ಸ್ಟಾರ್ ಕಿಡ್ ಆದರೆ ಆಗುವ ಲಾಭ ನಷ್ಟ ಏನು ; ಸ್ವಜನಪಕ್ಷಪಾತದ ಬಗ್ಗೆ ಜ್ಯೂ.ಎನ್.ಟಿ.ಆರ್ ಹೇಳಿದ್ದೇನು ..?
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ ಹೀಗೆ ಬರುವ ಎಲ್ಲರಿಗೂ ಗೆಲುವು ಸಿಗಲ್ಲ. ಸಿಕ್ಕರೂ ಅವರಲ್ಲಿ ಬಹುತೇಕರ ತಲೆ ನಿಲ್ಲುವುದಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಅನಾಯಾಸವಾಗಿ ಸಿಕ್ಕ ಸ್ಟಾರ್ ಡಂನ ಸಂಭಾಳಿಸಿಕೊಂಡು ಹೋಗ್ತಾರೆ. ಕಾಲು ನೆಲದೇ ಮೇಲೆ ಇಟ್ಟು ನಡೆಯುತ್ತಾರೆ. ತಂದೆ -ತಾಯಿ ಅಥವಾ ತಾತನ ಕಾರಣಕ್ಕೆ ಸಿಕ್ಕ ಜನಪ್ರಿಯತೆಯನ್ನ ಜವಾಬ್ದಾರಿಯೆಂದು ಅರಿತು ಮುನ್ನಡೆಯುತ್ತಾರೆ. ತಮ್ಮ ಕುಟುಂಬದ ನೆರಳಿನಾಚೆ ಬಂದು ತಮ್ಮದೇ ಬದುಕು ಕಟ್ಟಿಕೊಳ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮದೇ ಅಸ್ತಿತ್ವ ಕಂಡುಕೊಳ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಜ್ಯೂ.ಎನ್.ಟಿ.ಆರ್ .
ಎನ್.ಟಿ.ಆರ್ ಕುಟುಂಬದಿಂದ ಬಂದರೂ, ತಮ್ಮ ಪರಿಶ್ರಮದಿಂದ ಆಂಧ್ರದಲ್ಲಿ ಅಷ್ಟೇ ಅಲ್ಲ ಭಾರತದೆಲ್ಲೆಡೆ ಅಭಿಮಾನಿ ಬಳಗವನ್ನ ಸಂಪಾದಿಸಿರುವ ಜ್ಯೂ.ಎನ್.ಟಿ.ಆರ್ ಹಿಂದೊಮ್ಮೆ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದರು. ಎಲ್ಲವೂ ಸುಲಭಕ್ಕೆ ಸಿಕ್ಕಿದೆ ಎಂದ ಮಾತ್ರಕ್ಕೆ, ಬದುಕು ಸುಲಲಿತವಾಗಿ ಇರಲ್ಲ ಎಂದಿದ್ದರು.

ನಿಜಾ, ಸ್ಟಾರ್ ಕಿಡ್ ಎಂಬ ಪಟ್ಟ ಆರಂಭದಲ್ಲಿ ನನಗೆ ಖುಷಿ ಕೊಡ್ತಿತ್ತು. ಹೆಮ್ಮೆ ಮೂಡಿಸಿ ಆತ್ಮ ವಿಶ್ವಾಸವನ್ನೂ ಹೆಚ್ಚಿಸುತ್ತಿತ್ತು. ಆದರೆ ಕಾಲ ಬದಲಾದಂತೆ ನಮ್ಮಲ್ಲಿ ನಿಜವಾದ ಸಾಮರ್ಥ್ಯ ಇದ್ದರೆ ಮಾತ್ರ ಜನರ ಪ್ರೀತಿ ಸಿಗುತ್ತೆ, ಇಲ್ಲದಿದ್ದರೆ ಇಲ್ಲ ಎಂಭ ಸತ್ಯವೂ ನನಗೆ ಅರಿವಾಯಿತು ಎಂದು ಸಂದರ್ಶನವೊಂದರಲ್ಲಿ ಜ್ಯೂ.ಎನ್.ಟಿ.ಆರ್ ಈ ಹಿಂದೆ ಹೇಳಿದ್ದರು
ಇನ್ನೂ ಎಲ್ಲದಕ್ಕಿಂತ ಹೆಚ್ಚಾಗಿ ಚಿತ್ರವೊಂದು ಗೆದ್ದಾಗ ಎಲ್ಲರಿಗೂ ಸಹಜವಾದ ಖುಷಿಯಾಗುತ್ತೆ. ಆದರೆ ಸ್ಟಾರ್ ಕಿಡ್ ಆಗಿ ಸೋತಾಗ ಬದುಕು ದೊಡ್ಡ ಪಾಠ ಕಲಿಸುತ್ತೆ, ಮನೆಯ ದೊಡ್ಡವರ ಹೆಸರನ್ನ ಉಳಿಸಿಕೊಂಡು ಹೋಗಬೇಕೆಂಬ ಜವಾಬ್ಧಾರಿಯ ಅರಿವನ್ನೂ ಮೂಡಿಸುತ್ತೆ ಎಂದು ಜ್ಯೂ.ಎನ್.ಟಿ.ಆರ್ ತಮ್ಮ ಮನದ ಮಾತನ್ನ ಹಂಚಿಕೊಂಡಿದ್ದರು. ಸ್ಟಾರ್ ಕುಟುಂಬದಲ್ಲಿ ಹುಟ್ಟಿದರೆ ಪ್ರಾರಂಭದಲ್ಲಿ ಅವಕಾಶ ಸುಲಭವಾಗಿ ಸಿಗುತ್ತೆ ಆದರೆ ಆ ನಂತರ ಉಳಿಸಿಕೊಂಡು ಮುಂದುವರೆಯುವುದು ನಮ್ಮ ಮೇಲಿರುತ್ತೆ ಎಂದಿದ್ದರು.

ಆರ್.ಆರ್.ಆರ್. ಚಿತ್ರದ ಪ್ರಚಾರದ ಸಮಯದಲ್ಲಿ ಜ್ಯೂ.ಎನ್.ಟಿ.ಆರ್ ಆಡಿದ್ದ ಈ ಮಾತುಗಳೂ ಇದೀಗ ಮತ್ತೊಮ್ಮೆ ಎಲ್ಲೆಡೆ ಕೇಳಿ ಬರುತ್ತಿವೆ. ವಿಡಿಯೋ ವೈರಲ್ ಆಗುತ್ತಿದೆ. ಸ್ವಜನ ಪಕ್ಷ ಪಾತದ ಬಗ್ಗೆ ನಿಧಾನವಾಗಿ ಚರ್ಚೆ ಇನ್ನೊಮ್ಮೆ ನಡೆಯುತ್ತಿದೆ.


Click it and Unblock the Notifications











