ತನ್ನ ಅಭಿಮಾನಿಯ ಮನೆಗೆ ಸರ್‌ಪ್ರೈಸ್ ಪಾರ್ಸಲ್ ಕಳುಹಿಸಿ ಶಾಕ್ ಕೊಟ್ಟ ನಟ ಜ್ಯೂ. ಎನ್‌ಟಿಆರ್

ಅಭಿಮಾನಿಗಳು, ಪ್ರೇಕ್ಷಕರನ್ನು ರಂಜಿಸೋಕೆ ಕಲಾವಿದರು ನಾನಾ ಕಸರತ್ತು ಮಾಡ್ತಾರೆ. ಅದೇ ರೀತಿ ನೆಚ್ಚಿನ ನಟ-ನಟಿಯರ ಗಮನ ಸೆಳೆಸಲು ಅಭಿಮಾನಿಗಳು ಮಾಡುವ ಸರ್ಕಸ್ ಒಂದೆರಡಲ್ಲ. ಆದರೆ ಇಲ್ಲೊಬ್ಬ ಅಭಿಮಾನಿ ಒಂದೇ ಒಂದು ಟ್ವೀಟ್ ಮಾಡಿ ನೆಚ್ಚಿನ ನಟನಿಂದ ಭರ್ಜರಿ ಗಿಫ್ಟ್ ಪಡೆದಿದ್ದಾನೆ. ಅಭಿಮಾನಿಗೆ ಸರ್‌ಪ್ರೈಸ್ ಕೊಟ್ಟು ನಟ ಜ್ಯೂ. ಎನ್‌ಟಿಆರ್ ಸುದ್ದಿಯಾಗಿದ್ದಾರೆ.

ತಾರೆಯರು ಬಿಡುವಿನ ಸಮಯದಲ್ಲಿ ನಾನಾ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಜಿಮ್, ಯೋಗ, ಕುದುರೆ ಸವಾರಿ, ಆಟ, ಓದುವುದು ಹೀಗೆ ನಾನಾ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲವರು ಕುಕ್ಕಿಂಗ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುತ್ತಾರೆ. ಕಿಚ್ಚ ಸುದೀಪ್ ಅದಕ್ಕೆ ಒಳ್ಳೆ ಎಕ್ಸಾಂಪಲ್. ಸದ್ಯ ತೆಲುಗು ನಟ ಜ್ಯೂ. ಎನ್‌ಟಿಆರ್ ತಮ್ಮ ಪಾಕ ಪ್ರಾವಿಣ್ಯತೆ ಪ್ರದರ್ಶಿಸಿದ್ದಾರೆ. ಮೊದಲ ಬಾರಿ ಕುಕ್ಕೀಸ್ ಮಾಡಿರುವುದಾಗಿ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಓವನ್ ಒಳಗೆ ಇಟ್ಟ ಕುಕ್ಕೀಸ್ ವೀಡಿಯೋ ಹಂಚಿಕೊಂಡಿದ್ದಾರೆ.

Jr NTR s Send Your Address Reply Leaves Fan Overjoyed After Viral Cookie Post

ಸದ್ಯ ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗ್ತಿದೆ. ಸಾಕಷ್ಟು ಅಭಿಮಾನಿಗಳು ಲೈಕ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಾಯಿತೇಜಾ ಎಂಬ ಅಭಿಮಾನಿಯೊಬ್ಬರು "ಅಣ್ಣ ನಮ್ಮ ಮನೆಯಲ್ಲಿ ಇಬ್ಬರೂ ಚಿಕ್ಕ ಮಕ್ಕಳಿದ್ದಾರೆ. ಎರಡು ಕುಕ್ಕೀಸ್ ಕಳ್ಸಣ್ಣ" ಎಂದು ಟ್ವೀಟ್ ಮಾಡಿ ವೀಡಿಯೋ ಹಂಚಿಕೊಂಡಿದ್ದಾರೆ. ಅಚ್ಚರಿ ಎನ್ನುವಂತೆ ಇದಕ್ಕೆ ನಟ ಜ್ಯೂ. ಎನ್‌ಟಿಆರ್ ರಿಪ್ಲೇ ಮಾಡಿಬಿಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟ, ನಟಿಯರನ್ನು ಟ್ಯಾಗ್‌ ಮಾಡಿ ಸಾಕಷ್ಟು ಜನ ಪೋಸ್ಟ್ ಮಾಡುತ್ತಾರೆ. ಬಗೆ ಬಗೆಯ ಅಭಿಪ್ರಾಯ ತಿಳಿಸುತ್ತಾರೆ. ಟೀಕೆ ಟಿಪ್ಪಣಿ ಮಾಡುತ್ತಾನೆ. ಅಭಿಮಾನಿಗಳು ಮೆಚ್ಚಿ ಕೊಂಡಾಡುವುದು ಇದೆ. ಅದಕ್ಕೆಲ್ಲಾ ನಟ- ನಟಿಯರು ಪ್ರತಿಕ್ರಿಯಿಸುವುದಿಲ್ಲ. ಅಂತಹ ಪೋಸ್ಟ್‌ಗಳನ್ನು ನೋಡ್ತಾರಾ ಇಲ್ವಾ ಎನ್ನುವುದು ಗೊತ್ತಾಗಲ್ಲ. ಅದೇ ರೀತಿ ಸಾಕಷ್ಟು ಜನ ಜ್ಯೂ. ಎನ್‌ಟಿಆರ್ ಕುಕ್ಕೀಸ್ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಅಭಿಮಾನಿ ಎರಡು ಕುಕ್ಕೀಸ್ ಕಳ್ಸಣ್ಣ ಎನ್ನುತ್ತಿದ್ದಂತೆ ತಾರಕ್ ಪ್ರತಿಕ್ರಿಯಿಸಿಬಿಟ್ಟಿದ್ದಾರೆ.

