For Quick Alerts
  ALLOW NOTIFICATIONS  
  For Daily Alerts

  Jr.NTR about Puneeth: ಪುನೀತ್ ಸರ್ ಇಲ್ಲ ಅಂತ ನಾನು ಅಳುವುದಿಲ್ಲ ಎಂದ ಜೂ.ಎನ್‌ಟಿಆರ್

  |

  ನಿನ್ನೆ(ಮಾರ್ಚ್ 19) ಚಿಕ್ಕಬಳ್ಳಾಪುರದಲ್ಲಿ RRR ಪ್ರಿ-ರಿಲೀಸ್ ಇವೆಂಟ್ ನಡೆದಿದೆ. ದೊಡ್ಡ ವೇದಿಕೆಯಲ್ಲಿ ರಾಜಮೌಳಿ, ಜೂ.ಎನ್‌ಟಿಆರ್ ಹಾಗೂ ರಾಮ್‌ ಚರಣ್‌ ಅಂತಹ ದಿಗ್ಗಜರಿದ್ದರು. ಸಿನಿಮಾ ಅಭಿಮಾನಿಗಳಿಗೆ ಈ ಮೂವರು ಆಕರ್ಷಣೆಯಾಗಿದ್ದರು. ತಮ್ಮ ನೆಚ್ಚಿನ ಸೆಲೆಬ್ರೆಟಿ ಏನು ಹೇಳುತ್ತಾರೆ? ಅಂತ ಕೇಳು ಕಾತುರದಿಂದ ಕಾದು ಕೂತಿದ್ದರು.

  ಇದೇ RRR ವೇದಿಕೆ ಮೇಲೆ ಜೂ.ಎನ್‌ಟಿಆರ್,ರಾಮ್‌ಚರಣ್, ರಾಜಮೌಳಿ ಜೊತೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿದ್ದರು. ಎಲ್ಲರೂ RRR ಸಿನಿಮಾದ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಜೂ.ಎನ್‌ಟಿಆರ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬಗ್ಗೆ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನು ರವಾನೆ ಮಾಡಿದ್ದಾರೆ.

  RRR ಇವೆಂಟ್‌ನಲ್ಲಿ ಬಾಟಲಿ, ಚಪ್ಪಲಿ ಎಸೆದಾಟ, ಪೊಲೀಸರ ಲಾಠಿ ಪ್ರಹಾರಕ್ಕೆ ಕೆಲವರಿಗೆ ಗಾಯRRR ಇವೆಂಟ್‌ನಲ್ಲಿ ಬಾಟಲಿ, ಚಪ್ಪಲಿ ಎಸೆದಾಟ, ಪೊಲೀಸರ ಲಾಠಿ ಪ್ರಹಾರಕ್ಕೆ ಕೆಲವರಿಗೆ ಗಾಯ

  ಜೂ.ಎನ್‌ಟಿಆರ್ ಹಾಗೂ ಪುನೀತ್ ರಾಜ್‌ಕುಮಾರ್ ಸ್ನೇಹದ ಬಗ್ಗೆ ಇಡಿ ಜಗತ್ತಿಗೇ ಗೊತ್ತಿದೆ. ಅಪ್ಪು ಸಿನಿಮಾಗಾಗಿ 'ಗೆಳೆಯ ಗೆಳೆಯಾ' ಅಂತ ಹಾಡಿದ್ದ ಜೂ.ಎನ್‌ಟಿಆರ್ ತಮ್ಮ ಸ್ನೇಹದ ಬಗ್ಗೆ ಜಗತ್ತಿಗೆ ಸಾರಿ ಹೇಳಿದ್ದರು. ಆದರೆ, ಇವರಿಬ್ಬರ ಸ್ನೇಹ ಇಂದು, ನಿನ್ನೆಯದಲ್ಲ. ದಶಕಗಳಷ್ಟು ಹಳೆಯ ಸ್ನೇಹ. ಇದೇ ಕಾರಣಕ್ಕೆ ವೇದಿಕೆ ಮೇಲೆ ಪುನೀತ್ ನಮ್ಮೊಂದಿಗೆ ಇಲ್ಲ ಅಂತ ನಾನು ಅಳುವುದಿಲ್ಲ ಎಂದು ಹೇಳಿದ್ದಾರೆ. ಯಾಕೆ ಹೀಗಂದರು ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ಅಪ್ಪು ಇಲ್ಲ ಅನ್ನೋದನ್ನು ನಂಬುವುದಿಲ್ಲ

  ಅಪ್ಪು ಇಲ್ಲ ಅನ್ನೋದನ್ನು ನಂಬುವುದಿಲ್ಲ

  RRR ಸಿನಿಮಾದ ಪ್ರಿ-ರಿಲೀಸ್ ಇವೆಂಟ್‌ ಕೊಂಚ ಭಾವನಾತ್ಮಕವಾಗಿಯೇ ಇತ್ತು. ಈ ವೇದಿಕೆ ಮೇಲೆ ಜೂ.ಎನ್‌ಟಿಆರ್ ತನ್ನ ಗೆಳೆಯ ಅಪ್ಪು ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಪುನೀತ್ ಸರ್ ನಮ್ಮೊಂದಿಗಿಲ್ಲ ಎನ್ನುವುದನ್ನು ನಾನು ನಂಬುವುದಿಲ್ಲ ಎಂದು ಹೇಳಿದ್ದಾರೆ. "ನೀವು ಗಮನಿಸಿದ್ದೀರೋ ಇಲ್ಲವೋ. ಪುನೀತ್ ಸರ್ ನಮ್ಮೊಂದಿಲ್ಲ ಇಲ್ಲ ಅನ್ನುವುದನ್ನು ನಾನು ಇನ್ನೂ ನಂಬಿಲ್ಲ. ನನಗೆ ಗೊತ್ತಿಲ್ಲ. ಯಾಕೋ ಹಾಗೆ ಅನಿಸುತ್ತಿದೆ. ಅವರ ಪಾರ್ಥೀವ ಶರೀರವನ್ನು ನೋಡಲು ನಾನು ಇಲ್ಲಿಗೆ ಬಂದಿದ್ದೆ. ನನಗೆ ಯಾಕೆ ಅನಿಸಿತ್ತು. ಎಲ್ಲಿಗೂ ಹೋಗಿಲ್ಲ. ಈ ಗಾಳಿಯಲ್ಲಿ, ಈ ನೀರಿನಲ್ಲಿ, ಈ ಮಣ್ಣಿನಲ್ಲಿ, ನಿಮ್ಮೆಲ್ಲರ ಹೃದಯದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ ಅಂತ ನನಗೆ ಅನಿಸುತ್ತಿದೆ.

