ನಮಗೂ ಆಸೆಗಳು ಇರುತ್ತೆ, ಹಾಟ್ ಆಗಿ ಕಾಣಿಸಿಕೊಳ್ಳೋದು ಯಾಕಂದ್ರೆ?- ಜ್ಯೋತಿ ರೈ

ಕನ್ನಡ ಕಿರುತೆರೆ ನಟಿ ಜ್ಯೋತಿ ರೈ ಈ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಬಹಳ ದಿನಗಳ ಬಳಿಕ ಕನ್ನಡದ 'ಹಲ್ಕಾ ಡಾನ್' ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಲಾ ಎಂಬುವವರು ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್ ಹೀರೊ ಆಗಿ ನಟಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ಜ್ಯೋತಿ ಆಗಮಿಸಿದ್ದರು.

ನಗರದ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗೆ 'ಹಲ್ಕಾ ಡಾನ್' ಸಿನಿಮಾ ಮುಹೂರ್ತ ಸಮಾರಂಭ ನಡೀತು. ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ದಂಪತಿ, ಕಿಚ್ಚ ಸುದೀಪ್, ರಚಿತಾ ರಾಮ್ ಸೇರಿದಂತೆ ಹಲವರು ಈ ಕಾರ್ಯಕ್ರಮಕ್ಕೆ ಹಾಜರಾಗಿ ಶುಭ ಕೋರಿದ್ದಾರೆ. ಬಹಳ ದಿನಗಳ ಬಳಿಕ ಕನ್ನಡ ಮಾಧ್ಯಮಗಳ ಜೊತೆಗೆ ನಟಿ ಜ್ಯೋತಿ ರೈ ಮಾತನಾಡಿದ್ದಾರೆ.

Jyothi Rai Opens Up About Her glamorous Transformation and Kannada Comeback in Halka Don

ತೆಲುಗಿನ 'ಗುಪ್ಪೆದಂತ ಮನಸು' ಧಾರಾವಾಹಿ ಜ್ಯೋತಿ ರೈ ಅವರಿಗೆ ಅಲ್ಲಿ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. 2ನೇ ಮದುವೆ ಆಗಿ ಹೈದರಾಬಾದ್‌ನಲ್ಲೇ ಅವರು ಸೆಟ್ಲ್ ಆಗಿದ್ದಾರೆ. ನಿರ್ದೇಶಕ ಸುಕು ಪೂರ್ವಜ್ ಜೊತೆ ಅವರ ಜೊತೆ ಹೊಸ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಜ್ಯೋತಿ ಸಿಕ್ಕಾಪಟ್ಟೆ ಬಿಂದಾಸ್ ಅವತಾರದಲ್ಲಿ ದರ್ಶನ ಕೊಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊ, ವೀಡಿಯೋಗಳ ಮೂಲಕ ಹುಬ್ಬೇರಿಸುತ್ತಿದ್ದಾರೆ.

ದಿಢೀರನೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಕಾರಣ ಏನು ಎಂದು ಜ್ಯೋತಿ ಈಗ ಹೇಳಿಕೊಂಡಿದ್ದಾರೆ. ಆನ್‌ಸ್ಕ್ರೀನ್‌ ಮಾತ್ರ ನಾನು ಬೋಲ್ಡ್, ನಿಜ ಜೀವನದಲ್ಲಿ ಬಹಳ ಟ್ರೆಡಿಷನಲ್ ಎಂದು ಫಸ್ಟ್ ನ್ಯೂಸ್ ವಾಹಿನಿ ಪ್ರತಿಕ್ರಿಯಿಸಿದ್ದಾರೆ. 'ಹಲ್ಕಾ ಡಾನ್' ಚಿತ್ರದಲ್ಲಿ ಬಹಳ ಪ್ರಮುಖ ಪಾತ್ರದಲ್ಲಿ ನಟಿಸಿದ್ದೀನಿ, ಭರ್ಜರಿಯಾಗಿ ಕಂಬ್ಯಾಕ್ ಮಾಡುತ್ತಿರುವುದಕ್ಕೆ ಖುಷಿಯಿದೆ ಎಂದಿದ್ದಾರೆ.