'ಅಡ್ರೆಸ್ ಕಳ್ಸು' ಎಂದು ಬ್ರಹ್ಮಾನಂದಂ ಅವರ ಮೀಮ್ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನೋಡ ನೋಡುತ್ತಲೇ ಅದು ಸಖತ್ ವೈರಲ್ ಆಗ್ತಿದೆ. ನೆಚ್ಚಿನ ನಟ ಅಡ್ರೆಸ್ ಕಳ್ಸು, ಕುಕ್ಕೀಸ್ ಕಳಿಸ್ತೀನಿ ಎಂದು ರಿಪ್ಲೇ ಮಾಡಿದ್ದು ನೋಡಿದ ಅಭಿಮಾನಿ ಶಾಕ್ ಆಗಿದ್ದಾರೆ. ಜನ್ನ ಜನ್ಮ ಸಾರ್ಥಕವಾಯಿತು ಎಂದು ಹೇಳಿ ತಮ್ಮ ಮನೆ ಅಡ್ರೆಸ್ ಕಳಿಸಿದ್ದಾರೆ. ನಾನು ನಿಜಕ್ಕೂ ನಿರೀಕ್ಷೆ ಮಾಡಿರಲಿಲ್ಲ, ಎನ್‌ಟಿಆರ್ ಹೀಗೆ ನನಗೆ ರಿಪ್ಲೇ ಮಾಡ್ತಾರೆ ಅಂತ, ನನ್ನ ಜೀವನದಲ್ಲಿ ಕುಕ್ಕೀಸ್‌ ಇಷ್ಟು ಮಜಾ ಕೊಡುತ್ತೆ ಎಂದು ಯಾವತ್ತೂ ಭಾವಿಸಿರಲಿಲ್ಲ ಎಂದು ಆತ ಬರೆದುಕೊಂಡಿದ್ದಾನೆ. ಸಾಕಷ್ಟು ಜನ ನೆಟ್ಟಿಗರು 'ಲಕ್ಕಿ ಚಾನ್ಸ್ ಗುರೂ' ಎಂದು ಸಾಯಿತೇಜಾಗೆ ಅಭಿನಂದನೆ ತಿಳಿಸುತ್ತಿದ್ದಾರೆ.

'ದೇವರ' ಸಿನಿಮಾ ಬಳಿಕ ತಾರಕ್ ಈಗ 'ಡ್ರ್ಯಾಗನ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಪ್ರಶಾಂತ್ ನೀಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಇತ್ತೀಚೆಗೆ ತಾರಕ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿತ್ತು.

ರುಕ್ಮಿಣಿ ವಸಂತ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನಿಲ್ ಕಪೂರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದಲ್ಲಿ ಡಾರ್ಕ್ ಶೇಡ್ ಪಾತ್ರದಲ್ಲಿ ತಾರಕ್ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ತೂಕ ಇಳಿಸಿ ಸಿಕ್ಕಾಪಟ್ಟೆ ರಗಡ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. 'ಕೆಜಿಎಫ್' ಹಾಗೂ 'ಸಲಾರ್' ಸರಣಿಗಳ ರೀತಿ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಆಗಿ ಚಿತ್ರವನ್ನು ಕಟ್ಟಿಕೊಡಲಾಗ್ತಿದೆ.

Read more about: ntr tollywood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X