ತೆಲುಗು 'ಕೋಟ್ಯಧಿಪತಿ' ಕಾರ್ಯಕ್ರಮಕ್ಕೆ ಜೂ.ಎನ್‌ಟಿಆರ್ ನಿರೂಪಕ, ಸಂಭಾವನೆ ಎಷ್ಟಿದೆ?

ಭಾರತೀಯ ಕಿರುತೆರೆಯ ಲೋಕದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಕೌನ್ ಬನೇಗಾ ಕರೋಡ್ ಪತಿ ತೆಲುಗು ವರ್ಷನ್‌ನಲ್ಲಿ ಹೊಸ ಆವೃತ್ತಿ ಶುರುವಾಗುತ್ತಿದೆ. ಕೊರೊನಾ ನಂತರ ಐದನೇ ಆವೃತ್ತಿ ಆರಂಭವಾಗುತ್ತಿದ್ದು, ಈ ಸಲ ಹೊಸ ನಿರೂಪಕ ಶೋ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.

ಮೊದಲ ಮೂರು ಆವೃತ್ತಿಯನ್ನು ಅಕ್ಕಿನೇನಿ ನಾಗಾರ್ಜುನ ನಿರೂಪಣೆ ಮಾಡಿದ್ದರು. ನಾಲ್ಕನೇ ಆವೃತ್ತಿ ಮೆಗಾಸ್ಟಾರ್ ಚಿರಂಜೀವಿ ಹೋಸ್ಟ್ ಮಾಡಿದ್ದರು. ಈಗ ಐದನೇ ಆವೃತ್ತಿಗೆ ಯಾರು ಎಂಬ ಪ್ರಶ್ನೆ ಎದುರಾಗಿದೆ. ಸದ್ಯದ ವರದಿ ಪ್ರಕಾರ ಚಿರಂಜೀವಿ ಬದಲು ಜೂನಿಯರ್ ಎನ್ ಟಿ ಆರ್ ಕೋಟ್ಯಧಿಪತಿ ಶೋ ಸಾರಥ್ಯ ವಹಿಸಲಿದ್ದಾರೆ. ಮುಂದೆ ಓದಿ...

ಜೂನಿಯರ್ ಎನ್‌ಟಿಆರ್ ಹೆಗಲಿಗೆ ಕೋಟ್ಯಧಿಪತಿ?

ಜೂನಿಯರ್ ಎನ್‌ಟಿಆರ್ ಹೆಗಲಿಗೆ ಕೋಟ್ಯಧಿಪತಿ?

ಜೂನಿಯರ್ ಎನ್‌ಟಿಆರ್ ಮತ್ತೆ ಕಿರುತೆರೆಗೆ ಎಂಟ್ರಿಯಾಗುತ್ತಿದ್ದಾರೆ. ತೆಲುಗಿನ ಯಶಸ್ವಿ ಕಾರ್ಯಕ್ರಮ ''ಎವರು ಮೀಲೋ ಕೋಟೇಶ್ವರಡು ಸೀಸನ್ 5'' ನಿರೂಪಕರಾಗಿ ಜೂನಿಯರ್ ಎನ್‌ಟಿಆರ್ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಈ ಹಿಂದಿನ ಆವೃತ್ತಿ ಚಿರಂಜೀವಿ ಹೋಸ್ಟ್ ಮಾಡಿದ್ದರು.

ಬಿಗ್ ಬಾಸ್ ಟು ಕೋಟ್ಯಧಿಪತಿ

ಬಿಗ್ ಬಾಸ್ ಟು ಕೋಟ್ಯಧಿಪತಿ

ಈ ಹಿಂದೆ ಬಿಗ್ ಬಾಸ್ ಮೊದಲನೇ ಆವೃತ್ತಿಯಲ್ಲಿ ಜೂನಿಯರ್ ಎನ್‌ಟಿಆರ್ ನಿರೂಪಕರಾಗಿದ್ದರು. ಬಳಿಕ, ಬಿಗ್ ಬಾಸ್‌ನಿಂದ ಹಿಂದೆ ಸರಿದರು. ನಂತರ ಆ ಸ್ಥಾನಕ್ಕೆ ನಾಗಾರ್ಜುನ ಬಂದಿದ್ದರು. ಇದೀಗ, ಮೂರು ವರ್ಷದ ನಂತರ ಈಗ ಮತ್ತೆ ಕಿರುತೆರೆಗೆ ಯಂಗ್ ಟೈಗರ್ ಎಂಟ್ರಿ ಕೊಡ್ತಿದ್ದು, ಕುತೂಹಲ ಹೆಚ್ಚಿದೆ.

ಸಂಭಾವನೆ ಎಷ್ಟಿದೆ?

ಸಂಭಾವನೆ ಎಷ್ಟಿದೆ?

ಟಾಲಿವುಡ್ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕ ಜೂನಿಯರ್ ಎನ್ ಟಿ ಆರ್ ಎಂದು ಹೇಳಲಾಗುತ್ತದೆ. ಈ ಹಿಂದೆ ಬಿಗ್ ಬಾಸ್ ನಿರೂಪಣೆ ಮಾಡಿದಾಗ 25 ಕೋಟಿ ಪಡೆದಿದ್ದರು ಎಂದು ವರದಿಯಾಗಿತ್ತು. ಇದೀಗ, ಕೋಟ್ಯಧಿಪತಿ ಶೋಗೆ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಚರ್ಚೆಯೂ ಇದೆ.

Recommended Video

ನ್ಯಾಷನಲ್ ಕ್ರಷ್ ಆಗ್ತಿದ್ದಾರೆ ಸಿಂಗರ್ ಸತ್ಯವತಿ ಮಂಗ್ಲಿ | Kannu Hodiyaka | Satyavati | Mangli Songs
ಆರ್‌ಆರ್‌ಆರ್ ಚಿತ್ರದಲ್ಲಿ ಎನ್‌ಟಿಆರ್

ಆರ್‌ಆರ್‌ಆರ್ ಚಿತ್ರದಲ್ಲಿ ಎನ್‌ಟಿಆರ್

ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ಜೂನಿಯರ್ ಎನ್‌ ಟಿ ಆರ್ ನಟಿಸುತ್ತಿದ್ದು, ಈ ಚಿತ್ರದ ಬಳಿಕ ತ್ರಿವಿಕ್ರಮ್ ಜೊತೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಮ್ ಚರಣ್ ತೇಜ ಸಹ ಈ ಸಿನಿಮಾದ ಪ್ರಮುಖ ನಾಯಕನಾಗಿದ್ದು, ಅಕ್ಟೋಬರ್ 13 ರಂದು ಆರ್‌ಆರ್‌ಆರ್ ಸಿನಿಮಾ ರಿಲೀಸ್ ಆಗುತ್ತಿದೆ.

More from Filmibeat

English summary
Chiranjeevi will not host Evaru Meelo Koteeswarudu season 5. now, jr ntr takes charge in place of megastar?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X