"ಎಲ್ಲದ್ದನ್ನೂ ತೂಕ ಮಾಡೋದಲ್ಲ, ಜಡ್ಜ್ ಮಾಡೋದಲ್ಲ"; 'ದೇವರ' ಮಿಶ್ರ ಪ್ರತಿಕ್ರಿಯೆ ಬಗ್ಗೆ ತಾರಕ್ ಬೇಸರ

ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸೆಪ್ಟೆಂಬರ್ 27ಕ್ಕ ತೆರೆಕಂಡ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಗಳಿಕೆ ಕಂಡಿದೆ. ದೊಡ್ಡ ಸಿನಿಮಾ ಎನ್ನುವ ಕಾರಣಕ್ಕೆ ಓಟಿಟಿ ರಿಲೀಸ್‌ವರೆಗೆ ಕಾಯದೇ ಜನ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ.

ಕೊರಟಾಲ ಶಿವ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪಲಿಲ್ಲ ಎನ್ನುವ ಬೇಸರವಿದೆ. ಆದಾಗ್ಯೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಸಂತಸ ತಂದಿದೆ. ಎನ್‌ಟಿಆರ್‌ ಆರ್ಟ್ಸ್ ಹಾಗೂ ಯುವಸುಧಾ ಆರ್ಟ್ಸ್ ಬ್ಯಾನರ್‌ನಲ್ಲಿ 'ದೇವರ' ಸಿನಿಮಾ ನಿರ್ಮಾಣ ಆಗಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿರುವ ಬಗ್ಗೆ ನಟ ತಾರಕ್ ಮಾತನಾಡಿದ್ದಾರೆ.

Jr Ntr Opens up on Devara movie mixed talk why we judging everything

'ದೇವರ' ಚಿತ್ರದಲ್ಲಿ ತಾರಕ್ ಜೋಡಿಯಾಗಿ ಜಾನ್ವಿ ಕಪೂರ್ ಮಿಂಚಿದ್ದಾರೆ. ಸೈಫ್ ಅಲಿಖಾನ್ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಇನ್ನು ಪ್ರಕಾಶ್ ರಾಜ್, ಶ್ರೀಕಾಂತ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ದೇವರ ಹಾಗೂ ವರದ ಹೀಗೆ ಎರಡು ಪಾತ್ರಗಳಲ್ಲಿ ತಂದೆ ಮಗನಾಗಿ ಯಂಗ್ ಟೈಗರ್ ಅಬ್ಬರಿಸಿದ್ದಾರೆ. ಸಮುದ್ರದ ದಡದ 4 ಊರುಗಳ ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.

ಹಣಕ್ಕಾಗಿ ಸಮುದ್ರ ಮಾರ್ಗದಲ್ಲಿ ಅಕ್ರಮವಾಗಿ ಸರಕು ಸಾಗಾಣಿಕೆ ಮಾಡುವುದನ್ನೇ ಕಾಯಕ ಮಾಡಿಕೊಂಡ ಊರಿನ ಜನ. ತನ್ನವರಿಗಾಗಿ 'ದೇವರ' ಕೂಡ ಈ ದುಷ್ಕೃತ್ಯಕ್ಕೆ ಕೈ ಹಾಕಿರುತ್ತಾನೆ. ಅದು ತಪ್ಪು ಎಂದು ಗೊತ್ತಾದ ಮೇಲೆ ಅದರಿಂದ ದೂರ ಇರಲು ಪ್ರಯತ್ನಿಸುತ್ತಾನೆ. ತನ್ನವರಿಗೂ ಇದನ್ನೇ ಹೇಳುತ್ತಾನೆ. ಆದರೆ ಹಣಕ್ಕೆ ಆಸೆ ಬಿದ್ದ ಇತರರು ಅದನ್ನು ನಿಲ್ಲಿಸಲು ಮುಂದಾಗದೇ ಇದ್ದಾಗ ತಾನೇ ಅದಕ್ಕೆ ಅಡ್ಡಗಾಲಾಗುತ್ತಾನೆ.

ಜ್ಯೂ. ಎನ್‌ಟಿಆರ್ ಅಭಿಮಾನಿಗಳಿಗೆ 'ದೇವರ' ಸಿನಿಮಾ ಇಷ್ಟವಾಗಿದೆ. ಇನ್ನು ಮೊದಲ ವಾರ ಸಿನಿಮಾ 405 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಇತ್ತೀಚೆಗೆ ಭರ್ಜರಿ ಸಕ್ಸಸ್ ಪಾರ್ಟಿ ಮಾಡಿ ಚಿತ್ರತಂಡ ಸಂಭ್ರಮಿಸಿದೆ. ತಾರಕ್ ನಟನೆ ಹಾಗೂ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಸಿನಿಮಾ ಸಕ್ಸಸ್ ಬಗ್ಗೆ ನಟ ಜ್ಯೂ. ಎನ್‌ಟಿಆರ್ ಹಾಗೂ ನಿರ್ದೇಶಕ ಕೊರಟಾಲ ಶಿವ ಮಾತನಾಡಿದ್ದಾರೆ.

