ರಾಜಮೌಳಿ ಮುಂದಿನ ಸಿನಿಮಾ 2026ಕ್ಕೆ ಬಿಡುಗಡೆ!

ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಘೋಷಣೆ ಮಾಡಿದ್ದು 2017 ರಲ್ಲಿ ಬಿಡುಗಡೆ ಆಗುತ್ತಿರುವುದು 2022 ರಲ್ಲಿ!

ಭಾರತದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಳ್ಳುವ ರಾಜಮೌಳಿ ಬಗ್ಗೆ ಇರುವ ಒಂದು ಪ್ರಮುಖ ದೂರೆಂದರೆ ಅವರು ಸಿನಿಮಾಗಳನ್ನು ಬಹಳ ನಿಧಾನಕ್ಕೆ ಮಾಡುತ್ತಾರೆಂಬುದು.

'ಬಾಹುಬಲಿ' ಸರಣಿಯ ಸಿನಿಮಾ ಪೂರ್ಣ ಮಾಡಲು ಐದು ವರ್ಷ ಸಮಯ ತೆಗೆದುಕೊಂಡರು. ಇದೀಗ 'ಆರ್ಆರ್ಆರ್' ಸಿನಿಮಾಕ್ಕೆ ಮೂರು ವರ್ಷಕ್ಕೂ ಹೆಚ್ಚು ಸಮಯ ಹಿಡಿಯಿತು. ರಾಜಮೌಳಿ ನಿರ್ದೇಶಿಸಲಿರುವ ಮುಂದಿನ ಸಿನಿಮಾಕ್ಕೆ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ!

Jr NTR Said Rajamoulis Next Movie Will Release By 2026

'ಆರ್ಆರ್ಆರ್' ಬಳಿಕ ಮಹೇಶ್ ಬಾಬು ಜೊತೆಗೆ ರಾಜಮೌಳಿ ಸಿನಿಮಾ ಮಾಡುತ್ತಿದ್ದು, ಸಿನಿಮಾ ಘೋಷಣೆ ಮಾಡಲಾಗಿದೆ. ಆದರೆ ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಈ ಸಿನಿಮಾ 2026ಕ್ಕೆ ಬಿಡುಗಡೆ ಆಗಲಿದೆ ಎಂದು ರಾಜಮೌಳಿಯ ಆಪ್ತ ಸ್ನೇಹಿತ, ನಟ ಜೂ ಎನ್‌ಟಿಆರ್ ಹೇಳಿದ್ದಾರೆ.

'ಆರ್ಆರ್ಆರ್' ಸಿನಿಮಾದ ಸಂದರ್ಶನವೊಂದರಲ್ಲಿ ರಾಜಮೌಳಿಯ ಮುಂದಿನ ಸಿನಿಮಾ ಬಗ್ಗೆ ಪ್ರಶ್ನೆ ಎದುರಾದಾಗ ಮಾತನಾಡಿದ ನಟ ಜೂ ಎನ್‌ಟಿಆರ್, ''ಈ ವಿಷಯದ ಬಗ್ಗೆ ನನಗೆ ಮಾಹಿತಿ ಇದೆ. ಈ ಸಿನಿಮಾದ ಮಾತುಕತೆ 2022 ರಲ್ಲಿ ಆರಂಭವಾಗಲಿದೆ, ಕತೆ 2023 ಕ್ಕೆ ಪೂರ್ಣಗೊಳ್ಳಲಿದೆ. 2024 ರಲ್ಲಿ ಚಿತ್ರೀಕರಣ ಪ್ರಾರಂಭವಾಗಿ, 2026 ಕ್ಕೆ ಬಿಡುಗಡೆ ಆದರೆ ಆಗಬಹುದು'' ಎಂದು ತಮಾಷೆಯಾಗಿ ಹೇಳಿದರು.

ಕೂಡಲೇ ಜೂ ಎನ್‌ಟಿಆರ್ ಇಂದ ಮೈಕ್ ಖಸಿದುಕೊಂಡ ನಿರ್ದೇಶಕ ರಾಜಮೌಳಿ, ''ಜೂ ಎನ್‌ಟಿಆರ್ ಹೇಳಿರುವುದು ಸುಳ್ಳು, ಕೊರೊನಾ ಏನೂ ಇಲ್ಲದೇ ಇದ್ದರೆ 2025'' ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದರು. ರಾಜಮೌಳಿಯ ಮಾತಿಗೆ ಎಲ್ಲರೂ ನಕ್ಕರು.

ರಾಜಮೌಳಿ ತಮ್ಮ ಸಿನಿಮಾಗಳ ಚಿತ್ರೀಕರಣವನ್ನು ಬಹಳ ತಡವಾಗಿ ಮಾಡುತ್ತಾರೆ. ಪ್ರತಿ ದೃಶ್ಯವೂ ಚೆನ್ನಾಗಿ ಮೂಡಿ ಬರಬೇಕೆಂಬ ಆಸೆಯಿಂದಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುವ ರಾಜಮೌಳಿ ಪ್ರಯೋಗಗಳಿಗಾಗಿಯೇ ಸಾಕಷ್ಟು ಸಮಯ ವ್ಯಯಿಸುತ್ತಾರೆ ಎನ್ನಲಾಗುತ್ತದೆ. ತಡವಾಗಿ ಚಿತ್ರೀಕರಣ ಮಾಡಿದರೂ ಅದ್ಭುತವಾದ ಸಿನಿಮಾವನ್ನು ರಾಜಮೌಳಿ ಕೊಡುತ್ತಾರೆ ಎಂಬುದು ಪ್ರೇಕ್ಷಕರ ನಂಬಿಕೆ.

ಮಹೇಶ್ ಬಾಬು ಸಿನಿಮಾವನ್ನು ರಾಜಮೌಳಿ ನಿರ್ದೇಶಿಸಲಿದ್ದು, ಈ ಸಿನಿಮಾವು ಅರಣ್ಯದಲ್ಲಿ ನಡೆವ ಸಾಹಸಗಳನ್ನು ಒಳಗೊಂಡಿರಲಿದೆಯಂತೆ. ಕತೆಯನ್ನು ರಾಜಮೌಳಿಯ ತಂದೆ ವಿಜಯೇಂದ್ರಪ್ರಸಾದ್ ರಚಿಸಿದ್ದು, ಸಿನಿಮಾದ ಚಿತ್ರೀಕರಣ 2022 ರ ಆಗಸ್ಟ್ ವೇಳೆಗೆ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡ ಅಮೆಜಾನ್ ಕಾಡುಗಳಿಗೆ ಹೋಗಲಿದೆ.

ಪ್ರಸ್ತುತ 'ಆರ್ಆರ್ಆರ್' ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವು ತೆಲುಗು ರಾಜ್ಯಗಳ ಐತಿಹಾಸಿಕ ಹೋರಾಟಗಾರರಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಜೀವನ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ನಟಿ ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವು ಜನವರಿ 07ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆದಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Actor Jr NTR said Rajamouli's next movie will release by 2026. Rajamouli will direct his next movie for Mahesh Babu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X