Jyothi Rai Opens Up About Her glamorous Transformation and Kannada Comeback in Halka Don

"ಕನ್ನಡದಿಂದ ಸಾಕಷ್ಟು ಅವಕಾಶಗಳು ಬರ್ತಿತ್ತು. ಆದರೆ ಇತ್ತೀಚೆಗೆ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದೀನಿ. ಹಾಗಾಗಿ ಒಂದೊಳ್ಳೆ ಅವಕಾಶಕ್ಕಾಗಿ ಕಾಯ್ತಿದ್ದೆ. ಇನ್ನು ನಮ್ಮದೇ ಬ್ಯಾನರ್‌ನಲ್ಲಿ 'ಕಿಲ್ಲರ್' ಎಂಬ ಸಿನಿಮಾ ನಿರ್ಮಾಣವಾಗಿದೆ. ಶೀಘ್ರದಲ್ಲೇ ಆ ಸಿನಿಮಾ ತೆರೆಗೆ ಬರಲಿದೆ. ಜ್ಯೋತಿ ರೈ ಈಗ ಜ್ಯೋತಿ ಪೂವರ್ಜ್ ಆದ ಬಳಿಕ ಲೈಫ್ ಸೂಪರ್ ಆಗಿದೆ. ಆರಾಮಾಗಿ ಇದ್ದೀನಿ. ನನ್ನ ಬಗ್ಗೆ ನಾನು ಹೆಚ್ಚು ಗಮನ ಹರಿಸಲು ಸಮಯ ಸಿಕ್ಕಿದೆ" ಎಂದು ಜ್ಯೋತಿ ರೈ ಹೇಳಿದ್ದಾರೆ.

ತಾವು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿ "ನನಗೆ ಮೊದಲಿನಿಂದಲೂ ಅಭಿಮಾನಿಗಳು ಬೆಂಬಲ ಸೂಚಿಸುತ್ತಿದ್ದಾರೆ. ಧಾರಾವಾಹಿ ದಿನಗಳಿಂದಲೂ ಆಶೀರ್ವಾದ ಸಿಕ್ಕಿದೆ. ನಾನು ಸ್ವಲ್ಪ ಮಾಡ್ರನ್ ಲುಕ್‌, ಲೀಡ್ ರೋಲ್ಸ್‌ಗೆ ಶಿಫ್ಟ್ ಆದಾಗ ಭಯ ಇತ್ತು. ಜನ ಹೇಗೆ ಸ್ವೀಕರಿಸುತ್ತಾರೆ ಅಂತ. ನಮಗೆ ಆಸೆಗಳು ಇರುತ್ತೆ. ಇದನ್ನು ಪ್ರಯತ್ನಿಸೋಣ ಅನಿಸಿತು. ಅದನ್ನು ಸವಾಲಾಗಿ ಸ್ವೀಕರಿಸಿದೆ. ಅದಕ್ಕೂ ಬೆಂಬಲ ಸಿಕ್ಕಿದೆ . ನಾನು ವೈಯಕ್ತಿಕವಾಗಿ ಮಾಡ್ರನ್ ಆಗಿದ್ದರೂ ಆನ್‌ಸ್ಕ್ರೀನ್ ಸಾಫ್ಟ್ ರೋಲ್ಸ್ ಮಾಡ್ತಾ ಬಂದಿದ್ದೆ. ಆ ಬದಲಾವಣೆ ಕಾಣಿಸ್ತಿದೆ. ಅದಕ್ಕಾಗಿ ನನ್ನ ಪತಿ ಸುಕು ಪೂರ್ವಜ್ ಅವರಿಗೆ ಧನ್ಯವಾದ. ನಮ್ಮದೇ ಸಿನಿಮಾ, ನೀನು ಗಮನ ಹರಿಸಿ ಮಾಡಬೇಕು ಅಂದಾಗ ಧೈರ್ಯ ಮಾಡಿದೆ" ಎಂದಿದ್ದಾರೆ.

ನಟಿಯರು ಗ್ಲಾಮರಸ್ ಆಗಿ ಕಾಣಿಸಿಕೊಂಡರೆ ಟ್ರೋಲ್ ಎದುರಿಸಬೇಕಾಗುತ್ತದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ "ಯಾರು ಏನೇ ಹೇಳಿದರೂ ನನ್ನ ಜೀವನ ಸ್ಟಾಪ್ ಆಗಲ್ಲ. ನಾನು ಏನು ಎಂದು ನನಗೆ ಗೊತ್ತು, ನನ್ನ ಮನೆಯವರಿಗೆ ಸುತ್ತಾ ಇರುವವರಿಗೆ ಗೊತ್ತು. ಬಂಡಿ ಮಹಾಕಾಳಿಗೆ ಗೊತ್ತು. ನಮ್ಮ ಒಳ್ಳೆ ಕೆಲಸ ಮಾಡ್ತಾ ಹೋಗಬೇಕು, ಅದೇ ನಮ್ಮನ್ನು ಕಾಯುತ್ತದೆ" ಎಂದು ನಟಿ ಜ್ಯೋತಿ ರೈ ವಿವರಿಸಿದ್ದಾರೆ.

More from Filmibeat

Read more about: sandalwood tollywood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X