Jr.NTR ಹುಟ್ಟುಹಬ್ಬ: 'RRR' ತಂಡದಿಂದ ವಿಶೇಷ ಗಿಫ್ಟ್
ವಸಂತಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ.
ಜೂ.ಎನ್ ಟಿ ಆರ್ ಹುಟ್ಟುಹಬ್ಬದ ವಿಶೇಷವಾಗಿದೆ ಆರ್ ಆರ್ ಆರ್ ಸಿನಿಮಾತಂಡ ಭರ್ಜರಿ ಗಿಫ್ಟ್ ನೀಡಿದೆ. ಜೂ.ಎನ್ ಟಿ ಆರ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ವಿಶ್ ಮಾಡಿದೆ. ಚಿತ್ರದಲ್ಲಿ ಜೂ.ಎನ್ ಟಿ ಆರ್ ಕೊಮರಾಮ್ ಭೀಮ್ ಪಾತ್ರದಲ್ಲಿ ನಟಿಸುತ್ತಿದ್ದು, ಭೀಮ್ ಪಾತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ ಸಿನಿಮಾತಂಡ. ಮುಂದೆ ಓದಿ...

ಚಿನ್ನದ ಹೃದಯ ಹೊಂದಿದ್ದಾನೆ ಭೀಮ್
ಹೊಸ ಪೋಸ್ಟರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ರಾಜಮೌಳಿ ಪೋಸ್ಟರ್ ಶೇರ್ ಮಾಡಿ, 'ನನ್ನ ಭೀಮ್ ಚಿನ್ನದ ಹೃದಯ ಹೊಂದಿದ್ದಾನೆ. ರೆಬೆಲ್ ಆದಾಗ ಸಿಕ್ಕಾಪಟ್ಟೆ ಸ್ಟ್ರಾಂಗ್ ಮತ್ತು ಬೋಲ್ಡ್' ಎಂದು ಬರೆದುಕೊಂಡಿದ್ದಾರೆ.

ಹುಟ್ಟುಹಬ್ಬ ಆಚರಿಸಬೇಡಿ ಎಂದ ಜೂ.ಎನ್ ಟಿ ಆರ್
ಕಳೆದ ವರ್ಷ ಕೊಮರಾಮ್ ಭೀಮ್ ಪಾತ್ರದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೂ.ಎನ್ ಟಿ ಆರ್ ಈ ವರ್ಷದ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇಂಥ ಕಷ್ಟದ ಸಮಯದಲ್ಲಿ ನೀವೆಲ್ಲ ಮನೆಯಲ್ಲೇ ಇರುವುದು ನನಗೆ ಕೊಡುವ ಅತೀ ದೊಡ್ಡ ಗಿಫ್ಟ್ ಎಂದು ಹೇಳಿದ್ದರು.

ಕೊರೊನಾ ಸೋಂಕಿಗೆ ತುತ್ತಾಗಿರುವ ನಟ
ಜೂ.ಎನ್ ಟಿ ಆರ್ ಗೆ ಕೊರೊನಾ ಸೋಂಕು ತಗುಲಿದ್ದು, ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಶೀಘ್ರದಲ್ಲೇ ನೆಗೆಟಿವ್ ವರದಿ ಬರಲಿದೆ ಎಂದು ಹೇಳಿದ್ದಾರೆ. ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಸಹ ಪ್ರಾರ್ಥಿಸುತ್ತಿದ್ದಾರೆ.
Recommended Video

ಬಹುನಿರೀಕ್ಷೆಯ ಸಿನಿಮಾ 'RRR'
ಇನ್ನು ಆರ್ ಆರ್ ಆರ್ ಭಾರತೀಯ ಪ್ರಸಿದ್ಧ ಕ್ರಾಂತಿಕಾರಿಗಳ ಬಗ್ಗೆ ಇರುವ ಸಿನಿಮಾ. ಅಲ್ಲೂರಿ ಸೀತಾರಾಮ್ ಮತ್ತು ಕೊಮರಾಮ್ ಭೀಮ್ ಅವರ ಕಥೆ. ಸೀತಾರಾಮ್ ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದ್ದು, ತೆರೆಮೇಲೆ ಚಿತ್ರ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.


Click it and Unblock the Notifications