"ಯಾವುದೇ ಸಿನಿಮಾ ನೋಡುವಾಗ ನನ್ನನ್ನು ಸೇರಿದಂತೆ ಎಲ್ಲರೂ ಸಾಕಷ್ಟು ಲೆಕ್ಕಾಚಾರ ಹಾಕಿಕೊಳ್ಳುತ್ತೇವೆ. ಬಹುತೇಕರು ಸಿನಿಮಾ ನೋಡುತ್ತಿದ್ದಂತೆ ಚೆನ್ನಾಗಿಲ್ಲ ಎಂದುಬಿಡುತ್ತಾರೆ. ಅದು ಬಹಳ ಅಭ್ಯಾಸ ಆಗಿಬಿಟ್ಟಿದೆ. ಜೀವನದಲ್ಲಿ ನಾವೆಲ್ಲ ಬಹಳ ನೆಗೆಟಿವ್ ಆಗಿಬಿಟ್ಟಿದ್ದೀವಿ. ಅಭಯ್, ಭಾರ್ಗವ್(ತಾರಕ್ ಮಕ್ಕಳು) ರೀತಿ ನಾವೆಲ್ಲಾ ಯಾಕೆ ಇನ್ನೋಸೆಂಟ್ ಅಲ್ಲ ಎನಿಸುತ್ತಿರುತ್ತದೆ. ಅವರಿಬ್ಬರಿಗೂ ಸಿನಿಮಾ ಇಷ್ಟವಾಯಿತು"

"ನಾವೆಲ್ಲಾ ಸದಾ ಅದು ಸರಿಯಿಲ್ಲ, ಇದು ಸರಿಯಿಲ್ಲ, ಅಲ್ಲಿಂದ ಶುರುವಾಯಿತು ಇಲ್ಲಿಂದ ಶುರುವಾಯಿತು ಅಂತ ಸಿನಿಮಾ ನೋಡಿ ಕಾಮೆಂಟ್ ಮಾಡ್ತೀವಿ. ಪ್ರತಿ ಚಿತ್ರವನ್ನು ನಾವು ಭಾರೀ ಹೋಲಿಕೆ ಮಾಡಿ, ತಕ್ಕಡಿ ಹಿಡಿದು ತೂಕ ಹಾಕುತ್ತಾ ಪ್ರತಿಯೊಂದನ್ನು ಜಡ್ಜ್ ಮಾಡುತ್ತಾ ಇದ್ದೀವಿ. ನನ್ನ ಮಕ್ಕಳು, ಮಡದಿ ಯಾವುದೇ ಸಿನಿಮಾ ನೋಡಿದರೂ ಇಷ್ಟಪಡುತ್ತಾರೆ. ಅವರಂತೆ ನಾವು ಯಾಕೆ ಇನ್ನೋಸೆಂಟ್ ಆಗಲ್ಲ ಸಿನಿಮಾ ನೋಡುವಾಗ ಎನಿಸುತ್ತದೆ. ಏನು ಮಾಡೋದು ಕಾಲ ಹಂಗಿದೆ" ಎಂದು ತಾರಕ್ ಪ್ರತಿಕ್ರಿಯಿಸಿದ್ದಾರೆ.

ನನ್ನ ಪ್ರಕಾರ ಯಾವುದೇ ವಿಚಾರ ಪರಾಕಾಷ್ಟೆಗೆ ಹೋಗಿ, ಬಳಿಕ ಸರಿಯಾಗಿ ವಾಪಸ್ ಬರುತ್ತದೆ ಎನಿಸುತ್ತಿದೆ. ಸಿನಿಮಾ ನೋಡುವ ವಿಚಾರದಲ್ಲಿ ಕೂಡ ನಮ್ಮ ಆಲೋಷನೆ ಅಭಿಪ್ರಾಯಗಳು ಇದೇ ರೀತಿ ಬದಲಾಗುತ್ತದೆ ಎನ್ನುವ ನಿರೀಕ್ಷೆಯಿದೆ ಎಂದು ಜ್ಯೂ. ಎನ್‌ಟಿಆರ್ ವಿವರಿಸಿದ್ದಾರೆ.

More from Filmibeat

English summary
Devara day 9 boxoffice collection; Actor Jr Ntr talked about mixed reviews
Read more about: ntr tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X