ಚಿಕ್ಕಪ್ಪನಿಗೆ ಜ್ಯೂ, ಎನ್‌ಟಿಆರ್ ಸವಾಲ್? ಇಂತಹ ಸಮಯದಲ್ಲಿ ಬೇಕಾ ಇದೆಲ್ಲಾ?

ದೊಡ್ಡ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಅನ್ನೋದು ಹೊಸದೇನು ಅಲ್ಲ. ಇತ್ತೀಚೆಗೆ ಸ್ಟಾರ್ ನಟರು ಕೂಡ ಸೈ ಎನ್ನುತ್ತಿದ್ದಾರೆ. ಎರಡೂ ಸಿನಿಮಾಗಳು ಚೆನ್ನಾಗಿದ್ದರೆ ಪ್ರೇಕ್ಷಕರು ಎರಡನ್ನು ನೋಡುತ್ತಾರೆ ಎನ್ನುವ ನಂಬಿಕೆ ಕೆಲವರದ್ದು. ಟಾಲಿವುಡ್‌ನ ಬಾಲಕೃಷ್ಣ ಹಾಗೂ ಜ್ಯೂ. ಎನ್‌ಟಿಆರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಎದುರುಬದಿರಾಗುತ್ತವೆ ಎನ್ನಲಾಗ್ತಿದೆ.

ಖ್ಯಾತ ನಟ ಎನ್‌ಟಿಆರ್ ಪುತ್ರ ಬಾಲಕೃಷ್ಣ. ತಮ್ಮ ತಂದೆ ಹಾದಿಯಲ್ಲದೇ ಚಿತ್ರರಂಗಕ್ಕೆ ಬಂದವರು. ಇನ್ನು ಬಾಲಕೃಷ್ಣ ಸಹೋದರ ಹರಿಕೃಷ್ಣ ಪುತ್ರ ಜ್ಯೂ. ಎನ್‌ಟಿಆರ್. ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಆಗಾಗ್ಗೆ ಕೇಳಿ ಬರುತ್ತದೆ. ಕೆಲ ದಿನಗಳ ಹಿಂದೆ ತಾರಕ್ ತಮ್ಮ ಚಿಕ್ಕಪ್ಪನ ಪರ ನಿಂತಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎನ್ನುವ ಚರ್ಚೆ ನಡೀತಿದೆ.

Jr NTR s Devara and Balakrishna s NBK109 to clash at the box office in october

ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕೊರಟಾಲ ಶಿವ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಅಕ್ಟೋಬರ್ 10ಕ್ಕೆ ತೆರೆಗೆ ಬರಲಿದೆ. ಅದೇ ಸಮಯದಲ್ಲಿ ಬಾಲಕೃಷ್ಣ ನಟನೆಯ ಹೊಸ ಸಿನಿಮಾ ಕೂಡ ಬರುತ್ತದೆ ಎನ್ನಲಾಗ್ತಿದೆ. ಇನ್ನು ಹೆಸರಿಡದ ಚಿತ್ರದಲ್ಲಿ ಬಾಲಯ್ಯ ಬಣ್ಣ ಹಚ್ಚಿದ್ದಾರೆ. ಇದು ಅವರ 109 ಸಿನಿಮಾ. ಹಾಗಾಗಿ ಸದ್ಯಕ್ಕೆ NBK109 ಎಂದು ಕರೆಯಲಾಗುತ್ತಿದೆ.

ಕಳೆದ ವರ್ಷ ಭಗವಂತ್ ಕೇಸರಿ ಸಿನಿಮಾ ಮೂಲಕ ಬಾಲಕೃಷ್ಣ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಸಿನಿಮಾ ಅಷ್ಟಾಗಿ ಗೆಲ್ಲಲಿಲ್ಲ. NBK109 ಚಿತ್ರಕ್ಕೆ ಬಾಬಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿರಲಿದೆ. ಸೂರ್ಯದೇವರ ನಾಗವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಾಂದಿನಿ ಚೌಧರಿ, ಬಾಬಿ ಡಿಯೋಲ್ ಸಹ ಚಿತ್ರದಲ್ಲಿದ್ದಾರೆ.

NBK109 ಚಿತ್ರವನ್ನು ಕೂಡ ಅಕ್ಟೋಬರ್ 10ಕ್ಕೆ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ಅಕ್ಟೋಬರ್ 12ಕ್ಕೆ ದಸರಾ ಹಬ್ಬ ಇದೆ. ಹಬ್ಬದ ವೀಕೆಂಡ್‌ನಲ್ಲಿ ಸಿನಿಮಾ ಗೆಲ್ಲುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ. ಅದೇ ಕಾರಣಕ್ಕೆ 'ದೇವರ' ಚಿತ್ರವನ್ನು ರಿಲೀಸ್ ಮಾಡಲು ಮುಂದಾಗಿದ್ದಾರೆ. ಇದೀಗ ಅದೇ ವೀಕೆಂಡ್ ಮೇಲೆ NBK109 ತಂಡ ಕಣ್ಣಿಟ್ಟಿದೆ. ಹಾಗಾಗಿ ಅಕ್ಟೋಬರ್‌ನಲ್ಲಿ ಮಗ, ಚಿಕ್ಕಪ್ಪನ ನಡುವೆ ಪೈಪೋಟಿ ನಡೆಯುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

Jr NTR s Devara and Balakrishna s NBK109 to clash at the box office in october

ಹಬ್ಬದ ಸಂಭ್ರಮದಲ್ಲಿ ದೊಡ್ಡ ಸಿನಿಮಾಗಳನ್ನು ತೆರೆಗೆ ತರಲು ತೆಲುಗು ನಟರು ಹಿಂದು ಮುಂದು ನೋಡಲ್ಲ. ಪ್ರತಿವರ್ಷ ಸಂಕ್ರಾಂತಿಗೆ ತೆಲುಗಿನ ದೊಡ್ಡ ಸಿನಿಮಾ ಒಟ್ಟಿಗೆ ಬರುತ್ತದೆ. ಈ ಬಾರಿ ದಸರಾ ಸಂಭ್ರಮದಲ್ಲಿ ದೇವರ ವರ್ಸಸ್ NBK109 ಫೈಟ್ ಎನ್ನಲಾಗ್ತಿದೆ. 'RRR' ಬಳಿಕ ತಾರಕ್ ನಟನೆಯ 'ದೇವರ' ಎರಡು ಭಾಗಗಳಾಗಿ ತೆರೆಗೆ ಬರಲಿದೆ. ಜಾನ್ವಿ ಕಪೂರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸೈಫ್ ಅಲಿಖಾನ್ ಸೇರಿದಂತೆ ಘಟಾನುಘಟಿ ಕಲಾವಿದರು 'ದೇವರ' ಚಿತ್ರದಲ್ಲಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ತೆರೆಗೆ ಬರಲಿದೆ. ಇನ್ನು ತಾರಕ್, ಬಾಲಯ್ಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಚರ್ಚೆ ನಡೆಯುತ್ತಿರುವಾಗ ಇಬ್ಬರ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುತ್ತಾ? ಎನ್ನುವ ಅನುಮಾನವೂ ಇದೆ. NBK109 ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿಲ್ಲ. ಒಟ್ಟಿಗೆ ಸಿನಿಮಾ ತೆರೆಗೆ ಬರುತ್ತಾ ಕಾದು ನೋಡಬೇಕಿದೆ.

More from Filmibeat

English summary
Major Tollywood Movie clash at boxoffice this year;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X