Jr NTR Letter to RRR Cast and Crew : ಯಶಸ್ಸು: ಜೂ ಎನ್‌ಟಿಆರ್ ಬರೆದರು ಬಹಿರಂಗ ಪತ್ರ

'RRR' ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಅಭಿನಯಕ್ಕೆ ಹಾಗೂ ರಾಜಮೌಳಿ ಮಾಡಿರುವ ಮ್ಯಾಜಿಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

RRR ಸಿನಿಮಾದ ಯಶಸ್ಸಿನಿಂದ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಬಹಳ ಥ್ರಿಲ್ ಆಗಿದ್ದಾರೆ. ಹಲವು ಕಾರಣಗಳಿಗೆ ಈ ಸಿನಿಮಾ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ಅವರಿಗೆ ಮುಖ್ಯವಾದ ಸಿನಿಮಾ ಆಗಿತ್ತು. ಇಬ್ಬರು ಸ್ಟಾರ್ ನಟರು ಒಟ್ಟಿಗೆ ನಟಿಸಿದ್ದ ಈ ಸಿನಿಮಾವನ್ನು ಅಭಿಮಾನಿಗಳು ಸ್ವೀಕರಿಸುತ್ತಾರೊ ಇಲ್ಲವೊ ಎಂಬ ಭಯವೂ ಇತ್ತು. ಆದರೆ ಈಗ ಎಲ್ಲ ಆತಂಕಕಗಳೂ ಮರೆಯಾಗಿವೆ.

'RRR' ಸಿನಿಮಾದ ಯಶಸ್ಸಿನಿಂದ ನಟ ಜೂ ಎನ್‌ಟಿಆರ್ ಬಹುವಾಗಿ ಖುಷಿಯಾಗಿದ್ದು, ಸಿನಿಮಾದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ರಾಮ್ ಚರಣ್, ರಾಜಮೌಳಿ ಸೇರಿದಂತೆ ಸಿನಿಮಾದ ಎಲ್ಲ ಪ್ರಮುಖರಿಗೂ ಜೂ ಎನ್‌ಟಿಆರ್ ಭಿನ್ನ-ಭಿನ್ನವಾಗಿ ಧನ್ಯವಾದ ಹೇಳಿದ್ದಾರೆ.

'RRR' ಸಿನಿಮಾ ನನ್ನ ವೃತ್ತಿ ಜೀವನದ ಮೈಲಿಗಲ್ಲು ಎಂದಿರುವ ಜೂ ಎನ್‌ಟಿಆರ್, ಮೊದಲಿಗೆ ಧನ್ಯವಾದ ಹೇಳಿರುವುದು ನಿರ್ದೇಶಕ ರಾಜಮೌಳಿಗೆ. ''ಧನ್ಯವಾದ ಜಕ್ಕಣ್ಣ (ರಾಜಮೌಳಿ) ನನ್ನ ಮೇಲೆ ನಂಬಿಕೆ ಮೂಡುವಂತೆ ಮಾಡಿದ್ದಕ್ಕೆ, ನನ್ನಲ್ಲಿನ ಪ್ರತಿಭೆಯನ್ನು ಪೂರ್ಣವಾಗಿ ಹೊರತಂದಿರಿ ನೀವು. ನಾನು ನೀರಿನಂತೆ (ನಟನೆಯಲ್ಲಿ) ಅಭಿನಯಿಸುವಂತೆ ಮಾಡಿದಿರಿ. ನಾನು ನನ್ನ ಪಾತ್ರವೇ ಆಗಿಬಿಡುವಂತೆ ನೀವು ಮಾಡಿದಿರಿ'' ಎಂದಿದ್ದಾರೆ ಜೂ ಎನ್‌ಟಿಆರ್.

