ಜ್ಯೂ. ಎನ್.ಟಿ.ಆರ್ ಧರಿಸಿರುವ ಈ ವಾಚ್‌ನ ಬೆಲೆ ಎಷ್ಟು ? ವಿಶೇಷತೆಗಳೇನು ?
ಚಿತ್ರರಂಗದಲ್ಲಿ ಇರುವವರಿಗೆ ಸಾಮಾನ್ಯವಾಗಿ ಮೂರು ಮತ್ತೊಂದು ಶೋಕಿಗಳಿರುತ್ತವೆ. ಕೆಲವರಿಗೆ ಡ್ರೈವಿಂಗ್ ಹುಚ್ಚು ತಲೆಗೇರಿದರೆ, ಇನ್ನೂ ಕೆಲವರಿಗೆ ದುಬಾರಿ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವ ಹುಚ್ಚಿರುತ್ತೆ. ಮತ್ತೂ ಕೆಲವರಿಗೆ ದುಬಾರಿ ಬೆಲೆಯ ಪರಿಕರಗಳನ್ನು ಉಪಯೋಗಿಸಿ ಆ ನಂತರ ಎಸೆಯುವ ಹುಚ್ಚಿರುತ್ತದೆ. ಹೀಗೆ ನಾನಾ ಬಗೆಯ ಹುಚ್ಚು ಉರುಫ್ ಶೋಕಿಗೆ ಒಳಗಾಗಿರುವ ಸಿನಿಮಾ ತಾರೆಯರು ದಾರಿಗೊಬ್ಬರಾದರೂ ಸಿಗುತ್ತಲೇ ಇರುತ್ತಾರೆ. ಇದಕ್ಕೆ ಜ್ಯೂ. ಎನ್‌ಟಿಆರ್ ಸದ್ಯದ ಉದಾಹರಣೆ.
ಹೌದು, ಆರ್.ಆರ್.ಆರ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರುವ ಜ್ಯೂ, ಎನ್‌ಟಿಆರ್ ಸದ್ಯ ಹೃತಿಕ್ ರೋಷನ್ ಜೊತೆ ವಾರ್ ಚಿತ್ರವನ್ನು ಮಾಡುತ್ತಿದ್ದಾರೆ. ಹೀಗಾಗಿ ಹೈದರಾಬಾದ್‌ದಿಂದ ಮುಂಬೈ, ಮುಂಬೈದಿಂದ ಹೈದರಾಬಾದ್‌ಗೆ ನಿರಂತರ ಪ್ರಯಾಣವನ್ನು ಮಾಡುತ್ತಿದ್ದಾರೆ. ಹೀಗೆ ಪ್ರಯಾಣ ಮಾಡುವ ಸಮಯದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಜ್ಯೂ ಎನ್‌ಟಿಆರ್ ಹಾಕಿಕೊಂಡಿರುವ ವಾಚ್ ಎಲ್ಲರ ಗಮನ ಸೆಳೆದಿದೆ.

ಹಾಗಂಥ, ಅರೇ ಅದ್ರಲ್ಲೇನು ಮಹಾ ಎಂದು ಮೂಗು ಮುರಿಯುವಂತೆ ಇಲ್ಲ. ಯಾಕೆಂದರೆ ಜ್ಯೂ. ಎನ್‌ಟಿಆರ್ ಹಾಕಿಕೊಂಡಿರುವ ವಾಚ್‌ನ ಬೆಲೆ ಒಂದಲ್ಲ, ಎರಡಲ್ಲ, ಬರೋಬ್ಬರಿ 7.47 ಕೋಟಿ ರೂಪಾಯಿಗಳು. ರೋಲ್ಸ್ ರಾಯ್ಸ್ ಕಾರಿಗಿಂತಲೂ ದುಬಾರಿ ಜ್ಯೂ.ಎನ್.ಟಿ.ಆರ್ ಹಾಕಿಕೊಂಡಿರುವ ಕೈಗಡಿಯಾರ. ಹೀಗಾಗಿಯೇ ಅನೇಕರು ಸದ್ಯ ಜ್ಯೂ.ಎನ್.ಟಿ.ಆರ್ ಅವರ ವಿಲಾಸಿ ಜೀವನ ಕಂಡು ಹುಬ್ಬೇರಿಸುತ್ತಿದ್ದಾರೆ. ಇಷ್ಟೊಂದು ಹಣ ತಮ್ಮ ಬಳಿ ಇದ್ದಿದ್ದರೆ ತಾವು ಏನೆಲ್ಲ ಮಾಡಬಹುದಿತ್ತು ಎಂದು ಆಲೋಚನೆಯನ್ನು ಮಾಡುತ್ತಿದ್ದಾರೆ.
ಇನ್ನು ಜ್ಯೂ.ಎನ್.ಟಿ.ಆರ್ ಧರಿಸಿರುವ ವಾಚ್‌ನ ಹೆಸರು ರಿಚರ್ಡ್ ಮೈಲ್ 40-01 ಟರ್ಬಿಲೈನ್ ಮೈಕ್‌ಲ್ಯಾರೆನ್ ಸ್ಪೀಡ್ ಡೈಲ್. ಭಾರತದಲ್ಲಿ ಅಂದಾಜು 7.47 ಕೋಟಿ ರೂಪಾಯಿಗಳಿಗೆ ಸಿಗುವ ಈ ವಾಚ್‌ನ ವಿದೇಶದಿಂದ ತರಿಸಿ ಹಾಕಿಕೊಳ್ಳಲು ಯಾರಾದರೂ ಮುಂದಾದರೆ 8 ಕೋಟಿಗೂ ಅಧಿಕ ಹಣವನ್ನು ನೀಡಬೇಕಾಗುತ್ತೆ. ಇನ್ನು ವಿಶೇಷ ಅಂದರೆ ಶ್ರೀಮಂತಿಕೆಯ ಸಂಕೇತವಾದ ಈ ಮಾದರಿಯ ವಾಚ್‌ಗಳು ಕೇವಲ 106 ಮಾತ್ರ ಇವೆ. ಆ ಪೈಕಿ ಒಂದು ಜ್ಯೂ.ಎನ್.ಟಿ.ಆರ್ ಕೈಯಲ್ಲಿದೆ.
