ಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರ

'ಕೆಜಿಎಫ್ 2' ಸಿನಿಮಾ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಹಿಟ್ ಆದ ಬೆನ್ನಲ್ಲೆ ಯಶ್‌ಗೆ ಪ್ಯಾನ್ ಇಂಡಿಯಾ ಸ್ಟಾರ್ ಎಂದೂ ಪ್ರಶಾಂತ್ ನೀಲ್‌ಗೂ ಪ್ಯಾನ್ ಇಂಡಿಯಾ ಡೈರೆಕ್ಟರ್ ಎಂಬ ಖ್ಯಾತಿ ಸೇರಿಕೊಂಡಿವೆ.

ಯಶ್‌ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇರುವಂತೆಯೇ ಪ್ರಶಾಂತ್ ನೀಲ್ ಮುಂದೆ ಯಾವ ಸ್ಟಾರ್ ಜೊತೆ ಸಿನಿಮಾ ಮಾಡುತ್ತಾರೆ ಎಂಬುದು ಸಹ ಕುತೂಹಲ ಕೆರಳಿಸಿದೆ. ಅದಕ್ಕೆ ತಕ್ಕಂತೆ ಪ್ರಶಾಂತ್ ನೀಲ್ ಸಹ 'ಕೆಜಿಎಫ್ 2' ಬಳಿಕ ದೊಡ್ಡ ಸ್ಟಾರ್ ನಟರ ಜೊತೆಗೆ ಕೈ ಜೋಡಿಸುತ್ತಿದ್ದಾರೆ.

ಇದೀಗ ಪ್ರಭಾಸ್ ಸಿನಿಮಾ ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ನೀಲ್, ಅದರ ಬಳಿಕ ಜೂ ಎನ್‌ಟಿಆರ್ ನಟನೆಯ ಹೊಸ ಸಿನಿಮಾ ನಿರ್ದೇಶನ ಮಾಡುವುದು ಖಾತ್ರಿಯಾಗಿದೆ. ಆದರೆ ಆ ಸಿನಿಮಾ ಶೀಘ್ರವಾಗೇನೂ ಚಿತ್ರೀಕರಣ ಪ್ರಾರಂಭವಾಗುವುದಿಲ್ಲ. ಅದಕ್ಕಿನ್ನೂ ಸಾಕಷ್ಟು ಸಮಯ ಬೇಕಿದೆ. ಈ ಬಗ್ಗೆ ಅವರೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ?

ಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ?

ಆಂಧ್ರದಲ್ಲಿ ಅಲ್ಲಿನ ತೆಲುಗು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಪ್ರಶಾಂತ್ ನೀಲ್, ''ಜೂ ಎನ್‌ಟಿಆರ್ ಜೊತೆಗಿನ ಸಿನಿಮಾ ಚಿತ್ರೀಕರಣ ಯಾವಾ ಪ್ರರಾಂಭ ಮಾಡುತ್ತೀನಿ ಎನ್ನುವುದು ನನಗೂ ಖಾತ್ರಿಯಾಗಿ ಗೊತ್ತಿಲ್ಲ. ಬಹುಷಃ ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪ್ರಾರಂಭ ಮಾಡಬಹುದು'' ಎಂದಿದ್ದಾರೆ. ಶೂಟಿಂಗ್ ಪ್ರಾರಂಭವೇ ಮುಂದಿನ ವರ್ಷ ಆದರೆ ಆ ಸಿನಿಮಾ ಬಿಡುಗಡೆ ಆಗುವುದಕ್ಕೆ ಇನ್ನೊಂದು ವರ್ಷ ತೆಗೆದುಕೊಳ್ಳುವುದು ಪಕ್ಕಾ ಎನ್ನಬಹುದು.

