For Quick Alerts
  ALLOW NOTIFICATIONS  
  For Daily Alerts

  ಜಯಲಲಿತಾ ಬಯೋಪಿಕ್ ನಲ್ಲಿ ನಟಿಸುವಂತೆ ಸ್ಟಾರ್ ನಟನಿಗೆ ಆಫರ್!

  |
  ಕುತೂಹಲ ಮೂಡಿಸಿದೆ ತಲೈವಿ ಚಿತ್ರದ ಪಾತ್ರಗಳ ಆಯ್ಕೆ | FILMIBEAT KANNDA

  ಕಂಗನಾ ರಣಾವತ್ ನಟಿಸುತ್ತಿರುವ 'ತಲೈವಿ' ಸಿನಿಮಾ ಕಲಾವಿದರ ಆಯ್ಕೆ ಪ್ರಕ್ರಿಯೆಯಿಂದಲೇ ಭಾರಿ ಕುತೂಹಲ ಮೂಡಿಸಿದೆ. ಜಯಲಲಿತಾ ಅವರ ಬಯೋಪಿಕ್ ಚಿತ್ರ ಇದಾಗಿದ್ದು, ಕಂಗನಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರ ನಿರ್ವಹಿಸುತ್ತಿದ್ದಾರೆ.

  ಜಯಲಲಿತಾ ಅವರ ಜೀವನ ಹಾದಿಯಲ್ಲಿ ಬರುವ ಲೆಜೆಂಡ್ ಕಲಾವಿದರ ಪಾತ್ರಗಳಿಗೆ ಸೂಕ್ತ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಂಜಿ ರಾಮಚಂದ್ರನ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಹಾಗೂ ತಮಿಳುನಾಡಿನ ಮಾಜಿಮುಖ್ಯ ಮಂತ್ರಿ ಹಾಗೂ ಜಯಲಲಿತಾ ಅವರ ವಿರೋಧಿ ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳುತ್ತಿದ್ದಾರೆ.

  ಇದೀಗ, ತೆಲುಗು ಸೂಪರ್ ಸ್ಟಾರ್ ಎನ್.ಟಿ ರಾಮಾರಾವ್ ಪಾತ್ರವೂ ಈ ಚಿತ್ರದಲ್ಲಿ ಬರಲಿದ್ದು, ಆ ಪಾತ್ರವನ್ನ ಯಾರು ನಿರ್ವಹಿಸಲಿದ್ದಾರೆ ಎನ್ನುವುದು ಈಗ ಚರ್ಚೆಯಾಗುತ್ತಿದೆ.

  ಮತ್ತೆ ಎನ್.ಟಿ.ಆರ್ ಪಾತ್ರದಲ್ಲಿ ಲೆಜೆಂಡ್ ಬಾಲಕೃಷ್ಣ ನಟನೆ!ಮತ್ತೆ ಎನ್.ಟಿ.ಆರ್ ಪಾತ್ರದಲ್ಲಿ ಲೆಜೆಂಡ್ ಬಾಲಕೃಷ್ಣ ನಟನೆ!

  ಎನ್.ಟಿ.ಆರ್ ಪಾತ್ರಕ್ಕಾಗಿ ನಂದಮೂರಿ ಬಾಲಕೃಷ್ಣ ಅವರು ಹೆಸರು ಚರ್ಚೆಯಲ್ಲಿದೆ. ಈ ಹಿಂದೆ ಕಥಾನಾಯಕುಡು ಮತ್ತು ಮಹಾನಾಯಕುಡು ಚಿತ್ರಗಳಲ್ಲಿ ಬಾಲಕೃಷ್ಣ ಅವರು ಎನ್.ಟಿ.ಆರ್ ಪಾತ್ರ ಮಾಡಿದ್ದರು. ಹಾಗಾಗಿ, ಜಯಲಲಿತಾ ಬಯೋಪಿಕ್ನಲ್ಲೂ ಅವರೆ ಮಾಡಿದ್ರೆ ಉತ್ತಮ ಎಂಬ ಲೆಕ್ಕಾಚಾರ ಹಾಕಲಾಗಿತ್ತು.

  ಸರ್ಪ್ರೈಸ್ ಎನ್ನುವಂತೆ ಬಾಲಕೃಷ್ಣ ಅವರನ್ನು ಬಿಟ್ಟು ಜೂನಿಯರ್ ಎನ್.ಟಿ.ಆರ್ ಅವರನ್ನ ಕರೆತರುವ ಪ್ರಯತ್ನವೂ ಸಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಆದರೆ, ತಲೈವಿ ಸಿನಿಮಾಗೆ ಸಂಬಂಧಿಸಿದಂತೆ ಇದುವರೆಗೂ ಆಫರ್ ಬಂದಿಲ್ಲ ಎಂದು ಯಂಗ್ ಟೈಗರ್ ಸ್ಪಷ್ಟಪಡಿಸಿದ್ದಾರಂತೆ.

  ಜಯಲಲಿತಾ ಪಾತ್ರದಲ್ಲಿ ಕಂಗನಾ, ಎಂಜಿಆರ್ ಯಾರು ಗೊತ್ತಾ?ಜಯಲಲಿತಾ ಪಾತ್ರದಲ್ಲಿ ಕಂಗನಾ, ಎಂಜಿಆರ್ ಯಾರು ಗೊತ್ತಾ?

  ಇನ್ನುಳಿದಂತೆ ವಿಷ್ಣು ಇಂದುರಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಎ.ಎಲ್ ವಿಜಯ್ ನಿರ್ದೇಶನ ಮಾಡಲಿದ್ದಾರೆ. ಕಂಗನಾ ರಣಾವತ್ ಅವರನ್ನು ಬಿಟ್ಟು ನಿತ್ಯಾ ಮೆನನ್ ಕೂಡ ಜಯಲಲಿತಾ ಕುರಿತು ಬಯೋಪಿಕ್ ಸಿನಿಮಾ ಮಾಡುತ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ ಕೂಡ ಜಯಾ ಬಯೋಪಿಕ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

  English summary
  Telugu actor Junior Ntr offered for ntr role in Jayalalitha's biopic titled thalaivi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X