ಪ್ಲಾಟಿನಂ ಮತ್ತು ಚಿನ್ನವನ್ನು ಈ ವಾಚ್‌ನಲ್ಲಿ ಬಳಸಲಾಗಿದ್ದು, ಮೆಕ್‌ಲರೆನ್ ಕಾರು ಈ ವಾಚ್‌ಗೆ ಸ್ಫೂರ್ತಿ. ಇನ್ನು ಒಂದು ವಾಚ್ ನಿರ್ಮಾಣಕ್ಕೆ 2800 ಗಂಟೆಗಳು ಹಿಡಿದಿವೆ ಎನ್ನುವುದು ರಿಚರ್ಡ್ ಮೈಲ್ ಸಂಸ್ಥೆಯ ಮಾತು. ಹಲವು ಎಂಜಿನಿಯರ್‌ಗಳು ಮತ್ತು ಡಿಸೈನರ್‌ಗಳ ಪರಿಶ್ರಮ ಈ ವಾಚ್ ಹಿಂದೆ ಎಂದಿದೆ ಈ ಸಂಸ್ಥೆ.
ಇನ್ನುಳಿದಂತೆ ಸದ್ಯ ಜ್ಯೂ.ಎನ್.ಟಿ.ಆರ್ ವಾರ್ 2 ಚಿತ್ರವನ್ನು ಮಾಡುತ್ತಿದ್ದಾರೆ. ಮೊನ್ನೆ ಈ ಚಿತ್ರದ ಹಾಡಿನ ಚಿತ್ರೀಕರಣದ ಸಮಯದಲ್ಲಿ ಹೃತಿಕ್ ರೋಷನ್ ಗಾಯಗೊಂಡಿದ್ಧಾರೆ ಎನ್ನುವ ಸುದ್ದಿ ಇದೆ. ಈ ಚಿತ್ರವನ್ನು ಹೊರತು ಪಡಿಸಿ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವನ್ನು ಜ್ಯೂ.ಎನ್.ಟಿ.ಆರ್ ಮಾಡಬೇಕಿದೆ. ಚಿತ್ರದ ಚಿತ್ರೀಕರಣವನ್ನು ಈಗಾಗಲೇ ಪ್ರಶಾಂತ್ ನೀಲ್ ಶುರು ಮಾಡಿದ್ದು ಶೀಘ್ರದಲ್ಲಿಯೇ ಯಂಗ್ ಟೈಗರ್ ಚಿತ್ರೀಕರಣದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಇವೆರಡು ಚಿತ್ರಗಳನ್ನು ಹೊರತು ಪಡಿಸಿದರೆ ದೇವರ 2 ಚಿತ್ರ ಕೂಡ ಇದೆ. ಆದರೆ ಈ ಚಿತ್ರವನ್ನು ಜ್ಯೂ.ಎನ್.ಟಿ.ಆರ್ ಅದ್ಯಾವ ಕಾಲಕ್ಕೆ ಮಾಡುತ್ತಾರೋ ಗೊತ್ತಿಲ್ಲ. ಈ ಎಲ್ಲ ಚಿತ್ರಗಳ ಚಿತ್ರೀಕರಣ ಮುಕ್ತಾಯವಾದ ನಂತರ ಜ್ಯೂ ಎನ್ ಟಿ ಆರ್ ಮತ್ತು ರಾಜಮೌಳಿ ಮತ್ತೊಮ್ಮೆ ಒಂದಾಗಲಿದ್ದಾರೆ ಚಿತ್ರಮಾಡಲಿದ್ದಾರೆ ಎನ್ನುವ ಮಾತು ಕೂಡ ಸದ್ಯ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ.
ಒಟ್ನಲ್ಲಿ ಸದ್ಯಕ್ಕೆ ಜ್ಯೂ.ಎನ್.ಟಿ.ಆರ್ ಅವರ ಈ ದುಬಾರಿ ವಾಚ್ ಅನೇಕರ ಚಿತ್ತ ಕದ್ದಿದೆ. ಹುಬ್ಬೇರಿಸಿದೆ. ಇನ್ನೂ ಒಂದು ವರ್ಗ ಸೆಲೆಬ್ರೆಟಿಗಳ ಈ ಐಶಾರಾಮಿ ಜೀವನವನ್ನೂ ಕಂಡು ಕಣ್ಣು ಕೆಂಪು ಮಾಡಿಕೊಳ್ಳುತ್ತಿದೆ. ಕೆಂಡ ಕಾರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಜ್ಯೂ ಎನ್.ಟಿ.ಆರ್ ಅವರ ಈ ವಾಚ್ ಕುರಿತು ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ. ವಿಡಿಯೋ ವೈರಲ್ ಆಗಿದೆ.


Click it and Unblock the Notifications










