ಮೊದಲ ಬಾರಿಗೆ ಭಾವಿ ಪತಿಯನ್ನು ಪರಿಚಯಿಸಿದ ನಟಿ ಕಾಜಲ್ ಅಗರ್ವಾಲ್

ನಟಿ ಕಾಜಲ್ ಅಗರ್ವಾಲ್ ಮದುವೆಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಇದೇ ತಿಂಗಳ ಕೊನೆಯಲ್ಲಿ ಕಾಜಲ್ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ಮದುವೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಮುಂಬೈನಲ್ಲಿ ಹೊಸ ಮನೆ ಖರೀದಿಸಿ ಮನೆಗೆ ವಸ್ತುಗಳನ್ನು ಜೋಡಿಸಿದ ಕೊಳ್ಳುತ್ತಿರುವ ಫೋಟೋವನ್ನು ಕಾಜಲ್ ಶೇರ್ ಮಾಡಿದ್ದರು.

ಕಳೆದ ಕೆಲವು ತಿಂಗಳಿಂದ ಕಾಜಲ್ ಮದುವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದರೆ ಎಲ್ಲೂ ಮದುವೆ ಬಗ್ಗೆ ಬಹಿರಂಗ ಪಡಿಸಿರಲಿಲ್ಲ. ಕೆಲವು ದಿನಗಳ ಹಿಂದೆಯಷ್ಟೆ ಮದುವೆ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಇನ್ನೇನು ಹೊಸ ಬಾಳಿನ ಹೊಸಿಲಲಿ ನಿಂತಿರುವ ಕಾಜಲ್ ಇದೇ ಮೊದಲ ಬಾರಿಗೆ ಭಾವಿ ಪತಿಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಪತಿ ಜೊತೆ ಕಾಜಲ್ ಫೋಟೋಶೂಟ್

ಪತಿ ಜೊತೆ ಕಾಜಲ್ ಫೋಟೋಶೂಟ್

ಮದುವೆಗೂ ಮುನ್ನ ಕಾಜಲ್ ಪತಿಜೊತೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ದಸರಾ ಶುಭಾಶಯ ತಿಳಿಸಿದ್ದಾರೆ. ಕಾಜಲ್ ಮತ್ತು ಗೌತಮ್ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ಹರಿದುಬರುತ್ತಿದೆ.

ನಿಶ್ಚಿತಾರ್ಥದ ಉಂಗುರ ಶೇರ್ ಮಾಡಿರುವ ಕಾಜಲ್

ನಿಶ್ಚಿತಾರ್ಥದ ಉಂಗುರ ಶೇರ್ ಮಾಡಿರುವ ಕಾಜಲ್

ಇತ್ತೀಚಿಗಷ್ಟೆ ಕಾಜಲ್ ನಿಶ್ಚಿತಾರ್ಥದ ರಿಂಗ್ ರಿವೀಲ್ ಮಾಡಿದ್ದರು. ಕಾಜಲ್ ಉಂಗುರವನ್ನು ತೋರಿಸುತ್ತಿರುವ ಕೈ ಬೆರಳಿನ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿತ್ತು. ಉಂಗುರ ತೋರಿಸಿ ಸೂಪರ್ ಎಂದು ಹೇಳಿರುವ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ನಿಶ್ಚಿತಾರ್ಥದ ಬಳಿಕ ಕಾಜಲ್ ಎಲ್ಲಿಯೂ ಉಂಗುರ ರಿವೀಲ್ ಮಾಡಿರಲಿಲ್ಲ. ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ಅಕ್ಟೋಬರ್ 30ಕ್ಕೆ ಮದುವೆ

ಅಕ್ಟೋಬರ್ 30ಕ್ಕೆ ಮದುವೆ

ಕಾಜಲ್ ಅಕ್ಟೋಬರ್ 30ರಂದು ಮುಂಬೈ ಮೂಲದ ಉದ್ಯಮಿ ಗೌತಮ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತೀರಾ ಖಾಸಗಿಯಾಗಿ ನಡೆಯುವ ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಕೊರೊನಾ ವೈರಸ್ ಪರಿಣಾಮ ಕಾಜಲ್ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಬಳಿಕ ಕಾಜಲ್ ಪತಿಯ ಜೊತೆ ಮುಂಬೈನಲ್ಲಿ ನೆಲೆಸಲಿದ್ದಾರೆ.

Recommended Video

ಇದಪ್ಪ RCB ಫ್ಯಾನ್ ವರಸೆ ಅಂದ್ರೆ | Simple Suni | Filmibeat Kannada
ಮೊದಲ ಬರಿಗೆ ವೆಬ್ ಸೀರಿಸ್ ನಲ್ಲಿ ಅಭಿನಯ

ಮೊದಲ ಬರಿಗೆ ವೆಬ್ ಸೀರಿಸ್ ನಲ್ಲಿ ಅಭಿನಯ

ಮದುವೆ ಬಳಿಕವೂ ನಟನೆ ಮುಂದುವರೆಸುವುದಾಗಿ ಹೇಳಿರುವ ಕಾಜಲ್, ಮದುವೆ ಸುದ್ದಿಯ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಮೊದಲ ಬಾರಿಗೆ ಕಾಜಲ್ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಲೈವ್ ಟೆಲಿಕಾಸ್ಟ್ ಎಂಬ ತಮಿಳು ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಡಿಜಿಟಲ್ ಲೋಕಕ್ಕೆ ಕಾಲಿಡುತ್ತಿದ್ದಾರೆ.

More from Filmibeat

English summary
Actress Kajal Agarwal shares a photo with her fiance Gautam Kitchlu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X