ರಾಮ್ ಚರಣ್ ಬಗ್ಗೆ ಜೂ ಎನ್‌ಟಿಆರ್ ಮಾತು

ರಾಮ್ ಚರಣ್ ಬಗ್ಗೆ ಜೂ ಎನ್‌ಟಿಆರ್ ಮಾತು

ರಾಮ್ ಚರಣ್ ಕುರಿತು ಬರೆದಿರುವ ಜೂ ಎನ್‌ಟಿಆರ್, ''ಚರಣ್, ನನ್ನ ಸಹೋದರ. ನೀನು ಇಲ್ಲದೇ ಹೋಗಿದಿದ್ದರೆ ನಾನು 'RRR' ಸಿನಿಮಾದಲ್ಲಿ ನಟಿಸುತ್ತಲೇ ಇರಲಿಲ್ಲ. ಅಲ್ಲೂರಿ ಸೀತಾರಾಮ ರಾಜು ಪಾತ್ರಕ್ಕೆ ನಿನ್ನ ಹೊರತಾಗಿ ಇನ್ಯಾರೂ ನ್ಯಾಯ ಸಲ್ಲಿಸಲಾರರು. ಅಲ್ಲೂರಿ ಸೀತಾರಾಮ ರಾಜು ಇಲ್ಲದೇ ಹೋಗಿದ್ದಿದ್ದರೆ 'RRR ಮಾತ್ರವಲ್ಲ ಭೀಮ್ ಸಹ ಪೂರ್ಣವಾಗುತ್ತಿರಲಿಲ್ಲ. ನೀರಿಗೆ ಬೆಂಕಿಯಾಗಿ ಇದ್ದುದ್ದಕ್ಕೆ ಧನ್ಯವಾದ'' ಎಂದಿದ್ದಾರೆ.

ಅಜಯ್ ದೇವಗನ್, ಆಲಿಯಾ ಭಟ್‌ಗೆ ಧನ್ಯವಾದ

ಅಜಯ್ ದೇವಗನ್, ಆಲಿಯಾ ಭಟ್‌ಗೆ ಧನ್ಯವಾದ

''ಅಜಯ್ ದೇವಗನ್ ಅವರೊಟ್ಟಿಗೆ ಕೆಲಸ ಮಾಡುವುದು ಬಹಳ ಖುಷಿಯ ವಿಚಾರ. ಅವರೊಂದಿಗೆ ಕಳೆದ ಕ್ಷಣಗಳನ್ನು ನಾನು ನೆನಪಿಟ್ಟುಕೊಳ್ಳುತ್ತೇನೆ'' ಎಂದು ಅಜಯ್ ಬಗ್ಗೆ ಹೇಳಿರುವ ಜೂ ಎನ್‌ಟಿಆರ್, ''ಆಲಿಯಾ, ನೀನು ನಟನೆಯ 'ಪವರ್‌ಹೌಸ್'. ನಮ್ಮ ಸಿನಿಮಾಕ್ಕೆ ಬಹಳ ಶಕ್ತಿಯನ್ನು ನೀವು ತುಂಬಿದ್ದೀರಿ. ನೀವು ಹೀಗೆಯೇ ಮೇಲೇರುತ್ತಿರಿ'' ಎಂದು ಆಲಿಯಾಗೆ ಶುಭ ಹಾರೈಸಿದ್ದಾರೆ. ಸಿನಿಮಾದಲ್ಲಿ ನಟಿಸಿರುವ ವಿದೇಶಿ ನಟರಾದ ಒಲಿವಿಯಾ ಮೋರಿಸ್, ಅಲಿಸನ್ ಡೂಡಿ, ರೇ ಸ್ಟಿವನ್‌ಸನ್ ಅವರುಗಳನ್ನು ಭಾರತೀಯ ಚಿತ್ರರಂಗಕ್ಕೆ ಸ್ವಾಗತಿಸಿರುವ ಜೂ ಎನ್‌ಟಿಆರ್, ನಿಮ್ಮೊಂದಿಗೆ ಕಳೆದ ಕ್ಷಣಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಎಂದಿದ್ದಾರೆ.

