ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿ ಕಾಜಲ್ ಅಗರ್ವಾಲ್

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮತ್ತು ಪತಿ ಗೌತಮ್ ಕಿಚಲು ಹನಿಮೂನ್ ಪ್ರವಾಸದಲ್ಲಿದ್ದಾರೆ. ಮಾಲ್ಡೀವ್ಸ್ ನಲ್ಲಿರುವ ಕಾಜಲ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮದುವೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಾಜಲ್ ತರಹೇವಾರಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಕಾಜಲ್ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾಲ್ಡೀವ್ಸ್ ಪ್ರವಾಸ ಆನಂದಿಸುತ್ತಿರುವ ಕಾಜಲ್, ಇತ್ತೀಚಿಗೆ ಅಂಡರ್ ವಾಟರ್ ಸ್ಪೋರ್ಟ್ಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಪತಿ ಗೌತಮ್ ಜೊತೆ ಸ್ಕೂಬಾ ಡೈವಿಂಗ್ ಮಾಡಿರುವ ಕಾಜಲ್ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ.

ಕಾಜಲ್ ಫೋಟೋವನ್ನು ಶೇರ್ ಮಾಡಿ, ನನಗೆ ಸಾಗರವೆಂದರೆ ತುಂಬಾ ಇಷ್ಟ. ನಾನು ಯಾವಾಗಲು ನೀಲಿ ಬಣ್ಣವನ್ನು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಕಾಜಲ್ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕಾಜಲ್ ದಂಪತಿ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿವೆ.

Kajal Agarwal And Gautam Kitchlu Went Scuba Diving In Maldives

ದಕ್ಷಿಣ ಭಾರತದ ಈ ಸುಂದರಿ ಅಕ್ಟೋಬರ್ 30ರಂದು ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ತೀರ ಆಪ್ತರ ನಡುವೆ ಕಾಜಲ್ ಮತ್ತು ಗೌತಮ್ ಹಸೆಮಣೆ ಏರಿದ್ದಾರೆ.

Kajal Agarwal And Gautam Kitchlu Went Scuba Diving In Maldives

ಮದುವೆ ಜೀವನ ಎಂಜಾಯ್ ಮಾಡುತ್ತಿರುವ ಕಾಜಲ್ ಸಿನಿಮಾ ವಿಚಾರಕ್ಕೆ ಬರುವುದಾರೆ, ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಅಭಿನಯದ ಇಂಡಿಯನ್-2, ಮುಂಬೈ ಸಾಗಾ, ಸೇರಿದಂತೆ ಸಾಕಷ್ಟು ಸಿನಿಮಾಗಳು ಕಾಜಲ್ ಬಳಿ ಇವೆ. ಇನ್ನೂ ಸಿನಿಮಾ ಜೊತೆಗೆ ವೆಬ್ ಸೀರಿಸ್ ಲೋಕಕ್ಕು ಕಾಲಿಟ್ಟಿದ್ದಾರೆ. ಲೈವ್ ಟೆಲಿಕಾಸ್ಟ್ ಎಂಬ ವೆಬ್ ಸೀರಿಸ್ ನಲ್ಲಿ ಕಾಜಲ್ ನಟಿಸುತ್ತಿದ್ದಾರೆ.

Recommended Video

ಪಾರ್ಟ್ನರ್ ಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ KL Rahul | Filmibeat Kannada

More from Filmibeat

English summary
Actress Kajal Agarwal and Gautam Kitchlu went scuba Diving in maldives.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X