'ಖಾನ್‌ಗಳ ಜೊತೆ ನಟಿಸಲ್ಲ' ಬಾಲಿವುಡ್ ಬೆಡಗಿಗೆ ಜೂ ಎನ್‌ಟಿಆರ್ ಜೊತೆ ನಟಿಸುವ ಆಸೆ!
ಬಾಲಿವುಡ್‌ನ ನಟೀಮಣಿಯರು ಖಾನ್ ತ್ರಯರ ಜೊತೆ ನಟಿಸಲು ಕಾತರರಾಗಿರುತ್ತಾರೆ. ಆಮಿರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೂ ಸಾಕೆಂದು ಕಾಯುತ್ತಿರುತ್ತಾರೆ.
ಆದರೆ ಬಾಲಿವುಡ್‌ನ ಯುವ, ಜನಪ್ರಿಯ ನಟಿಯೊಬ್ಬರು ತಾವು ಬಾಲಿವುಡ್‌ನ ಖಾನ್ ತ್ರಯರ ಜೊತೆ ನಟಿಸುವುದಿಲ್ಲವೆಂದು ಹೇಳಿದ್ದಾರೆ. ಖಾನ್ ತ್ರಯರಿಗಿಂತಲೂ ತೆಲುಗಿನ ಜೂ ಎನ್‌ಟಿಆರ್ ತಮ್ಮ ಫೇವರೇಟ್ ಆಗಿದ್ದು ಅವರೊಟ್ಟಿಗೆ ನಟಿಸುವ ಆಸೆ ಇದೆ ಎಂದು ಹೇಳಿದ್ದಾರೆ.
ಹೀಗೆ ಖಾನ್ ತ್ರಯರಿಗಿಂತಲೂ ಜೂ ಎನ್‌ಟಿಆರ್ ಮೇಲೆ ಹೆಚ್ಚು ಪ್ರೀತಿ ತೋರಿಸಿದ ಬಾಲಿವುಡ್ ನಟಿ ಜಾನ್ಹವಿ ಕಪೂರ್. ಬಾಲಿವುಡ್‌ನ ಯುವ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಜಾನ್ಹವಿ ಒಂದರ ಹಿಂದೆ ಒಂದು ಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಖಾನ್‌ಗಳ ಜೊತೆ ಮಾತ್ರ ತಾವು ನಟಿಸುವುದಿಲ್ಲವೆಂದು ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ನನಗಿಂತಲೂ ತುಂಬಾ ಹೆಚ್ಚು ವಯಸ್ಸಾಗಿರುವ ನಟರೊಟ್ಟಿಗೆ ನಟಿಸುವುದು ನನಗೆ ಸಮಂಜಸ ಎನಿಸುವುದಿಲ್ಲ. ಜನ ಸಹ ಅದನ್ನು ಒಪ್ಪುವುದಿಲ್ಲ ಎನಿಸುತ್ತದೆ. ನನ್ನ ಹಾಗೂ ಖಾನ್‌ಗಳ ನಡುವಿನ ವಯಸ್ಸಿನ ಅಂತರ ಬಹಳ ಹೆಚ್ಚಿದೆ ಹಾಗಾಗಿ ನಾನು ಅವರೊಟ್ಟಿಗೆ ನಟಿಸಿದರೆ ಜನ ಒಪ್ಪುತ್ತಾರೆ ಎನಿಸುವುದಿಲ್ಲ ಎಂದಿದ್ದಾರೆ.

Recommended Video
ಇದೇ ಸಮಯದಲ್ಲಿ ಜೂ ಎನ್‌ಟಿಆರ್ ಅನ್ನು ಹೊಗಳಿರುವ ಜಾನ್ಹವಿ ಕಪೂರ್, ಅವರೊಬ್ಬ ಲೆಜೆಂಡ್, ಅದ್ಭುತ ನಟ ನನಗೆ ಅವರೊಟ್ಟಿಗೆ ನಟಿಸುವ ಆಸೆಯಿದೆ ಎಂದಿದ್ದಾರೆ. ನಾನು ತೆಲುಗು ಸಿನಿಮಾಗಳನ್ನು ಮಾಡಲು ತಯಾರಿದ್ದೇನೆ, ತಮಿಳು ಮಾತ್ರವೇ ಅಲ್ಲ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಲು ನಾನು ಕಾತರಳಾಗಿದ್ದೇನೆ. ಅದರಲ್ಲಿಯೂ ಜೂ ಎನ್‌ಟಿಆರ್ ಸಿನಿಮಾ ಸಿಕ್ಕರೆ ನನಗೆ ಬಹಳ ಖುಷಿ ಆದರೆ ಆ ರೀತಿಯ ಅವಕಾಶ ಇನ್ನೂ ಬಂದಿಲ್ಲ ಎಂದಿದ್ದಾರೆ.


Click it and Unblock the Notifications