  ಅಪ್ಪು ಇಲ್ಲ ಅಂತ ಅಳಲ್ಲ

  ಅಪ್ಪು ಇಲ್ಲ ಅಂತ ಅಳಲ್ಲ

  "ನೀವು ಗಮನಿಸಿದ್ದೀರೋ ಇಲ್ಲವೋ. ಇಲ್ಲಿ ಸಣ್ಣ ಬೀಳುತ್ತಿರುವ ಮಳೆಯಲ್ಲಿ, ತಣ್ಣಗೆ ಬೀಸುತ್ತಿರುವ ಗಾಳಿಯಲ್ಲಿ ಇದ್ದಾರೆ ಅಂತ ಅನಿಸುತ್ತಿದೆ. ನೀವು ನಂಬುತ್ತೀರೊ ಇಲ್ಲವೋ ಹೇಳಿ. ನನಗೆ ಈ ಮಾತು ಹೇಳುತ್ತಿರುವುದಕ್ಕೆ ತುಂಬಾನೇ ಆನಂದವಾಗುತ್ತಿದೆ. ಪುನೀತ್ ಸರ್ ನಮ್ಮೊಂದಿಗೆ ಇಲ್ಲ ಎಂದು ನಾನು ಅಳುವುದಿಲ್ಲ. ಅಳಬಾರದು ಕೂಡ." ಎಂದು ವೇದಿಕೆ ಮೇಲೆ ಪುನೀತ್ ಅಭಿಮಾನಿಗಳಿಗೆ ಜೂ.ಎನ್‌ಟಿಆರ್ ಧೈರ್ಯ ತುಂಬಿದ್ದಾರೆ.

  ಅಪ್ಪು ಸಿನಿಮಾಗಳನ್ನ ಸಂಭ್ರಮಿಸೋಣ

  ಅಪ್ಪು ಸಿನಿಮಾಗಳನ್ನ ಸಂಭ್ರಮಿಸೋಣ

  "ಪುನೀತ್ ಸಾರ್ ಅಂದರೆ ಸೆಲೆಬ್ರೆಷನ್, ಪುನೀತ್ ಸರ್ ಅನ್ನು ಸೆಲೆಬ್ರೆಟ್ ಮಾಡೋಣ. ಅವರ ಎಲ್ಲಾ ಸಿನಿಮಾಗಳನ್ನೂ ಸಂಭ್ರಮಿಸೋಣ. ಅವರ ಸಿನಿಮಾ 'ಜೇಮ್ಸ್' ಅನ್ನು ಸಂಭ್ರಮಿಸೋಣ. ಅವರ ಅತ್ಯುತ್ತಮ ವ್ಯಕ್ತಿತ್ವವನ್ನು ಸಂಭ್ರಮಿಸೋಣ. ಇಷ್ಟೊಂದು ಸಂಭ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಎಂದಿಗೂ ಅವರು ನಮ್ಮೊಂದಿಗಿಲ್ಲ ಎಂದು ಬೇಸರ ಪಟ್ಟುಕೊಳ್ಳುವುದು ಬೇಡ." ಎಂದು ಅಪ್ಪು ಅಭಿಮಾನಿಗಳಿಗೆ ಜೂ.ಎನ್‌ಟಿಆರ್ ತಿಳಿಸಿದ್ದಾರೆ.

  'ಜೇಮ್ಸ್' ನೋಡುತ್ತೇನೆ ಎಂದ ನಟ

  'ಜೇಮ್ಸ್' ನೋಡುತ್ತೇನೆ ಎಂದ ನಟ

  RRR ಸಿನಿಮಾ ಜೊತೆನೇ ಜೂ.ಎನ್‌ಟಿಆರ್ ತಮ್ಮ ಗೆಳೆಯ ಪುನೀತ್ ಹಾಗೂ 'ಜೇಮ್ಸ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. 'ಜೇಮ್ಸ್' ಸಿನಿಮಾವನ್ನು ಇನ್ನೂ ನೋಡಿಲ್ಲ. ಸದ್ಯ RRR ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದೇನೆ. ಪ್ರಚಾರಕ್ಕೆ ಅಂತ ಎಲ್ಲಾ ಕಡೆ ಓಡಾಡುತ್ತಿದ್ದೇವೆ. ಈ ಕಾರಣಕ್ಕೆ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಸಿನಿಮಾದ ಎಲ್ಲಾ ಕೆಲಸ ಮುಗಿದ ಮೇಲೆ 'ಜೇಮ್ಸ್' ಸಿನಿಮಾ ನೋಡುತ್ತೇನೆ ಎಂದಿದ್ದಾರೆ.

  English summary
  Jr Ntr talks emotionally about Puneeth Rajkumar in RRR Pre-Release event. Puneeth Rajkumar is with us in the form of water and wind says Jr.NTR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X