ನಿರ್ದೇಶಕ ವೆಟ್ರಿಮಾರನ್ ಹಿಂದೆ ಬಿದ್ದ ಜೂ.ಎನ್‌ಟಿಆರ್, ಕಥೆ ಮಸ್ತಾಗಿದೆಯಂತೆ!
ತೆಲುಗು ಸೂಪರ್ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಅಭಿನಯದ RRR ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು, ಜೂನಿಯರ್ ಎನ್‌ಟಿಆರ್ ಮತ್ತಷ್ಟು ದಾಖಲೆಗಳನ್ನು ಮಾಡಿದ್ದಾರೆ. ಈ ಚಿತ್ರದ ಬಳಿಕ ಜೂನಿಯರ್ ಎನ್‌ಟಿಆರ್ ಯಾವ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು.
'RRR' ತಂದು ಕೊಟ್ಟ ಯಶಸ್ಸು, ನಟನ ಮೇಲಿನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಹಾಗಾಗಿ ತಮ್ಮ ಮುಂದಿನ ಸಿನಿಮಾವನ್ನು ಅತಿ ಎಚ್ಚರಿಕೆಯಿಂದ ಜೂನಿಯರ್ ಎನ್‌ಟಿಆರ್ ಆಯ್ದುಕೊಳ್ಳ ಬೇಕಾಗಿದೆ. RRR ಬಳಿಕ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜೂ ಎನ್ ಟಿಆರ್ ಅಭಿನಯಿಸುತ್ತಿದ್ದಾರೆ.
ಈಗ ಮತ್ತೊಂದು ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಾ ಇದೆ. ಜೂನಿಯರ್ ಎನ್‌ಟಿಆರ್ 32ನೇ ಚಿತ್ರದ ಬಗ್ಗೆ ಗುಸುಗುಸು ಕೇಳಿ ಬರುತ್ತಿದೆ. ಇದಕ್ಕಾಗಿ ತಮಿಳು ನಿರ್ದೇಶಕನ ಮೊರೆ ಹೋಗಿದ್ದಾರಂತೆ ಜೂನಿಯರ್ ಎನ್‌ಟಿಆರ್.

ಜೂ.ಎನ್‌ಟಿಆರ್‌ಗೆ ವೆಟ್ರಿಮಾರನ್ ನಿರ್ದೇಶನ!
ತಮಿಳಿನ ಸ್ಟಾರ್ ನಿರ್ದೇಶಕ ವೆಟ್ರಿಮಾರನ್ ಜೂನಿಯರ್ ಎನ್‌ಟಿಆರ್‌ಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಹೌದು ವೆಟ್ರಿಮಾರನ್ ಮತ್ತು ಜೂನಿಯರ್ ಎನ್‌ಟಿಆರ್ ಕಾಂಬಿನೇಶನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬರಲಿದೆ. ಈ ಚಿತ್ರಕ್ಕಾಗಿ ಈಗಾಗಲೇ ವೆಟ್ರಿಮಾರನ್ ಅದ್ಭುತವಾದ ಕಥೆಯನ್ನು ಮಾಡಿಕೊಂಡಿದ್ದಾರಂತೆ, ಈ ಕಥೆ ಜೂನಿಯರ್ ಎನ್‌ಟಿಆರ್‌ಗೂ ಬಹಳ ಇಷ್ಟವಾಗಿದೆಯಂತೆ.

ವೆಟ್ರಿಮಾರನ್, ಜೂ.ಎನ್‌ಟಿಆರ್ ಕಾಂಬಿನೇಷನ್!
ವೆಟ್ರಿಮಾರನ್ ಭಾರತೀಯ ಸಿನಿಮಾರಂಗದ ಉತ್ತಮ ನಿರ್ದೇಶಕರಲ್ಲಿ ಒಬ್ಬರು. ವೆಟ್ರಿಮಾರನ್ ಸಿನಿಮಾಗಳು ಎಂದರೆ ಬೇರೆ ಚಿತ್ರಗಳಿಂದ ಸದಾ ಭಿನ್ನವಾಗಿಯೇ ಇರುತ್ತವೆ. 'ಆಡುಕಳಂ', 'ವಿಸಾರಣೈ', 'ಕಾಕ ಮೊಟ್ಟ', 'ಅಸುರನ್' ಅಂತಹ ಅದ್ಭುತ ಸಿನಿಮಾಗಳನ್ನು ಮಾಡಿದ್ದಾರೆ. ಇನ್ನು ಜೂನಿಯರ್ ಎನ್‌ಟಿಆರ್ ಕೂಡ ಅದ್ಬುತ ಕಲಾವಿದ. ಹಾಗಾಗಿ ಇವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ಮತ್ತಷ್ಟು ಇತಿಹಾಸಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ.

ಪ್ರಶಾಂತ್ ನೀಲ್ ಜೊತೆ ಜೂ.ಎನ್‌ಟಿಆರ್!
ಜೂ.ಎನ್‌ಟಿಆರ್ ಸದ್ಯ ಯಾವುದೋ ಒಂದು ರೀತಿಯ ಹೀರೋಯಿಸಂ ತೋರಿಸುವ ಸಿನಿಮಾಗಳಗೆ ಮಾತ್ರ ಸೀಮಿತ ಆಗದೆ, ಈಗೀಗ ಹೊಸ ಪ್ರಯೋಗಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ ಭಿನ್ನ ಕಥೆಗಳನ್ನ ಹುಡುಕುತ್ತಿದ್ದಾರೆ. ಹಾಗಾಗಿ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲೂ ಅಭಿನಯಿಸುತ್ತಿದ್ದಾರೆ. ಜೂ.ಎನ್‌ಟಿಆರ್! 31ನೇ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ.

ಜೂ.ಎನ್‌ಟಿಆರ್ ಮುಂದಿನ ಚಿತ್ರದ ಗತಿ ಏನು?
ರಾಜಮೌಳಿ ನಿರ್ದೇಶನಲ್ಲಿ ಅಭಿನಯಿಸಿ ದೊಡ್ಡ ಯಶಸ್ಸು ಕಂಡ ನಟರುಗಳು, ಆ ಚಿತ್ರದ ನಂತ್ರ ಬರುವ ಚಿತ್ರಗಳಲ್ಲಿ ಸೋಲು ಕಾಣುವ ಆತಂಕ ಇದ್ದೇ ಇದೆ. ಇದಕ್ಕೆ ಹಲವು ನಟರ ಸೊಲಿನ ಉದಾಹಣೆಗಳು ಇವೆ. ಇತ್ತೀಚೆಗಷ್ಟೇ rrr ಬಳಿಕ ಬಂದ ರಾಮ್‌ಚರಣ್ ತೇಜ 'ಆಚಾರ್ಯ' ಸೋತು ಹೋಯ್ತು. ಹಾಗಾಗಿ ಸದ್ಯ ಜೂ.ಎನ್‌ಟಿಆರ್ ತ್ತು ಕೊರಟಾಲ ಶಿವ ಕಾಂಬಿನೇಶನ್‌ನ ಮುಂದಿನ ಸಿನಿಮಾ ಏನಾಗುತ್ತೆ ಎನ್ನುವ ಅತಂಕ ಮನೆ ಮಾಡಿದೆ.


Click it and Unblock the Notifications











