'ಕಬ್ಜ' ನೋಡಿ ಮೆಚ್ಚಿದ ಪವರ್ ಸ್ಟಾರ್: ಆರ್. ಚಂದ್ರು ನಿರ್ದೇಶನದ ಚಿತ್ರದಲ್ಲಿ ಪವನ್ ಕಲ್ಯಾಣ್?

ಆರ್‌. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರ ವಿಶ್ವದಾದ್ಯಂತ ತೆರೆಗಪ್ಪಳಿಸಿ ಭಾರೀ ಸದ್ದು ಮಾಡ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಥ್ರಿಲ್ಲಾಗಿದ್ದಾರೆ. ಚಂದ್ರು ನಿರ್ದೇಶನ, ಉಪೇಂದ್ರ ಆರ್ಭಟ, ಶಿವಣ್ಣ ಹಾಗೂ ಸುದೀಪ್ ಝಲಕ್ ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡಲು ಶುರು ಮಾಡಿದೆ. ಇದೇ ವೇಳೆ ಆರ್‌. ಚಂದ್ರು ನಿರ್ದೇಶನದ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸೋ ಸುದ್ದಿ ಬಂದಿದೆ.

ಶಿಡ್ಲಘಟ್ಟದಲ್ಲಿ 'ಕಬ್ಜ' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ವೇಳೆ ಚಿತ್ರತಂಡಕ್ಕೆ ಶುಭ ಕೋರಿ ಪವನ್ ಕಲ್ಯಾಣ್ ಪತ್ರ ಬರೆದಿದ್ದರು. ಇದೀಗ 'ಕಬ್ಜ' ಸಿನಿಮಾ ನೋಡಿ ಟಾಲಿವುಡ್ ಪವರ್ ಸ್ಟಾರ್ ಮೆಚ್ಚಿಕೊಂಡಿದ್ದಾರೆ. ಮಧ್ಯರಾತ್ರಿ ಆರ್‌. ಚಂದ್ರು ಪವನ್ ಕಲ್ಯಾಣ್‌ಗೆ ಸಿನಿಮಾ ತೋರಿಸಿದ್ದಾರೆ. ಮೊದಲಾರ್ಧ ಪಕ್ಕಾ ಇಂಡಿಯನ್ ಮತ್ತು ದ್ವಿತೀಯಾರ್ಧ ಹಾಲಿವುಡ್ ರೇಂಜ್ ಸಿನಿಮಾ ಎಂದು ಪವನ್ ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರಂತೆ. ಸಿನಿಮಾ ನೋಡಿ ಚಂದ್ರುನ ಹಾಡಿ ಹೊಗಳಿದ್ದಲ್ಲದೇ ಮೇಕಿಂಗ್, ಕಥೆ, ಚಿತ್ರಕಥೆ ಅದರಲ್ಲೂ ಕ್ಲೈಮಾಕ್ಸ್ ಬಗ್ಗೆ ಕೊಂಡಾಡಿದ್ದಾರೆ.

Kabzaa Director R Chandru and Pawan Kalyan to join hands for a pan-India project

ಇದೆಲ್ಲದರ ನಡುವೆ ಆರ್. ಚಂದ್ರು ನಿರ್ದೇಶನದ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸುತ್ತಾರೆ ಎನ್ನುವ ಗುಸು ಗುಸು ಶುರುವಾಗಿದೆ. ಟಾಲಿವುಡ್‌ ಅಂಗಳದಲ್ಲಿ ಈ ಬಗ್ಗೆ ಚರ್ಚೆ ನಡೀತಿದೆ. ಆರ್‌. ಚಂದ್ರು ಪ್ಯಾನ್ ಇಂಡಿಯಾ ಸಿನಿಮಾ ಪ್ಲ್ಯಾನ್ ಮಾಡ್ತಿದ್ದು ಇದರಲ್ಲಿ ಪವರ್ ಸ್ಟಾರ್ ನಟಿಸ್ತಾರೆ ಎನ್ನಲಾಗ್ತಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರು ಒಬ್ಬೊಬ್ಬರಾಗಿ ಟಾಲಿವುಡ್‌ ಕಡೆ ಹೋಗುತ್ತಿರುವಂತೆ ಕಾಣ್ತಿದೆ. ಈಗಾಗಲೇ ಪ್ರಶಾಂತ್ ನೀಲ್ ಟಾಲಿವುಡ್‌ನಲ್ಲಿ 'ಸಲಾರ್' ಸಿನಿಮಾ ಮಾಡ್ತಿದ್ದಾರೆ. ಎ. ಹರ್ಷ ಕೂಡ ತೆಲುಗು ಸಿನಿಮಾ ಆರಂಭಿಸಿದ್ದಾರೆ. ಇದೀಗ ಈ ಹಾದಿಯಲ್ಲಿ ಚಂದ್ರು ಹೊರಟಿರುವಂತೆ ಕಾಣ್ತಿದೆ.

