ನಟಿ ಕಾಜಲ್ ಅಗರ್ವಾಲ್ ಮದುವೆಯಾಗುತ್ತಿರುವ ಹುಡುಗ ಇವರೇ ನೋಡಿ

ಈ ವರ್ಷದ ಆರಂಭದಿಂದಲೂ ನಟಿ ಕಾಜಲ್ ಅಗರ್ವಾಲ್ ಮದುವೆ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇವೆ.

ನಟಿ ಕಾಜಲ್ ಅಗರ್ವಾಲ್ ಸ್ವತಃ ಈ ಬಗ್ಗೆ ಮಾತು ಆಡಿಲ್ಲವಾದರೂ ಸಹ ಕಾಜಲ್ ಗೆ ಈಗಾಗಲೇ ನಿಶ್ಚಿತಾರ್ಥ ಆಗಿದೆ ಎಂದೂ ಸಹ ಹೇಳಲಾಗುತ್ತಿದೆ. ತೆಲುಗು ಮಾಧ್ಯಮಗಳಲ್ಲಿ ಕಾಜಲ್ ಅಗರ್ವಾಲ್‌ ಗೆ ನಿಶ್ಚಿತಾರ್ಥ ಆಗಿರುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

ಕಾಜಲ್ ನವೆಂಬರ್ ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ. ಕಾಜಲ್ ಮದುವೆ ಆಗಲಿರುವ ಹುಡುಗನ ಚಿತ್ರಗಳನ್ನು ಸಹ ತೆಲುಗಿನ ನಂಬಿಕಸ್ತ ಮಾಧ್ಯಮಗಳೇ ಪ್ರಸಾರ ಮಾಡಿವೆ.

ಗೌತಮ್ ಕಿಚ್ಲು ಜೊತೆಗೆ ಕಾಜಲ್ ನಿಶ್ಚಿತಾರ್ಥ

ಗೌತಮ್ ಕಿಚ್ಲು ಜೊತೆಗೆ ಕಾಜಲ್ ನಿಶ್ಚಿತಾರ್ಥ

ಕಾಜಲ್ ಅಗರ್ವಾಲ್, ಮುಂಬೈ ಮೂಲದ ಖ್ಯಾತ ಬ್ಯುಸಿನೆಸ್‌ಮನ್ ಗೌತಮ್ ಕಿಚ್ಲು ಎಂಬುವರೊಂದಿಗೆ ನಿಶ್ಚಿತಾರ್ಥ ಮುಗಿಸಿಕೊಂಡಿದ್ದು, ನವೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿಯೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

ಒಳಾಂಗಣ ವಿನ್ಯಾಸದ ಉದ್ಯಮ ಹೊಂದಿದ್ದಾರೆ

ಒಳಾಂಗಣ ವಿನ್ಯಾಸದ ಉದ್ಯಮ ಹೊಂದಿದ್ದಾರೆ

ಗೌತಮ್ ಕಿಚ್ಲು ಮುಂಬೈ ಮೂಲದವರಾಗಿದ್ದು, 'ಡೈಸೆರ್ನ್ ಲಿವಿಂಗ್' ಹೆಸರಿನ ಒಳಾಂಗಣ ವಿನ್ಯಾಸದ ಉದ್ಯಮವನ್ನು ಹೊಂದಿದ್ದಾರೆ. ದೇಶದ ಅತ್ಯುತ್ತಮ ಒಳಾಂಗಣ ವಿನ್ಯಾಸ ಸಂಸ್ಥೆಗಳಲ್ಲಿ ಗೌತಮ್ ಸಂಸ್ಥೆಯೂ ಒಂದು.

ಮುಂಬೈನಲ್ಲಿ ಎರಡು ದಿನ ಮದುವೆ

ಮುಂಬೈನಲ್ಲಿ ಎರಡು ದಿನ ಮದುವೆ

ಕಾಜಲ್ ಅಗರ್ವಾಲ್ ಹಾಗೂ ಗೌತಮ್ ವಿವಾಹ ಮೊದಲೇ ನಿಶ್ಚಯವಾಗಿತ್ತು, ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದೆ. ಈಗ ನವೆಂಬರ್ ತಿಂಗಳಲ್ಲಿ ವಿವಾಹವನ್ನು ನಿಶ್ಚಯಿಸಲಾಗಿದ್ದು, ಮುಂಬೈನಲ್ಲಿ ಎರಡು ದಿನಗಳ ಕಾಲ ಮದುವೆ ನಡೆಯಲಿದೆ ಎನ್ನಲಾಗಿದೆ.

Recommended Video

ಬೀದಿಗೆ ಬಂದ ಸೂಪರ್ ಹಿಟ್ ಧಾರವಾಹಿ ನಿರ್ದೇಶಕ | Filmibeat Kannada
ಕನ್ನಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ

ಕನ್ನಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ

ನಟಿ ಕಾಜಲ್ ಅಗರ್ವಾಲ್ ಈಗಲೂ ಸಿನಿಮಾದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ಹಿಂದಿಯ 'ಮುಂಬೈ ಸಗಾ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಇಂಡಿಯನ್ 2, ಹೇಯ್ ಸಿನಮಿಕಾ, ತೆಲುಗಿನ ಮೋಸಗಾಳ್ಳು, ಆಚಾರ್ಯ ಮತ್ತು ಕನ್ನಡದ ತಥಾಸ್ತು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Kajal Agarwal and Businessman Gautam Kitchlu going to marry in November.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X