ಮೇಡಮ್ ಟುಸ್ಸಾಡ್ಸ್ ನಲ್ಲಿ ಕಾಜಲ್ ಅಗರ್ವಾಲ್ ಮೇಣದ ಪ್ರತಿಮೆ ಅನಾವರಣ
ಸಿಂಗಾಪುರ್ ನಲ್ಲಿರುವ ಮೇಡಮ್ ಟ್ಯುಸ್ಸಾಡ್ಸ್ ಗ್ಯಾಲರಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ರವರ ಮೇಣದ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಸ್ವತಃ ಕಾಜಲ್ ಅಗರ್ವಾಲ್ ಮತ್ತು ಕುಟುಂಬ, ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಮೇಡಮ್ ಟ್ಯುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆ ಪಡೆದ ದಕ್ಷಿಣ ಭಾರತದ ಮೊಟ್ಟ ಮೊದಲ ನಟಿ ಎಂಬ ಖ್ಯಾತಿಗೆ ಕಾಜಲ್ ಅಗರ್ವಾಲ್ ಪಾತ್ರರಾಗಿದ್ದಾರೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ನಟಿ ಕಾಜಲ್ ಅಗರ್ವಾಲ್.
ಈಗಾಗಲೇ ಸಿಂಗಾಪೂರ್ ನಲ್ಲಿರುವ ಮೇಡಮ್ ಟ್ಯುಸ್ಸಾಡ್ಸ್ ಗ್ಯಾಲರಿಯಲ್ಲಿ ತಮಿಳು ನಟ ಅಜಿತ್ ಕುಮಾರ್, ತೆಲುಗು ನಟ ಮಹೇಶ್ ಬಾಬು ರವರ ಮೇಣದ ಪ್ರತಿಮೆಗಳಿವೆ. ಈಗ ಇದೇ ಸಾಲಿಗೆ ಕಾಜಲ್ ಅಗರ್ವಾಲ್ ಸೇರ್ಪಡೆಗೊಂಡಿದ್ದಾರೆ. ಮುಂದೆ ಓದಿರಿ...

ಮೇಣದ ಪ್ರತಿಮೆ ಜೊತೆಗೆ
''ಗ್ಲೋಬಲ್ ಐಕಾನ್ ಗಳ ಮಧ್ಯೆ ನಾನೂ ಇರುವುದು ಸಂತಸ ತಂದಿದೆ. ಕಲಾವಿದನ ಕಣ್ಣಿನಿಂದ ನನ್ನನ್ನ ನಾನೇ ನೋಡಿಕೊಳ್ಳುವಂತಿದೆ. ಹೋಲಿಕೆ ಮತ್ತು ಪ್ರತಿಯೊಂದು ಡೀಟೇಲ್ ಬಗ್ಗೆಯೂ ಗಮನ ಹರಿಸಿರುವ ಕುರಿತು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ'' ಎಂದು ತಮ್ಮ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಕಾಜಲ್ ಅಗರ್ವಾಲ್ ಸಂತಸ ವ್ಯಕ್ತಪಡಿಸಿದರು.

ಧನ್ಯವಾದ ತಿಳಿಸಿದ ಕಾಜಲ್
''ನನ್ನನ್ನ ಗುರುತಿಸಿದ ಸಿಂಗಾಪೂರ್ ಮೇಡಮ್ ಟ್ಯುಸ್ಸಾಡ್ಸ್ ಗೆ ಹೃದಯಪೂರ್ವಕ ಧನ್ಯವಾದಗಳು'' ಎಂದು ನಟಿ ಕಾಜಲ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮೇಣದ ಪ್ರತಿಮೆ ಅನಾವರಣಗೊಳಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬೆರಗಾಗಿದ್ದ ಕಾಜಲ್ ಅಗರ್ವಾಲ್
''ಚಿಕ್ಕವಳಿದ್ದಾಗ ನಾನು ಮೇಡಮ್ ಟ್ಯುಸ್ಸಾಡ್ಸ್ ಗೆ ಭೇಟಿ ನೀಡಿದ್ದೆ. ಅಲ್ಲಿನ ಮೇಣದ ಪ್ರತಿಮೆಗಳನ್ನು ನೋಡಿ ಬೆರಗಾಗಿದ್ದೆ. ಈಗ ನನ್ನದೇ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಸಂತೋಷವಾಗಿದೆ'' ಎಂದು ಈ ಹಿಂದೆ ಕಾಜಲ್ ಅಗರ್ವಾಲ್ ಹೇಳಿದ್ದರು.

ಬಹು ಬೇಡಿಕೆಯ ನಟಿ
2007 ರಲ್ಲಿ 'ಲಕ್ಷ್ಮಿ ಕಲ್ಯಾಣಂ' ಚಿತ್ರದ ಮೂಲಕ ಟಾಲಿವುಡ್ ಗೆ ಪದಾರ್ಪಣೆ ಮಾಡಿದ ಕಾಜಲ್ ಅಗರ್ವಾಲ್ ಸದ್ಯ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. 'ಮಗಧೀರ', 'ಆರ್ಯ-2', 'ಡಾರ್ಲಿಂಗ್', 'ಬೃಂದಾವನ', 'ಬಾದ್ಷಾ' ಮುಂತಾದ ಹಿಟ್ ಸಿನಿಮಾಗಳ ನಾಯಕಿ ಕಾಜಲ್ ಅಗರ್ವಾಲ್.


Click it and Unblock the Notifications