ಒಂದ್ಕಡೆ ಪಾಲಿಟಿಕ್ಸ್‌ನಲ್ಲಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಪಕ್ಷ ಸಂಘಟನೆಗೆ ಬೇಕಾದ ಹಣಕ್ಕಾಗಿ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಸದ್ಯ ನಾಲ್ಕು ಸಿನಿಮಾಗಳು ಪವರ್ ಸ್ಟಾರ್ ಕೈಯಲ್ಲಿವೆ. ಕ್ರಿಶ್ ನಿರ್ದೇಶನದ 'ಹರಿ ಹರ ವೀರ ಮಲ್ಲು' ಸಿನಿಮಾ ಚಿತ್ರೀಕರಣ ನಡೀತಿದೆ. ಇದೊಂದು ಪೀರಿಯಡ್ ಆಕ್ಷನ್ ಅಡ್ವೆಂಚರಸ್ ಸಿನಿಮಾ ಆಗಿದೆ. ಇನ್ನು ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾ ಶೂಟಿಂಗ್ ತಡವಾಗುತ್ತಿದೆ. 'ಸಾಹೋ' ಸಿನಿಮಾ ಖ್ಯಾತಿಯ ಸುಜಿತ್ ಆಕ್ಷನ್ ಕಟ್ ಹೇಳುತ್ತಿರುವ 'OG' ಚಿತ್ರದಲ್ಲಿ ಪವನ್ ನಟಿಸೋದು ಪಕ್ಕಾ ಆಗಿದೆ. ಈ ಸಿನಿಮಾ ಮುಹೂರ್ತ ನೆರವೇರಿದೆ.

Kabzaa Director R Chandru and Pawan Kalyan to join hands for a pan-India project

ಈ ಮೂರು ಸಿನಿಮಾಗಳ ಜೊತೆಗೆ ಪವನ್ ಕಲ್ಯಾಣ್ ಇತ್ತೀಚೆಗೆ ಒಂದು ರೀಮೆಕ್ ಚಿತ್ರ ಒಪ್ಪಿಕೊಂಡಿದ್ದಾರೆ. 22 ದಿನ ಕಾಲ್‌ಶೀಟ್ ಕೊಟ್ಟು 45 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಈ ವಿಚಾರವನ್ನು ಖುದ್ದು ಪವರ್ ಸ್ಟಾರ್ ಬಹಿರಂಗವಾಗಿ ಘೋಷಿಸಿದ್ದಾರೆ. ತಮಿಳಿನ 'ವಿನೋದಯ ಸಿತಂ' ಸಿನಿಮಾ ರೀಮೆಕ್ ಇದು. ಚಿತ್ರದಲ್ಲಿ ಪವನ್ ಅಕ್ಕನ ಮಗ ಸಾಯಿ ಧರಮ್ ತೇಜ್ ಕೂಡ ನಟಿಸ್ತಿದ್ದಾರೆ. ತಮಿಳಿನ ಸಮುದ್ರ ಖನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

More from Filmibeat

English summary
Kabzaa Director R Chandru and Pawan Kalyan to join hands for a pan-India project. Pawan Kalyana is super impressed with R Chandru's Kabzaa. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X