For Quick Alerts
  ALLOW NOTIFICATIONS  
  For Daily Alerts

  30 ವರ್ಷಗಳಿಂದ ಕಾಜಲ್ ಅಗರ್ವಾಲ್ ಅನ್ನು ಕಾಡುತ್ತಿದೆ ಈ ಕಾಯಿಲೆ

  |

  ನಟ-ನಟಿಯರು ಸದಾ ಐಶಾರಾಮಿ ಜೀವನ ನಡೆಸುತ್ತಾ ಖುಷಿಯಾಗಿ, ಸಂತೋಶವಾಗಿ ಇರುತ್ತಾರೆ ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ ಸತ್ಯ ಅದಾಗಿರುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳು ಇದ್ದೇ ಇರುತ್ತವೆ. ಕೆಲವರಷ್ಟೆ ಆ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ.

  ಸಣ್ಣ ವಯಸ್ಸಿನಿಂದ ತಾವು ಕಾಯಿಲೆಯೊಂದರಿಂದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಇದೀಗ ಮಾತನಾಡಿದ್ದಾರೆ ಖ್ಯಾತ ನಟಿ ಕಾಜಲ್ ಅಗರ್ವಾಲ್. ಕಾಜಲ್ ಕೇವಲ 5 ವರ್ಷದವರಿದ್ದಾಗಲೇ ಅವರಿಗೆ ಖಾಯಿಲೆ ಇರುವುದು ಗೊತ್ತಾಗಿತ್ತಂತೆ.

  ನಟಿ ಕಾಜಲ್ ಗೆ 'ಶ್ವಾಸನಾಳದ ಅಸ್ತಮಾ' ಇರುವುದು ಸಣ್ಣ ವಯಸ್ಸಿನಲ್ಲೇ ಪತ್ತೆಯಾಗಿತ್ತು. ಆಗಿನಿಂದಲೂ ಅವರು ಆ ಕಾಯಿಲೆಯೊಂದಿಗೆಯೇ ಬದುಕುತ್ತಿದ್ದಾರೆ. ತುಸು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಕುತ್ತು ತರುವ ಕಾಯಿಲೆಯೇ ಇದು.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ಕಾಜಲ್ ಅಗರ್ವಾಲ್, 'ಕಾಯಿಲೆ ಇರುವುದು ಗೊತ್ತಾದ ಕೂಡಲೇ ನನ್ನ ಆಹಾರ ಪಥ್ಯದಲ್ಲಿ ಬದಲಾವಣೆ ಮಾಡಿದರು. ಸಣ್ಣ ಹುಡುಗಿಯಾದ ನಾನು ಇತರರಂತೆ ಚಾಕಲೇಟ್, ಡೈರಿ ಉತ್ಪನ್ನಗಳನ್ನು ತಿನ್ನುವಂತೆ ಇರಲಿಲ್ಲ' ಎಂದಿದ್ದಾರೆ ಕಾಜಲ್ ಅಗರ್ವಾಲ್.

  'ಬೆಳೆದು ದೊಡ್ಡವಳಾದ ಮೇಲೂ ಕಾಯಿಲೆ ಸರಿಹೋಗಲಿಲ್ಲ'

  'ಬೆಳೆದು ದೊಡ್ಡವಳಾದ ಮೇಲೂ ಕಾಯಿಲೆ ಸರಿಹೋಗಲಿಲ್ಲ'

  'ನಾನು ಬೆಳೆದು ದೊಡ್ಡವಳಾದ ಮೇಲೂ ಕಾಯಿಲೆ ಸರಿಹೋಗಲಿಲ್ಲ. ನಾನು ಪ್ರವಾಸ ಹೋದಾಗ, ಧೂಳು ಪ್ರದೇಶಗಳಲ್ಲಿ, ರಸ್ತೆಯ ಧೂಳು, ಚಳಿಗಾಲದಲ್ಲಿ, ಹೊಗೆ, ಇನ್ನಿತರ ಸನ್ನಿವೇಶಗಳಲ್ಲಿ ಬಹಳ ಕಷ್ಟ ಅನುಭವಿಸುತ್ತಿದ್ದೆ. ಧೂಳು, ಹೊಗೆ, ಚಳಿ ನಮ್ಮ ದೇಶದಲ್ಲಿ ಬಹಳ ಸಾಮಾನ್ಯ ಸಹ, ಹಾಗಾಗಿ ಪ್ರತಿದಿನವೂ ಸಮಸ್ಯೆ ಆಗುತ್ತಿತ್ತು' ಎಂದಿದ್ದಾರೆ ಕಾಜಲ್.

