For Quick Alerts
  ALLOW NOTIFICATIONS  
  For Daily Alerts

  ಹೆಂಡತಿ ಆಸೆ ಈಡೇರಿಸಲು ಜೂ.ಎನ್‌ಟಿಆರ್ ಪ್ರಯತ್ನ

  |

  ತೆಲುಗು ಸಿನಿಮಾ ರಂಗದಲ್ಲಿ ಕುಟುಂಬ ಪಾರಮ್ಯ ಹೆಚ್ಚಿಗೆ ಇದೆ. ನಂದಮೂರಿ ಕುಟುಂಬ ಹಾಗೂ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ತೆಲುಗು ಸಿನಿಮೋದ್ಯಮದ ಕೇಂದ್ರ ಸ್ಥಾನದಲ್ಲಿವೆ.

  ಮೆಗಾಸ್ಟಾರ್ ಕುಟುಂಬದಿಂದ ಹಲವು ನಟರು ಈಗಾಗಲೇ ಚಿತ್ರರಂಗಕ್ಕೆ ಬಂದಿದ್ದಾರೆ ಹಾಗೂ ಹಲವರು ಹಿಟ್ ಸಹ ಆಗಿದ್ದಾರೆ. ಆದರೆ ನಂದಮೂರಿ ಕುಟುಂಬದಿಂದ ಯಾಕೋ ಜೂ.ಎನ್‌ಟಿಆರ್ ಬಳಿಕ ಯಾವ ನಟರೂ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ.

  ಆದರೆ ಈಗ ನಂದಮೂರಿ ಕುಟುಂಬಕ್ಕೆ ಹತ್ತಿರವಾದ ನಟನೊಬ್ಬ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಜೂ.ಎನ್‌ಟಿಆರ್ ಸ್ವತಃ ಕಾಳಜಿವಹಿಸಿ ಯುವನಟಿಗಾಗಿ ಕತೆ ಹುಡುಕುತ್ತಿದ್ದಾರೆ. ಈ ಆಸಕ್ತಿಗೆ ಕಾರಣ ಜೂ.ಎನ್‌ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ.

  ನಾರ್ನೆ ನಿತಿನ್ ಚಂದ್ರ ನಾಯಕನಾಗಿ ಎಂಟ್ರಿ

  ನಾರ್ನೆ ನಿತಿನ್ ಚಂದ್ರ ನಾಯಕನಾಗಿ ಎಂಟ್ರಿ

  ಜೂ.ಎನ್‌ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿಯ ಸಹೋದರ ನಾರ್ನೆ ನಿತಿನ್ ಚಂದ್ರ ನಾಯಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಾರ್ನೆಯನ್ನು ನಾಯಕನನ್ನಾಗಿ ಪರಿಚಯಿಸುವ ಜವಾಬ್ದಾರಿಯನ್ನು ಜೂ.ಎನ್‌ಟಿಆರ್ ವಹಿಸಿಕೊಂಡಿದ್ದು ನಿರ್ಮಾಣದ ಜವಾಬ್ದಾರಿಯನ್ನು ಜೂ.ಎನ್‌ಟಿಆರ್ ಅವರೇ ವಹಿಸಿಕೊಂಡಿದ್ದಾರೆ.

  ತೇಜ ಕತೆಯನ್ನು ಬೇಡವೆಂದ ಜೂ.ಎನ್‌ಟಿಆರ್

  ತೇಜ ಕತೆಯನ್ನು ಬೇಡವೆಂದ ಜೂ.ಎನ್‌ಟಿಆರ್

  'ಜಯಂ' ಸಿನಿಮಾ ನಿರ್ದೇಶಿಸಿದ್ದ ತೇಜ ಈಗಾಗಲೇ ನಾರ್ನೆಗಾಗಿ ಕತೆ ಹೇಳಿದ್ದರು. ತೇಜ ಮೊದಲು ನಿರ್ದೇಶಿಸಿದ್ದ 'ಚಿತ್ರಂ' ಸಿನಿಮಾದ ಮುಂದುವರೆದ ಭಾಗವಾಗಿ ಆ ಕತೆಯನ್ನು ತೆರೆಗೆ ತುರುವುದಾಗಿ ತೇಜ ಹೇಳಿದ್ದರು. ಆದರೆ ಆ ಸಿನಿಮಾವನ್ನು ಜೂ.ಎನ್‌ಟಿಆರ್ ರಿಜೆಕ್ಟ್ ಮಾಡಿದ್ದಾರೆ.

  ಮತ್ತೊಬ್ಬ ನಿರ್ದೇಶಕನಿಂದ ಕತೆ ಮಾಡಿಸುತ್ತಿದ್ದಾರೆ

  ಮತ್ತೊಬ್ಬ ನಿರ್ದೇಶಕನಿಂದ ಕತೆ ಮಾಡಿಸುತ್ತಿದ್ದಾರೆ

  ಇದೀಗ ತೆಲುಗಿನ ಯುವ ನಿರ್ದೇಶಕನೊಬ್ಬನಿಂದ ಕತೆ ಮಾಡಿಸುತ್ತಿರುವ ಜೂ.ಎನ್‌ಟಿಆರ್ ಮಾಮೈಧುನನ್ನು ಅದ್ಧೂರಿಯಾಗಿ ತೆರೆಗೆ ತರಲು ಸಕಲ ಸಜ್ಜಾಗಿದ್ದಾರೆ. ತಮ್ಮನ್ನು ನಾಯಕನನ್ನಾಗಿ ಲಾಂಚ್ ಮಾಡಬೇಕೆಂಬುದು ಪತ್ನಿ ಲಕ್ಷ್ಮಿ ಅವರ ಆಸೆಯೂ ಆಗಿದೆ ಎನ್ನಲಾಗುತ್ತಿದೆ.

  ಅಂತ್ಯವಾಯ್ತು ವೇಲು ರಕ್ಷಿತ್ ಶೆಟ್ಟಿ ಮುನಿಸು | Rakshith Shetty | Lahari Velu | Filmibeat Kannada
  ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ

  ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ

  ಜೂ.ಎನ್‌ಟಿಆರ್ ಪ್ರಸ್ತುತ 'ಆರ್‌ಆರ್‌ಆರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ನಡುವೆ 'ಮೀಲೊ ಎವರು ಕೋಟಿಶ್ವರುಲು' ರಿಯಾಲಿಟಿ ಶೋ ಅನ್ನು ಸಹ ನಿರೂಪಣೆ ಮಾಡಲಿದ್ದಾರೆ ಜೂ.ಎನ್‌ಟಿಆರ್.

  English summary
  Actor Jr NTR launching Narne Nithin Chandra as a hero in Tollywood. Narne Nithin is brother of Jr.NTR's wife Lakshmi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X