ಬಾಲಯ್ಯನ ಅಖಂಡ ಚಿತ್ರ ನೋಡಿ Jr.NTR ಹೇಳಿದ್ದೇನು ಗೊತ್ತಾ?
ತೆಲುಗು ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ 'ಅಖಂಡ' ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ವಿಶ್ವದಾದ್ಯಂತ ಬಾಲಯ್ಯನ ಅಭಿಮಾನಿಗಳು 'ಅಖಂಡ' ಚಿತ್ರದ ರಿಲೀಸನ್ನು ಹಬ್ಬದ ಹಾಗೆ ಆಚರಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ನಂದಮೂರಿ ಅಭಿಮಾನಿಗಳು ಬಾಲಯ್ಯನ ಜಪ ಮಾಡುತ್ತಾ ಜೈಕಾರ ಹಾಕುತ್ತಾ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಈ ಚಿತ್ರ ಮೊದಲ ದಿನವೇ ಬ್ಲಾಕ್ ಬಸ್ಟರ್ ಆಗುವ ಸುಳಿವು ಕೊಟ್ಟಿದೆ. ಇನ್ನು ಚಿತ್ರ ರಿಲೀಸ್‌ಗೂ ಒಂದು ತಿಂಗಳ ಹಿಂದೆಯೇ ಹಬ್ಬದ ವಾತಾವರಣ ಸೃಷ್ಟಿ ಆಗಿತ್ತು. ಈಗ ಕೇವಲ ಬಾಲಯ್ಯನ ಅಭಿಮಾನಿಗಳು ಮಾತ್ರವಲ್ಲ, ಸಿನಿಮಾ ಸ್ಟಾರ್‌ಗಳಿಗೂ ಬಾಲಯ್ಯ ಮೋಡಿ ಮಾಡಿದ್ದಾರೆ.
ಸದ್ಯ ಬಾಲಯ್ಯ ಅಭಿನಯದ ಅಖಂಡ ಸಿನಿಮಾ ನೋಡಿ ನಟ ಜೂನಿಯರ್ ಎನ್‌ಟಿಆರ್ ಕೂಡ ಮೆಚ್ಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಜೂನಿಯರ್ ಎನ್‌ಟಿಆರ್ ಏನಂದ್ರು? ಮುಂದೆ ಓದಿ...
ಬಾಲಯ್ಯನ ಮೋಡಿಗೆ ಮರುಳಾದ Jr.NTR!
ಅಖಂಡ ಸಿನಿಮಾ ರಿಲೀಸ್ ಆಗುತ್ತಲೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಇನ್ನು ಸಿನಿಮಾ ಸಿನಿಮಾ ರಿಲೀಸ್ ಆದ ಮೊದಲ ದಿನವೇ ನಟ ಜೂನಿಯರ್ ಎನ್ ಟಿ ಆರ್ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೂನಿಯರ್ ಎನ್‌ಟಿಆರ್ "ಅಖಂಡ ಈಗಷ್ಟೇ ನೋಡಿ ಮುಗಿಸಿದೆ. ಈ ಅದ್ಭುತ ಯಶಸ್ಸನ್ನು ಗಳಿಸಿದ ಬಾಲಾ ಬಾಬೈ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.
ಜೂನಿಯರ್ ಎನ್‌ಟಿಆರ್ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊದಲ ದಿನವೇ ಜೂನಿಯರ್ ಎನ್‌ಟಿಆರ್ ಸಿನಿಮಾ ನೋಡಿ ಅಭಿಪ್ರಾಯ ತಿಳಿಸಿದ ಸಲುವಾಗಿ ಬಾಲಯ್ಯನ ಅಭಿಮಾನಿಗಳು ದಿಲ್‌ಖುಷ್ ಆಗಿದ್ದಾರೆ.
ಟಾಲಿವುಡ್‌ನಲ್ಲಿ ಸಂತಸ ತಂದ 'ಅಖಂಡ'!
ಕೊರೊನಾ ಕಡಿಮೆ ಆಗಿ ಲಾಕ್ ಆಗಿದ್ದ ಚಿತ್ರಮಂದಿರಗಳ ಬೀಗ ತೆರೆದಿದೆ. ಲಾಕ್‌ಡೌನ್ ಬಳಿಕ ಬಂದ ಸಿನಿಮಾಗಳಿಗೆ ತಕ್ಕಮಟ್ಟಿನ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ 'ಅಖಂಡ' ಸಿನಿಮಾ ವಿಭಿನ್ನವಾಗಿ ನಿಂತಿದೆ. ಚಿತ್ರದ ರಿಲೀಸ್ ಮೊದಲ ದಿನವೇ ಬಹುತೇಕ ಎಲ್ಲಾ ಚಿತ್ರಮಂದಿರಗಳು ತುಂಬಿ ತುಳುಕಿವೆ. ಎಲ್ಲಕಡೆಯಲ್ಲೂ ಹೌಸ್‌ಫುಲ್ ಬೋರ್ಡ್ ಕಂಡಿದೆ. ಹಾಗಾಗಿ ಇದು ಕೊರೊನಾ ಬಳಿಕ ಚಿತ್ರರಂಗಕ್ಕೆ ಹೊಸ ಭರವಸೆ ಆಗಿದೆ.
