಿಕ್ ರೋಷನ್ ಎದುರು ಅಬ್ಬರಿಸಿದ್ದಾರೆ. ಮತ್ತೊಂದು ಕಡೆ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಸಣ್ಣ ಶೆಡ್ಯೂಲ್ ಮುಗಿದಿದೆ.
ಚಿತ್ರಕ್ಕೆ 'ಡ್ರ್ಯಾಗನ್' ಎಂಬ ಟೈಟಲ್ ಅನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಎನ್‌ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಚಿತ್ರೀಕರಣ ತಡವಾಗಿ ಶುರುವಾಗಿದ್ದರಿಂದ ಮುಂದಿನ ವರ್ಷ ಜೂನ್ 26ಕ್ಕೆ ಸಿನಿಮಾ ಬಿಡುಗಡೆಗೆ ತೀರ್ಮಾನಿಸಲಾಗಿದೆ.

ಎನ್‌ಟಿಆರ್ ಬಿಟ್ಟರೆ ಬೇರೆ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅಂದಹಾಗೆ ತಾರಕ್ ನಟನೆಗೆ ಪ್ರಶಾಂತ್ ನೀಲ್ ದೊಡ್ಡ ಅಭಿಮಾನಿ. ಹಾಗಾಗಿ ಇವರಿಬ್ಬರ ಕಾಂಬಿನೇಷನ್ ಬಹಳ ಹೈಪ್ ಕ್ರಿಯೇಟ್ ಮಾಡುತ್ತಿದೆ. ಇದೇ ಮಂಗಳವಾರ (ಮೇ 20) ಜ್ಯೂ. ಎನ್‌ಟಿಆರ್ ಹುಟ್ಟುಹಬ್ಬ. ಆ ದಿನ 'ವಾರ್-2' ಚಿತ್ರದ ಟೀಸರ್ ರಿಲೀಸ್ ಆಗಲಿದೆ.
ತಾರಕ್ ಬರ್ತ್‌ಡೇಗೆ 'ವಾರ್-2' ಭರ್ಜರಿ ಗಿಫ್ಟ್ ಕೊಡ್ತಿದೆ. ಆದರೆ 'ಡ್ರ್ಯಾಗನ್' ಚಿತ್ರದ ಯಾವುದೇ ಪೋಸ್ಟರ್, ಟೀಸರ್ ಬರಲ್ಲ ಎನ್ನಲಾಗ್ತಿದೆ. ಇದು ಸಹಜವಾಗಿಯೇ ತಾರಕ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಒಂದು ವಾರ ಚಿತ್ರೀಕರಣ ನಡೆದಿದೆ. ಟೀಸರ್ ಆಗಲಿ ಕೊನೆ ಪಕ್ಷ ಹೊಸ ಪೋಸ್ಟರ್ ಆದರೂ ರಿಲೀಸ್ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.
'ಸಲಾರ್' ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಇದು. ಇನ್ನು 'ದೇವರ' ನಂತರ ತಾರಕ್ ನಟನೆಯ ತೆಲುಗು ಸಿನಿಮಾ ಇದಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಹೈವೋಲ್ಟೇಜ್ ಆಕ್ಷನ್ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ ಬರ್ತಿದೆ.


Click it and Unblock the Notifications











