ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಜ್ಯೂ. ಎನ್‌ಟಿಆರ್‌ಗೆ ಭವ್ಯ ಸ್ವಾಗತ: "ನಮ್ಮ ದೇಶದಷ್ಟೇ ತೂಕವಾಗಿದೆ ಆಸ್ಕರ್" ಎಂದ ನಟ

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದ ನಟ ಜ್ಯೂ. ಎನ್‌ಟಿಆರ್‌ ಬೆಳ್ಳಂ ಬೆಳಗ್ಗೆ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ತಾರಕ್ ನಟನೆಯ 'RRR' ಚಿತ್ರದ 'ನಾಟು ನಾಟು' ಗೀತೆಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ತಂಡದ ಹಲವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವಿಡಿಯೋಗಳು ವೈರಲ್ ಆಗಿದೆ.

ಸಹೋದರ ತಾರಕ ರತ್ನ ಅಗಲಿಕೆಯ ಹಿನ್ನೆಲೆಯಲ್ಲಿ ಜ್ಯೂ. ಎನ್‌ಟಿಆರ್‌ ಕೊಂಚ ತಡವಾಗಿ ಆಸ್ಕರ್ ಪ್ರಮೋಷನ್‌ಗಾಗಿ ಅಮೆರಿಕಾಗೆ ತೆರಳಿದ್ದರು. ಇದೀಗ ಎಲ್ಲರಿಗಿಂತ ಮೊದಲು ವಾಪಸ್ ಬಂದಿದ್ದಾರೆ. ಸೋಮವಾರ ಅಮೆರಿಕಾ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಭಾರತೀಯರು ನಿರ್ಮಿಸಿದ ಚಿತ್ರವೊಂದಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಇದೇ ಮೊದಲು. ಅಮೆರಿಕಾದಿಂದ ಬೆಳಗ್ಗೆ ತಾರಕ್ ಹೈದರಾಬಾದ್‌ಗೆ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸ್ವಾಗರ ಕೋರಿದರು.

Jr NTR gets mobbed by his fans at the Hyderabad airport as he returns from the Oscars

ಜ್ಯೂ. ಎನ್‌ಟಿಆರ್‌ ರಾಜೀವ್ ಗಾಂಧಿ ಏರ್‌ಪೋರ್ಟ್‌ಗೆ ಬಂದಿಳಿಯುವ ಸುದ್ದಿ ಕೇಳಿ ಅಭಿಮಾನಿಗಳು ಅರ್ಧರಾತ್ರಿಯಿಂದಲೇ ಕಾಯುತ್ತಿದ್ದರು. ನೆಚ್ಚಿನ ನಟ ಬರುತ್ತಿದ್ದಂತೆ ಜೈ ಎನ್‌ಟಿಆರ್‌ ಎನ್ನುವ ಘೋಷಣೆ ಮುಗಿಲು ಮುಟ್ಟಿತ್ತು. ಮಾಧ್ಯಮಗಳ ಪ್ರಶ್ನೆಗಳಿಗೆ ಟಾಲಿವುಡ್ ಸೂಪರ್ ಸ್ಟಾರ್ ಉತ್ತರಿಸಿದರು. ಆಸ್ಕರ್ ವೇದಿಕೆಯಲ್ಲಿ ಬೆಸ್ಟ್ ಮೊಮೆಂಟ್ ಯಾವುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ತಾರಕ್ "ಕೀರವಾಣಿ ಹಾಗೂ ಚಂದ್ರಬೋಸ್ ವೇದಿಕೆ ಮೇಲೆ ನಿಂತಿದ್ದು" ಎಂದಿದ್ದಾರೆ. ಆಸ್ಕರ್ ಪ್ರಶಸ್ತಿ ಹಿಡಿದಾಗ ನಿಮ್ಮ ಅನುಭೂತಿ ಹೇಗಿತ್ತು ಎನ್ನುವ ಎಂದಿದ್ದಕ್ಕೆ "ಬಹಳ ತೂಕ ಇದೆ. ನಮ್ಮ ದೇಶ ಎಷ್ಟು ತೂಕವಾಗಿದ್ಯೋ ಅಷ್ಟು ತೂಕ ಇದೆ."