ಈ ಹಿಂದೆ ಪ್ರೇಕ್ಷಕರು ಹೇಗೆ ಚಿತ್ರಮಂದಿರಗಳಲ್ಲಿ ಸಂಭ್ರಮ ಪಡುತ್ತಿದ್ದರೋ ಈಗ ಆದೇ ದೃಶ್ಯ ಬಾಲಯ್ಯನ ಅಖಂಡ ಚಿತ್ರದಿಂದ ಮರುಕಳಿಸಿದೆ. ಹಾಗಾಗಿ ಚಿತ್ರರಂಗದ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಹೇಶ್ ಬಾಬು ಕೂಡ ಸಂತಸ ಪಟ್ಟಿದ್ದಾರೆ. ಟ್ವೀಟ್ ಮಾಡಿ ಬಾಲಯ್ಯ ಮತ್ತು 'ಅಖಂಡ' ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಬಾಲಯ್ಯನಿಗೆ ಟಾಲಿವುಡ್ ತಾರೆಯರ ಶುಭಾಶಯ!
'ಅಖಂಡ' ಚಿತ್ರವನ್ನು ಕೇವಲ ಬಾಲಯ್ಯನ ಅಭಿಮಾನಿಗಳು ನೋಡಿ ಸಂಭ್ರಮಿಸುತ್ತಾ ಇಲ್ಲ. ಬದಲಿಗೆ ಇದು ತೆಲುಗು ಚಿತ್ರರಂಗದ ಸಂಭ್ರಮ ಆಗಿದೆ. 'ಅಖಂಡ' ಚಿತ್ರಕ್ಕೆ ಮೊದಲ ದಿನ ಸಿಕ್ಕ ರೆಸ್ಪಾನ್ಸ್ ಕಂಡು ಸಾಕಷ್ಟು ತಾರೆಯರು ಬಾಲಯ್ಯ ಮತ್ತು ತಂಡಕ್ಕೆ ಶುಭಾಶಯ ಕೋರಿದ್ದಾರೆ.
ನಟ ನಾನಿ 'ಅಖಂಡ' ಚಿತ್ರಕ್ಕೆ ಸಿಕ್ಕ ಯಶಸ್ಸಿಗೆ ಟ್ವಿಟರ್‌ನಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ.
ನಟ ಸಂದೀಪ್ ಕಿಶನ್ ಟ್ವೀಟ್ ಮಾಡಿ, "ಅಖಂಡ" ಚಿತ್ರದ ಬಗ್ಗೆ ಅದ್ಭುತ ವಿಚಾರವನ್ನು ಕೇಳಲ್ಪಟ್ಟಿದ್ದೇನೆ. ಚಿತ್ರ ರಿಲೀಸ್ ದಿನದ ಎನರ್ಜಿ ಮರುಕಳಿಸುವಂತೆ ಮಾಡಿದ್ದಕ್ಕೆ ಬಾಲಯ್ಯ, ಬೊಯಪಾತಿ ಶ್ರೀನು ಮತ್ತು ತಂಡಕ್ಕೆ ಧನ್ಯವಾದ" ಎಂದಿದ್ದಾರೆ.
ನಟ ಗೋಪಿಚಂದ್ ಮಾಲಿನೇನಿ, 'ಅಖಂಡ' ಮಾಸ್ ಜಾತ್ರೆ. ನಟಸಿಂಹ ನಂದಮೂರಿ ಬಾಲಕೃಷ್ಣ ಹಾಗು ತಂಡಕ್ಕೆ ಶುಭಾಯಶಗಳು ಎಂದು ಟ್ವೀಟ್ ಮಾಡಿದ್ದಾರೆ.
ಚಿತ್ರರಂಗದ ಇನ್ನೂ ಅನೇಕರು ಅಖಂಡ ಚಿತ್ರಕ್ಕೆ ಶುಭಕೋರಿದ್ದಾರೆ. ಇದು ಚಿತ್ರರಂಗದ ಸಂಭ್ರಮವನ್ನು ಮರುಕಳಿಸಿದೆ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ.

ಪೈರಸಿಯನ್ನೂ ಮೀರಿಸಿದ 'ಅಖಂಡ'!
ಇನ್ನು ಅಖಂಡ ಸಿನಿಮಾ ಮೊದಲ ದಿನವೇ ಪೈರಸಿ ಆಗಿದೆ. ಹಾಗಾಗಿ ಇದು ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎಂದು ಊಹಿಸಲಾಗಿತ್ತು. ಪೈರಸಿ ಆಗಿದ್ದರೂ ಚಿತ್ರ ಮಂದಿರದಲ್ಲಿ 'ಅಖಂಡ' ಅಭಿಮಾನಿಗು ತುಂಬಿದ್ದಾರೆ. ಇನ್ನೂ ಭಾರತದ ಗಡಿ ಆಚೆಗೂ ಕೂಡ ಅಖಂಡ ಜೋರಾಗಿ ಸದ್ದು ಮಾಡುತ್ತಿದೆ. ಮೊದಲ ದಿನದ ಗಳಿಕೆಯಿಂದಲೇ ಬಾಲಯ್ಯ ಸಿನಿಮಾ ದಾಖಲೆ ಮಾಡಿದೆ.


Click it and Unblock the Notifications











