ನಿಮ್ಮ ಅಕ್ಕ, ತಂಗಿ, ಮಗಳನ್ನು ಬೆತ್ತಲಾಗಿ ನೋಡಿದ್ರೆ ರೇಪ್ ಮಾಡ್ತೀಯಾ?; ಜ್ಯೋತಿರೈ ಆಕ್ರೋಶ

ಕನ್ನಡ ನಟಿ ಜ್ಯೋತಿ ರೈ ಇದೀಗ ತೆಲುಗು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ, ವೆಬ್‌ ಸೀರಿಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಬಹಳ ಹಿಂದೆಯೇ ಮದುವೆಯಾಗಿದ್ದ ಜ್ಯೋತು ಮೊದಲ ಪತಿಯಿಂದ ಡಿವೋರ್ಸ್ ಪಡೆದು ಇದೀಗ ಎರಡನೇ ಮದುವೆ ಆಗಿದ್ದಾರೆ.

ತೆಲುಗು ನಿರ್ದೇಶನದ ಸುಕು ಪೂರ್ವಜ್ ಕೈ ಹಿಡಿದ ಜ್ಯೋತಿ ರೈ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಜ್ಯೋತಿ ಹಾಟ್ ಹಾಟ್ ಫೋಟೊಶೂಟ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಆಕೆಯ ಹಾಟ್ ಫೋಟೊಗಳಿಗೆ ಕೆಟ್ಟ ಕೆಟ್ಟ ಕಾಮೆಂಟ್ಸ್ ಬರುತ್ತವೆ. ಆದರೂ ಅದಕ್ಕೆಲ್ಲಾ ಆಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆಲವರ ಅಕೌಂಟ್ ಬ್ಲಾಕ್ ಮಾಡಿರುವುದಾಗಿ ಇತ್ತೀಚೆಗೆ ಹೇಳಿದ್ದರು.

Jyothi Poorvaj on bad comments on Instagram it s disgusting

ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಜ್ಯೋತಿರೈ ಇತ್ತೀಚೆಗೆ ಕನ್ನಡ ಬಿಗ್‌ಬಾಸ್ ಶೋ ಆಫರ್ ನಿರಾಕರಿಸಿದ್ದರು. ಸದ್ಯ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿರುವ ಜ್ಯೋತಿ ರೈ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ವರ್ತಿಸುವವರ ಬಗ್ಗೆಯೂ ಕಿಡಿಕಾರಿದ್ದಾರೆ. ಸದ್ಯ ಸಂದರ್ಶನದ ಪ್ರೋಮೊ ಮಾತ್ರ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಮಹಿಳೆಯರೇ ಮಹಿಳೆಯರಿಗೆ ಶತ್ರು ಎಂದು ಜ್ಯೋತಿರೈ ಹೇಳಿದ್ದಾರೆ. ಇತ್ತೀಚೆಗೆ ಕೊಲ್ಕತ್ತಾದಲ್ಲಿ ವೈದ್ಯೆಯ ಮೇಲೆ ರೇಪ್ ಆಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಸಾಕಷ್ಟು ಜನ ಮಹಿಳೆಯರೇ ಕಾಮೆಂಟ್ ಮಾಡಿದ್ದಾರೆ. ಆ ಯುವತಿ ಬಗ್ಗೆ ಮಹಿಳೆಯರೇ ನೆಗೆಟಿವ್ ಆಗಿ ಮಾತನಾಡಿದ್ದಾರೆ ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುವವರ ಬಗ್ಗೆಯೂ ಜ್ಯೋತಿರೈ ಅಸಮಾಧಾನ ಹೊರ ಹಾಕಿದ್ದಾರೆ. ಯಾವುದೋ ಗಾಳಿಸುದ್ದಿಯನ್ನು ಪೋಸ್ಟ್ ಮಾಡಿಬಿಡ್ತೀಯಾ? ನಿನಗೆ ಹಣ ಬರುತ್ತದೆ ಸರಿ. ನಾಳೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಆ ರೀತಿ ಆದರೆ ಏನ್ ಮಾಡ್ತಿಯಾ? ಹಾಗಾಗಿ ಆ ರೀತಿ ಮಾಡಬೇಡ ಎಂದು ಕಿವಿ ಮಾತು ಹೇಳಿದ್ದಾರೆ.

