ಫೋಟೋಗಳು: ಮಾಲ್ಡೀವ್ಸ್ ಹನಿಮೂನ್ ಪ್ರವಾಸದಲ್ಲಿ ಕಾಜಲ್ ಅಗರ್ವಾಲ್-ಗೌತಮ್
ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇತ್ತೀಚಿಗಷ್ಟೆ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ತೀರ ಆಪ್ತರ ನಡುವೆ ಕಾಜಲ್ ಮತ್ತು ಗೌತಮ್ ಹಸೆಮಣೆ ಏರಿದ್ದಾರೆ.
ಮದುವೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಾಜಲ್ ಅಗರ್ವಾಲ್ ತರಹೇವಾರಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಪತಿ ಜೊತೆಗೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದೀಗ ಕಾಜಲ್ ಮತ್ತು ಗೌತಮ್ ಜೋಡಿ ಹನಿಮೂನ್ ಗೆ ಹೋಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಜೋಡಿ ತಮ್ಮ ಹನಿಮೂನ್ ಗೆ ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿರುವ ಫೋಟೋಗಳನ್ನು ಕಾಜಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಉಡುಪಿನಲ್ಲಿ ಕಾಜಲ್ ಮಿಂಚುತ್ತಿದ್ದಾರೆ. ಪತಿಯ ಜೊತೆೆ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಾಜಲ್ ಜೋಡಿ ಹನಿಮೂನ್ ಗೆ ಹೊರಟಿರುವುದಾಗಿ ಪಾಸ್ ಪೋರ್ಟ್ ಫೋಟೋವನ್ನು ಹಂಚಿಕೊಂಡಿದ್ದರು. ಎಲ್ಲಿಗೆ ಹೋಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೆ ಮಾಲ್ಡೀವ್ಸ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಕಾಜಲ್ ಸದ್ಯ ಮದುವೆ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಕಾಜಲ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಅಭಿನಯದ ಇಂಡಿಯನ್-2, ಮುಂಬೈ ಸಾಗಾ, ಸೇರಿದಂತೆ ಸಾಕಷ್ಟು ಸಿನಿಮಾಗಳು ಕಾಜಲ್ ಬಳಿ ಇವೆ. ಇನ್ನೂ ಸಿನಿಮಾ ಜೊತೆಗೆ ವೆಬ್ ಸೀರಿಸ್ ಲೋಕಕ್ಕು ಕಾಲಿಟ್ಟಿದ್ದಾರೆ. ಲೈವ್ ಟೆಲಿಕಾಸ್ಟ್ ಎಂಬ ವೆಬ್ ಸೀರಿಸ್ ನಲ್ಲಿ ಕಾಜಲ್ ನಟಿಸುತ್ತಿದ್ದಾರೆ.


Click it and Unblock the Notifications