ಹುಟ್ಟೂರಿಗೆ ಭೇಟಿ ನೀಡಿದ್ದ ಪ್ರಶಾಂತ್ ನೀಲ್

ಹುಟ್ಟೂರಿಗೆ ಭೇಟಿ ನೀಡಿದ್ದ ಪ್ರಶಾಂತ್ ನೀಲ್

ಆಂಧ್ರದಲ್ಲಿರುವ ತಮ್ಮ ಹುಟ್ಟೂರಿಗೆ ಭೇಟಿ ನೀಡಿ ಅಲ್ಲಿನ ದೇವಾಲಯಕ್ಕೆ ಭೇಟಿ ನೀಡಿದ ಪ್ರಶಾಂತ್ ನೀಲ್. ದೇವರ ದರ್ಶನ ಪಡೆದುಕೊಂಡರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು, ನಮ್ಮ ಊರಿನಲ್ಲಿ ಇಷ್ಟು ಸುಂದರವಾದ ದೇವಾಲಯ ನೋಡಿ ಖುಷಿಯಾಯಿತು. ನಮ್ಮ ಚಿಕ್ಕಪ್ಪನವರು ದೇವಾಲಯವನ್ನು ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ನಮ್ಮ ಪೂರ್ವಜರು ಪೂಜೆ ಮಾಡಿದ ದೇವಾಲಯ ಇದಾಗಿದೆ, ಮತ್ತೆ ಇಲ್ಲಿಗೆ ಬಂದಿದ್ದು ಖುಷಿಯ ಸಂಗತಿ'' ಎಂದಿದ್ದಾರೆ.

ನಿರ್ಮಾಪಕರಿಂದ ಒತ್ತಡ ಇಲ್ಲ: ಪ್ರಶಾಂತ್ ನೀಲ್

ನಿರ್ಮಾಪಕರಿಂದ ಒತ್ತಡ ಇಲ್ಲ: ಪ್ರಶಾಂತ್ ನೀಲ್

ಇದೇ ಸಂದರ್ಭದಲ್ಲಿ ಪ್ರಭಾಸ್ ಬಗ್ಗೆಯೂ ಮಾತನಾಡಿರುವ ಪ್ರಶಾಂತ್ ನೀಲ್, ಪ್ರಭಾಸ್ ಜೊತೆಗೆ ಸಿನಿಮಾ ನಡೆಯುತ್ತಿದೆ. ಕೆಲವರು ಸಿಐಜೆನಲ್ಲಿ ಸಿನಿಮಾ ಮಾಡಿ ಮುಗಿಸಿಬಿಡುತ್ತಾರೆ. ಆದರೆ ನಾವು ನಿಜವಾದ ಧೂಳಿನಲ್ಲಿ ಸಿನಿಮಾ ತೆಗೆಯುತ್ತಿದ್ದೇವೆ ಅದು ಸಿನಿಮಾಕ್ಕೆ ಒಳ್ಳೆಯ ಲುಕ್ ಮತ್ತು ರಿಯಾಲಿಟಿ ನೀಡುತ್ತದೆ ಎಂದಿದ್ದಾರೆ. ಇಷ್ಟೇ ವರ್ಷದಲ್ಲಿ ಸಿನಿಮಾ ಮುಗಿಸಬೇಕು ಎಂಬ ನಿಯಮ ಇದೆಯಾ? ಎಂಬ ಪ್ರಶ್ನೆಗೆ 'ಪ್ರಭಾಸ್‌ ಆಗಲಿ ನಿರ್ಮಾಪಕರಿಂದಾಗಿ ಯಾವುದೇ ಸಮಯದ ಒತ್ತಡ ಇಲ್ಲ'' ಎಂದಿದ್ದಾರೆ.

ಮುಂದಿನ ವರ್ಷ ಸೆಪ್ಟೆಂಬರ್‌ಗೆ ಸಲಾರ್ ಬಿಡುಗಡೆ

ಮುಂದಿನ ವರ್ಷ ಸೆಪ್ಟೆಂಬರ್‌ಗೆ ಸಲಾರ್ ಬಿಡುಗಡೆ

ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾ ಮುಂದಿನ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗುವುದಾಗಿ ಇಂದಷ್ಟೆ ಹೊಂಬಾಳೆ ಫಿಲಮ್ಸ್ ಘೋಷಿಸಿದ್ದಾರೆ. ಜೂ ಎನ್‌ಟಿಆರ್ ಜೊತೆಗಿನ ಸಿನಿಮಾ ಸಹ ಮುಂದಿನ ವರ್ಷ ಏಪ್ರಿಲ್‌ನಲ್ಲಿ ಆರಂಭವಾಗಿ 2024 ರ ಏಪ್ರಿಲ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ.

More from Filmibeat

English summary
Director Prashant Neel said he will start shooting of movie with Jr NTR by next year April. Salaar movie will release on 2023 September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X