ಕೀರವಾಣಿ ಬಗ್ಗೆ ಹೆಚ್ಚಾಗಿಯೇ ಬರೆದಿರುವ ಜೂ ಎನ್‌ಟಿಆರ್

ಕೀರವಾಣಿ ಬಗ್ಗೆ ಹೆಚ್ಚಾಗಿಯೇ ಬರೆದಿರುವ ಜೂ ಎನ್‌ಟಿಆರ್

ಸಂಗೀತ ನಿರ್ದೇಶಕ ಕೀರವಾಣಿ ಬಗ್ಗೆ ತುಸು ಹೆಚ್ಚೇ ಬರೆದಿರುವ ಜೂ ಎನ್‌ಟಿಆರ್, ''RRR' ಸಿನಿಮಾಕ್ಕೆ ಜೀವ ತುಂಬಿದ್ದಕ್ಕೆ ನಿಮಗೆ ಧನ್ಯವಾದಗಳು. ಆತ್ಮತುಂಬಿದ, ಹೃದಯ ಕರಗಿಸುವ ಸಂಗೀತ ಭವಿಷ್ಯದಲ್ಲಿ ಉಳಿದುಕೊಳ್ಳಲಿದೆ. ನಿಮ್ಮ ಸಂಗೀತವು ಭಾಷೆ, ಗಡಿ, ಕಾಲದ ಮಿತಿಗಳನ್ನು ದಾಟಿಬಿಟ್ಟಿದೆ'' ಎಂದಿದ್ದಾರೆ. ನಿರ್ಮಾಪಕ ಡಿವಿವಿ ದಯಾನಂದ್ ಅವರನ್ನೂ ಹೊಗಳಿರುವ ಜೂ ಎನ್‌ಟಿಆರ್, ''ನೀವು ಕಲ್ಲಿನಂತೆ ನಮ್ಮ ಬೆನ್ನಿಗೆ ನಿಂತಿದ್ದಿರಿ. 'RRR' ಎಂಬ ಕಾಲ್ಪನಿಕ ಕತೆಯನ್ನು ನಿಜಗೊಳಿಸಿದ್ದು ನಿಮ್ಮ ಶ್ರಮ'' ಎಂದು ಹೊಗಳಿದ್ದಾರೆ. ಜೊತೆಗೆ ಸಿನಿಮಾಕ್ಕೆ ಕತೆ ಬರೆದಿರುವ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಅವರ ಬಗ್ಗೆಯೂ ಬರೆದಿರುವ ತಾರಕ್, ''ಭಾರತದ ಅತ್ಯುತ್ತಮ ಕತೆಗಳಲ್ಲಿ ಒಂದನ್ನು ನೀವು ಬರೆದಿದ್ದೀರಿ. ನೀವು ಬರೆದಿರುವ ಕತೆ ವಿಶ್ವದ ಸಿನಿಮಾ ಪ್ರೇಮಿಗಳ ಎದೆಯಲ್ಲಿ ಸದಾ ಕಾಲ ಇರಲಿದೆ. ಆ ಕತೆಯನ್ನು ಅವರು ಸದಾ ಕಾಲ ಸೆಲೆಬ್ರೇಟ್ ಮಾಡುತ್ತಿರುತ್ತಾರೆ'' ಎಂದಿದ್ದಾರೆ.

ತಾಂತ್ರಿಕ ವರ್ಗಕ್ಕೆ ಧನ್ಯವಾದ ತಿಳಿಸಿದ ಜೂ ಎನ್‌ಟಿಆರ್

ತಾಂತ್ರಿಕ ವರ್ಗಕ್ಕೆ ಧನ್ಯವಾದ ತಿಳಿಸಿದ ಜೂ ಎನ್‌ಟಿಆರ್

ಸಿನಿಮಾದ ತಾಂತ್ರಿಕ ವರ್ಗವಾಗಿರುವ ಸೆಂಥಿಲ್, ಸಾಬು, ಶ್ರೀನಿವಾಸ್ ಮೋಹನ್, ಶ್ರೀಕರ್ ಪ್ರಸಾದ್ ಅವರನ್ನು ಹೊಗಳಿರುವ ಜೂ ಎನ್‌ಟಿಆರ್, 'ನಾಟು, ನಾಟಿ' ಹಾಡಿಗೆ ನೃತ್ಯ ನಿರ್ದೇಶಿಸಿರುವ ಪ್ರೇಮ್ ರಕ್ಷಿತ್ ಅವರನ್ನು ಕೊಂಡಾಡಿದ್ದಾರೆ. ಜೊತೆಗೆ ಇಡೀಯ ಭಾರತೀಯ ಸಿನಿಮಾ ರಂಗ, ಸಿನಿಮಾ ರಂಗದ ಗೆಳೆಯರು, ಹಿತೈಷಿಗಳು ಹಾಗೂ ಭಾರತೀಯ ಮಾಧ್ಯಮ ಅಂತಿಮವಾಗಿ ತಮ್ಮ ಅಭಿಮಾನಿಗಳಿಗೆ ಹೃದಯಾಂತರಾಳದಿಂದ ಧನ್ಯವಾದ ಅರ್ಪಿಸಿದ್ದಾರೆ ನಟ ಜೂ ಎನ್‌ಟಿಆರ್.

More from Filmibeat

English summary
Actor Jr NTR wrote a thanks giving letter to RRR movie cast and crew. He thanked Rajamouli, Ram Charan, Ajay Devagan and every one.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X