"ಆಸ್ಕರ್ ಪ್ರಶಸ್ತಿ ಕೈಯಲ್ಲಿದ್ದರೆ ಅದು ಅದ್ಭುತ ಅನುಭೂತಿ. ಅದನ್ನು ಎಷ್ಟು ಹೇಳಿದರೂ ಸಾಲದು. ನನಗೆ ಬಹಳ ಹೆಮ್ಮೆ ಆಗುತ್ತಿದೆ. 'RRR' ಸಿನಿಮಾ ಬಗ್ಗೆ ಹೆಮ್ಮೆ ಆಗುತ್ತಿದೆ. ಕೀರವಾಣಿ, ಚಂದ್ರಬೋಸ್ ವೇದಿಕೆ ಮೇಲೆ ಇದ್ದಿದ್ದು ಇನ್ನಷ್ಟು ಆನಂದ ತಂದಿತ್ತು. ಪ್ರೇಕ್ಷಕರಿಗೆ ಧನ್ಯವಾದ. ನಿಮ್ಮಲ್ಲರ ಅಭಿಮಾನ, ಆಶೀರ್ವಾದಿಂದ ಈ ಪ್ರಶಸ್ತಿ ಸಿಕ್ಕಿದ್ದು" ಎಂದು ತಾರಕ್ ಹೇಳಿದ್ದಾರೆ. ರಾಮ್‌ಚರಣ್ ಪತ್ನಿ ಉಪಾಸನಾ ಸಮೇತ ಅಮೆರಿಕಾಗೆ ತೆರಳಿದ್ದಾರೆ. ಆದರೆ ಎನ್‌ಟಿಆರ್ ಒಬ್ಬರೇ ಹೋಗಿದ್ದರು. ಪತಿಯನ್ನು ರಿಸೀವ್ ಮಾಡಿಕೊಳ್ಳಲು ತಾರಕ್ ಪತ್ನಿ ಪ್ರಣತಿ ಏರ್‌ಪೋರ್ಟ್‌ಗೆ ಬಂದಿದ್ದರು.

ತಾರಕ್ ಜೊತೆಗೆ 'ನಾಟು ನಾಟು' ಡ್ಯಾನ್ಸ್ ಕೊರಿಯೋಗ್ರಫರ್ ಪ್ರೇಮ್ ರಕ್ಷಿತ್ ಕೂಡ ವಾಪಸ್ಸಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಜ್ಯೂ. ಎನ್‌ಟಿಆರ್ ತಮ್ಮ ಅಭಿಮಾನಿ ನಟನೆಯ ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಭಾಗಿ ಆಗಲಿದ್ದಾರೆ. ತೆಲುಗು ನಟ ವಿಶ್ವಕ್ ಸೇನ್, ಯಂಗ್ ಟೈಗರ್ ಅಭಿಮಾನಿ. ಆತನ 'ದಾಸ್ ಕಾ ಧಮ್ಕಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ಶುಕ್ರವಾರ ಹೈದರಾಬಾದ್‌ನ ಶಿಲ್ಪಕಲಾ ವೇದಿಕೆಯಲ್ಲಿ ಅದ್ಧೂರಿ ಈವೆಂಟ್ ನಡೆಯಲಿದೆ. ಈ ವೇದಿಕೆಯಲ್ಲಿ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Jr NTR gets mobbed by his fans at the Hyderabad airport as he returns from the Oscars

ಇನ್ನು ಆಸ್ಕರ್ ಅವಾರ್ಡ್ಸ್ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಪ್ರಸ್ತಾಪಿಸಲ್ಪಟ್ಟ ನಟರ ಲಿಸ್ಟ್‌ನಲ್ಲಿ ಜ್ಯೂ. ಎನ್‌ಟಿಆರ್ ಮೊದಲ ಸ್ಥಾನದಲ್ಲಿದ್ದರು. ರಾಮ್‌ಚರಣ್ 2ನೇ ಸ್ಥಾನ ಅಲಂಕರಿಸಿದ್ದರು. ಇದನ್ನು ಕೇಳಿ ಯಂಗ್ ಟೈಗರ್ ಅಭಿಮಾನಿಗಳು ಖುಷಿ ಆಗಿದ್ದರು. ಸದ್ಯ ಕೊರಟಾಲ ಶಿವ ನಿರ್ದೇಶನದ ಚಿತ್ರಕ್ಕೆ ಜ್ಯೂ. ಎನ್‌ಟಿಆರ್ ಸಿದ್ದತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾ ನಂತರ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ತಾರಕ್ ನಟಿಸೋದು ಕನ್ಫರ್ಮ್ ಆಗಿದೆ.

More from Filmibeat

English summary
r NTR gets mobbed by his fans at the Hyderabad airport as he returns from the Oscars. Tarak First reaction with Telugu media after Naatu Naatu song won at Oscars goes viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X