RRR: ನಿಮ್ಮ ಊಹೆಗೂ ಮೀರಿದೆ ಜೂ.ಎನ್.ಟಿ.ಆರ್ ಇಂಟ್ರೊಡಕ್ಷನ್ ಸೀನ್.!
ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಅದ್ಧೂರಿತನ ಮತ್ತು ವೈಭೋಗಕ್ಕೆ ಯಾವುದೇ ಬರವಿಲ್ಲ. ಅದಕ್ಕೆ 'ಬಾಹುಬಲಿ' ಚಿತ್ರಕ್ಕಿಂತ ಉತ್ತಮ ಉದಾಹರಣೆ ಬೇಕಾ.? 'ಬಾಹುಬಲಿ' ಚಿತ್ರದಲ್ಲಿ 'ಮಾಹಿಷ್ಮತಿ' ಸಾಮ್ರಾಜ್ಯವನ್ನ ವೈಭವೋಪೇತವಾಗಿ ತೆರೆ ಮೇಲೆ ತೋರಿಸಿದ್ದ ರಾಜಮೌಳಿ ಇದೀಗ 'ಆರ್.ಆರ್.ಆರ್' ಪ್ರಾಜೆಕ್ಟ್ ನ ಕೈಗೆತ್ತಿಕೊಂಡಿದ್ದಾರೆ.
ಸ್ವಾತಂತ್ರ್ಯ ಪೂರ್ವದ ಕೆಲ ಘಟನೆಗಳ ಸುತ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಾಮ್ ಭೀಮ್ ಮತ್ತು ಅಲ್ಲುರಿ ಸೀತಾರಾಮ ರಾಜು ಕುರಿತು 'ಆರ್.ಆರ್.ಆರ್' ಚಿತ್ರಕಥೆ ಹೆಣೆಯಲಾಗಿದೆ.
ಬರೋಬ್ಬರಿ 400 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗುತ್ತಿರುವ 'ಆರ್.ಆರ್.ಆರ್' ಚಿತ್ರದಲ್ಲಿ ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ಯೂನಿಯರ್ ಎನ್.ಟಿ.ಆರ್ ಗೆ ವಿಶೇಷ ಎಂಟ್ರಿ ಇದೆ. ಚಿತ್ರದಲ್ಲಿ ಜೂ.ಎನ್.ಟಿ.ಆರ್ ಇಂಟ್ರೊಡಕ್ಷನ್ ಸೀನ್ ಗಾಗಿ ಸ್ಪೆಷಲ್ ಪ್ಲಾನ್ ಮಾಡಲಾಗಿದೆ.
ಆ ವಿಶೇಷತೆ ಏನು ಅಂತ ತಿಳಿದುಕೊಳ್ಳಬೇಕಿದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ಬಲ್ಲಾಳದೇವನ ಎಂಟ್ರಿ ಸೀನ್ ನೆನಪಿದ್ಯಾ.?
'ಬಾಹುಬಲಿ' ಚಿತ್ರದಲ್ಲಿ ಬಲ್ಲಾಳದೇವನ ಪಾತ್ರ ನಿರ್ವಹಿಸಿದ್ದ ರಾನಾ ದಗ್ಗುಬಾಟಿ ಇಂಟ್ರೊಡಕ್ಷನ್ ಸೀನ್ ತುಂಬಾ ಸ್ಪೆಷಲ್ ಆಗಿತ್ತು. ಗೂಳಿ (ಗ್ರಾಫಿಕ್ಸ್) ಜೊತೆ ಗುದ್ದಾಡುವ ಮೂಲಕ 'ಬಾಹುಬಲಿ' ಚಿತ್ರದಲ್ಲಿ ಬಲ್ಲಾಳದೇವನ ಪರಿಚಯ ಮಾಡಲಾಗಿತ್ತು. ಇದೀಗ 'ಆರ್.ಆರ್.ಆರ್' ಚಿತ್ರದಲ್ಲೂ ರಾಜಮೌಳಿ ಇದೇ ಫಾರ್ಮುಲಾ ಬಳಸುತ್ತಿರುವ ಹಾಗಿದೆ.

ತೋಳದ ಜೊತೆ ಜೂ.ಎನ್.ಟಿ.ಆರ್ ಫೈಟ್
ತೆಲುಗು ಸಿನಿ ಅಂಗಳದಲ್ಲಿ ಹರಿದಾಡುತ್ತಿರುವ ಗಾಸಿಪ್ ನಿಜವೇ ಆದರೆ, 'ಆರ್.ಆರ್.ಆರ್' ಚಿತ್ರದಲ್ಲಿ ತೋಳದ ಜೊತೆಗೆ ಜೂನಿಯರ್ ಎನ್.ಟಿ.ಆರ್ ಫೈಟ್ ಮಾಡಲಿದ್ದಾರೆ. ತೋಳ ಮತ್ತು ಜೂ.ಎನ್.ಟಿ.ಆರ್ ನಡುವಿನ ಫೈಟ್ ಸೀನ್ ಮೂಲಕವೇ ಕೋಮರಾಮ್ ಭೀಮ್ (ಜೂ.ಎನ್.ಟಿ.ಆರ್) ಪಾತ್ರ ಪರಿಚಯವಾಗಲಿದೆ.

ಮಲ್ಟಿ ಸ್ಟಾರರ್ ಚಿತ್ರ
ಆರ್.ಆರ್.ಆರ್ ಚಿತ್ರದಲ್ಲಿ ಕೋಮರಾಮ್ ಭೀಮ್ ಆಗಿ ಜೂ.ಎನ್.ಟಿ.ಆರ್ ಕಾಣಿಸಿಕೊಂಡರೆ, ಅಲ್ಲುರಿ ಸೀತಾರಾಮ ರಾಜು ಆಗಿ ರಾಮ್ ಚರಣ್ ತೇಜಾ ಅಭಿನಯಿಸುತ್ತಿದ್ದಾರೆ. ಇನ್ನೂ ತಾರಾಗಣದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಸಮುದ್ರಖಣಿ, ರಾಹುಲ್ ರಾಮಕೃಷ್ಣ ಸೇರಿದಂತೆ ಹಲವರು ಇದ್ದಾರೆ.

ಇದೇ ವರ್ಷ ಬಿಡುಗಡೆ
ಬ್ರಿಟೀಷರ ವಿರುದ್ಧ ಹೋರಾಡಿದ್ದ ತೆಲುಗಿನ ಸ್ವಾತಂತ್ರ್ಯ ಹೋರಾಟಗಾರರ ಸುತ್ತ 'ಆರ್.ಆರ್.ಆರ್' ಚಿತ್ರಕಥೆಯನ್ನು ರಾಜಮೌಳಿ ಹೆಣೆದಿದ್ದಾರೆ. ಡಿ.ವಿ.ವಿ.ದಾನಯ್ಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಸದ್ಯ ಶೂಟಿಂಗ್ ಹಂತದಲ್ಲಿ ಇರುವ ಈ ಚಿತ್ರ ಜುಲೈ 30 ರಂದು ಬಿಡುಗಡೆ ಆಗಲಿದೆ.


Click it and Unblock the Notifications











