'ಸಲಾರ್' ಸಿನಿಮಾ: ಪ್ರಭಾಸ್ ಸಹೋದರಿ ಪಾತ್ರಕ್ಕೆ ಸ್ಟಾರ್ ನಟಿ ಎಂಟ್ರಿ?

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಸಲಾರ್ ಸಿನಿಮಾದ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರುತ್ತಿದೆ.

ಸದ್ಯ ಕೊರೊನಾ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದ್ದು, ಕೊರೊನಾ ಕಡಿಮೆ ಆಗುತ್ತಿದ್ದಂತೆ ಮತ್ತೆ ಚಿತ್ರೀಕರಣ ಪ್ರಾರಂಭಮಾಡಲು ಪ್ರಶಾಂತ್ ನೀಲ್ ತಂಡ ಸಿದ್ಧವಾಗಿದೆ. ಈ ನಡುವೆ ಇತ್ತೀಚಿಗಷ್ಟೆ ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಎಂಟ್ರಿಯಾಗಿದ್ದಾರೆ ಎನ್ನುವ ಸುದ್ದಿ ಬೆನ್ನಲ್ಲೇ ಇದೀಗ ಮತ್ತೋರ್ವ ಖ್ಯಾತ ನಟಿಯ ಹೆಸರು ಕೇಳಿಬರುತ್ತಿದೆ. ಚಿತ್ರದಲ್ಲಿ ಪ್ರಭಾಸ್ ಸಹೋದರಿ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಎಂಟ್ರಿ ಕೊಟ್ಟಿದ್ದಾರಂತೆ. ಈ ಬಗ್ಗೆ ಚಿತ್ರತಂಡ ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಮುಂದೆ ಓದಿ...

ಪ್ರಭಾಸ್ ಸಹೋದರಿ ಪಾತ್ರದಲ್ಲಿ ಜ್ಯೋತಿಕಾ

ಪ್ರಭಾಸ್ ಸಹೋದರಿ ಪಾತ್ರದಲ್ಲಿ ಜ್ಯೋತಿಕಾ

ಪ್ರಭಾಸ್ ಸಹೋದರಿಯಾಗಿ ಎಂಟ್ರಿ ಕೊಡುತ್ತಿರುವ ಖ್ಯಾತ ನಟಿ ಮತ್ಯಾರು ಅಲ್ಲ ಜ್ಯೋತಿಕಾ. ಚಿತ್ರದಲ್ಲಿ ಸೂರ್ಯ ಪತ್ನಿ ಜ್ಯೋತಿಕಾ ಪ್ರಭಾಸ್ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತು ಕೇಳಿಬರುತ್ತಿದೆ. ಆದರೆ ಬಗ್ಗೆ ಸಿನಿಮಾತಂಡ ಇನ್ನೂ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ

ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ

ಪ್ರಭಾಸ್ ತಾಯಿಯ ಪಾತ್ರದಲ್ಲಿ ನಟಿ ರಮ್ಯಾ ಕೃಷ್ಣ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಿದ್ದ ರಮ್ಯಾ ಸಲಾರ್ ನಲ್ಲೂ ಜೊತೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಭರ್ಜರಿ ಆಕ್ಷನ್ ಜೊತೆಗೆ 'ತಾಯಿ ಸೆಂಟಿಮೆಂಟ್' ಸಾಮಾನ್ಯ ಅಂಶ. 'ಸಲಾರ್'ನಲ್ಲಿಯೂ ತಾಯಿ ಸೆಂಟಿಮೆಂಟ್ ದೃಶ್ಯಗಳು ಇರಲಿದ್ದು, ತಾಯಿ ಪಾತ್ರಕ್ಕೆ ಅನುಭವಿ ನಟಿಯಾದ ರಮ್ಯಕೃಷ್ಣರನ್ನು ಆಯ್ಕೆ ಮಾಡಿದ್ದಾರೆ ಪ್ರಶಾಂತ್ ನೀಲ್.

ಆರ್ಮಿ ಅಧಿಕಾರಿ ಪಾತ್ರದಲ್ಲಿ ಪ್ರಭಾಸ್

ಆರ್ಮಿ ಅಧಿಕಾರಿ ಪಾತ್ರದಲ್ಲಿ ಪ್ರಭಾಸ್

ಸಲಾರ್ ನಲ್ಲಿ ಪ್ರಭಾಸ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಂದಹಾಗೆ ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಒಂದು ಪಾತ್ರದಲ್ಲಿ ಸೇನಾ ಅಧಿಕಾರಿಯಾದರೆ ಮತ್ತೊಂದು ಪಾತ್ರ ಯಾವುದು ಎನ್ನುವುದು ಸದ್ಯದ ಕುತೂಹಲ. ಮೊದಲ ಬಾರಿಗೆ ಪ್ರಭಾಸ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದು, ಆರ್ಮಿ ಉಡುಪಿನಲ್ಲಿ ಪ್ರಭಾಸ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Recommended Video

ಚಿರು ನಂತರ ಮನೆಯಲ್ಲಿದ್ದ ಮತ್ತೊಬ್ಬ ಆಪ್ತನನ್ನು ಕಳೆದುಕೊಂಡ ಮೇಘನಾ ರಾಜ್ | Filmibeat Kannada
ಶ್ರುತಿ ಹಾಸನ್ ನಾಯಕಿ, ಶ್ರೀನಿಧಿ ಶೆಟ್ಟಿ ಡಾನ್ಸ್

ಶ್ರುತಿ ಹಾಸನ್ ನಾಯಕಿ, ಶ್ರೀನಿಧಿ ಶೆಟ್ಟಿ ಡಾನ್ಸ್

ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರುತಿ ಹಾಸನ್ ಪತ್ರಕರ್ತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಶ್ರುತಿ, ಪ್ರಭಾಸ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದ ವಿಶೇಷ ಹಾಡಿನಲ್ಲಿ ಶ್ರೀನಿಧಿ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನು ನಟ ಮೋಹನ್ ಲಾಲ್, ಕನ್ನಡದ ನಟ ಮಧು ಗುರುಸ್ವಾಮಿ ನಟಿಸುತ್ತಿದ್ದಾರೆ.

More from Filmibeat

English summary
Actress Jyothika likely to playing Prabhas's sister role in Salaar movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X