Jyothi Poorvaj on bad comments on Instagram it s disgusting

ಸಿನಿಮಾಗಳ ಬಗ್ಗೆ ನಾನು ಬಹಳ ಹಿಂದೆಯೇ ಆಲೋಚಿಸಬೇಕಿತ್ತು ಎಂದು ಪಶ್ಚಾತಾಪ ಪಟ್ಟಿದ್ದಾರೆ. ಮೊದಲೇ ಸಿನಿಮಾ ನಟಿಯಾಗಿ ಬಂದಿದ್ದರೆ ಚೆನ್ನಾಗಿತ್ತು. ಏನು ಮಾಡೋಕೆ ಆಗೋಲ್ಲ ಜೀವನ ಅನ್ನೋದು ಒಂದು ಸ್ಕ್ರಿಪ್ಟ್. ಇದು ಹೀಗೆ ನಡೆಯಬೇಕು ಎಂದು ಬರೆದುಬಿಟ್ಟಿರುತ್ತದೆ ಅನ್ನಿಸುತ್ತದೆ. ಹಾಗೆ ನಡೆಯುತ್ತದೆ.

ನನಗೆ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕೆಟ್ಟ ಕಾಮೆಂಟ್ಸ್‌ಗಳನ್ನು ತೋರಿಸಿದರೆ ಜನ ಶಾಕ್ ಆಗಿಬಿಡ್ತಾರೆ. ನೀನು ಮಾತ್ರ ನಿನ್ನನ್ನು ಶ್ರೀರಾಮಚಂದ್ರ ಎಂದು ಬಿಂಬಿಸಿಕೊಂಡು ಕೆಟ್ಟದಾಗಿ ಮೆಸೇಜ್ ಮಾಡುತ್ತೀಯಾ. ಇದು ಹೇಗೆ? ನಾನು ಕೇಳ್ತೀನಿ, ನಿಮ್ಮ ಅಕ್ಕ, ತಂಗಿ ಅಥವಾ ನಿಮ್ಮ ತಾಯಿಯನ್ನು ಬೆತ್ತಲಾಗಿ ನೋಡಿದರೆ ಅವರನ್ನು ರೇಪ್ ಮಾಡ್ತೀಯಾ? ನಿಮ್ಮ ಮಗಳನ್ನು ಬೆತ್ತಲಾಗಿ ನೋಡಿದರೆ ರೇಪ್ ಮಾಡಿಬಿಡ್ತಿಯಾ? ಎಂದು ಕೆಲವರ ಕೆಟ್ಟ ಮನಸ್ಥಿತಿ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.

ಸುಕು ಪೂರ್ವಜ್ ಜೊತೆ ಮದುವೆ ಬಗ್ಗೆಯೂ ಜ್ಯೋತಿರೈ ಮಾತನಾಡಿದ್ದಾರೆ. ನಾನು ಒಮ್ಮೆ ಅವರನ್ನು ಕೇಳಿದೆ, ನನ್ನನ್ನು ಮಡುವೆ ಆಗ್ತೀರಾ? ಅಂತ. ಹೌದು ಅಂದ್ರು. ಯಾವಾಗ ಅಂದೇ, ಈಗ್ಲೇ ಅಂದ್ರು ಎಂದು ತಮ್ಮ ಲವ್‌ಸ್ಟೋರಿ ಬಗ್ಗೆಯೂ ಮಾತನಾಡಿದ್ದಾರೆ. ಸದ್ಯ ಇದು ಪ್ರೋಮೊ ಹೈಲೆಟ್ಸ್ ಅಷ್ಟೇ ಕಂಪ್ಲೀಟ್ ಸಂದರ್ಶನ ಶೀಘ್ರದಲ್ಲೇ ರಿಲೀಸ್ ಆಗಲಿದೆ.

ಕೆಲ ವರ್ಷಗಳ ಹಿಂದೆ ಜ್ಯೋತಿರೈ ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. 'ಬಂದೇ ಬರತಾವ ಕಾಲ' ಮೊದಲ ಧಾರಾವಾಹಿ. ಬಳಿಕ 'ಕಿನ್ನರಿ', 'ಗೆಜ್ಜೆ ಪೂಜೆ', 'ಮೂರುಗಂಟು', 'ಲವಲವಿಕೆ', 'ಅನುರಾಗ ಸಂಗಮ', 'ಜೋಗುಳ' ಹೀಗೆ ಸಾಕಷ್ಟು ಕಥೆಗಳಿಗೆ ಬಣ್ಣ ಹಚ್ಚಿದ್ದರು.

More from Filmibeat

English summary
Kannada actress Jyothi Rai on upset over negative comments and spreading rumors;
Read more about: actress telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X