  'ಹಲವು ಪ್ರಶ್ನೆಗಳು ಎದುರಾಯಿತು, ಆದರೆ ಅವನ್ನೆಲ್ಲಾ ನಿರ್ಲಕ್ಷಿಸಿದೆ'

  'ಹಲವು ಪ್ರಶ್ನೆಗಳು ಎದುರಾಯಿತು, ಆದರೆ ಅವನ್ನೆಲ್ಲಾ ನಿರ್ಲಕ್ಷಿಸಿದೆ'

  'ಸಮಸ್ಯೆಯಿಂದ ಪರಿಹಾರ ಪಡೆಯಲು ನಾನು 'ಇನ್‌ಹೇಲರ್‌' ಬಳಸಲು ಆರಂಭಿಸಿದೆ. ಇನ್‌ಹೇಲರ್ ಬಳಕೆ ಆರಂಭಿಸಿದ ಮೇಲೆ ಸುತ್ತಲಿದ್ದವು ಒಂದು ಥೆರನಾಗಿ ನೋಡಲು ಪ್ರಾರಂಭಿಸಿದರು. ಹಲವು ಪ್ರಶ್ನೆಗಳನ್ನು ಸಹ ಕೇಳಲು ಪ್ರಾರಂಭಿಸಿದರು. ಆದರೆ ಬರುಬರುತ್ತಾ ಇದೆಲ್ಲವೂ ನನಗೆ ಅಭ್ಯಾಸವಾಗಿ ಹೋಯಿತು' ಎಂದು ಅನುಭವ ಹಂಚಿಕೊಂಡಿದ್ದಾರೆ ನಟಿ.

  ಇನ್‌ಹೇಲರ್ ಬಳಸಲು ಹಿಂಜರಿಯಬೇಡಿ: ಕಾಜಲ್

  ಇನ್‌ಹೇಲರ್ ಬಳಸಲು ಹಿಂಜರಿಯಬೇಡಿ: ಕಾಜಲ್

  'ಇನ್‌ಹೇಲರ್ ಅನ್ನು ಬಳಸುವುದರಲ್ಲಿ ಯಾವುದೇ ಅವಮಾನ ಇಲ್ಲ. ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಆಗಲಿ ಯಾವುದೇ ಮುಜುಗರ ಇಲ್ಲದೆ ಇನ್‌ಹೇಲರ್ ಬಳಸಿರಿ. ಭಾರತದಲ್ಲಿ ಲಕ್ಷಾಂತರ ಮಂದಿಗೆ ಇನ್‌ಹೇಲರ್ ಬೇಕಾಗಿದೆ ಆದರೆ ಮುಜುಗರದಿಂದಾಗಿ ಎಷ್ಟೋ ಮಂದಿ ಇನ್‌ಹೇಲರ್ ಬಳಸಲು ಹಿಂದಡಿ ಇಡುತ್ತಿದ್ದಾರೆ' ಎಂದಿದ್ದಾರೆ ಕಾಜಲ್.

  ತಮಿಳುನಾಡಿನ ಯಶ್ ಅಭಿಮಾನಿಗಳಿಗೆ ಪ್ರತೀ ತಿಂಗಳು 8 ನೇ ತಾರೀಖು ವಿಶೇಷ ದಿನ | Yash
  'ಆಚಾರ್ಯ' ಸಿನಿಮಾದಲ್ಲಿ ನಟನೆ

  'ಆಚಾರ್ಯ' ಸಿನಿಮಾದಲ್ಲಿ ನಟನೆ

  ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಪ್ರಸ್ತುತ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದಲ್ಲಿ ನಟಿಸುತ್ತಿರುವ ಕಾಜಲ್. ಕಮಲ್ ಹಾಸನ್ ಜೊತೆಗೆ ಇಂಡಿಯನ್ 2, ಕನ್ನಡದ ತಥಾಸ್ತು, ಮೋಸಗಾಳ್ಳು, ಹೇ ಸಿನಿಮಿಕಾ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.

  English summary
  Kajal Agarwal said she is Suffering with Bronchial Asthma from the age of 5. She using inhalers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X