ಶಿಮ್ಲಾದಲ್ಲಿ ಹೊಸ ವರ್ಷ ಸಂಭ್ರಮಿಸಿದ ನಟಿ ಕಾಜಲ್ ಮತ್ತು ಪತಿ

ಬಹುಭಾಷೆ ನಟಿ ಕಾಜಲ್ ಅಗರ್ ವಾಲ್ ಮತ್ತು ಪತಿ ಗೌತಮ್ ಕಿಚಲು ಹೊಸ ವರ್ಷವನ್ನು ಹಿಮಾಚಲ ಪ್ರದೇಶದಲ್ಲಿ ಸಂಭ್ರಮಿಸಿದ್ದಾರೆ. ಸ್ನೇಹಿತರ ಜೊತೆ ಸೇರಿ ಶಿಮ್ಲಾದಲ್ಲಿ 2021ನೇ ವರ್ಷವನ್ನು ಸ್ವಾಗತಿಸಿದ್ದಾರೆ.

ಶಿಮ್ಲಾದಲ್ಲಿ ಪತಿ ಜೊತೆ ಹಾಲಿಡೇ ಎಂಜಾಯ್ ಮಾಡ್ತಿರುವ ನಟಿ ಕಾಜಲ್ ಕೆಲವು ಚೆಂದದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಶಿಮ್ಲಾದ ವಾತಾವರಣಕ್ಕೆ ತಕ್ಕಂತೆ ಕಾಸ್ಟ್ಯೂಮ್ ಧರಿಸಿರುವ ನವ ದಂಪತಿ ಮೋಜು ಮಸ್ತಿ ಮಾಡಿದ್ದಾರೆ. ಜೊತೆ ಕಳೆದ ವರ್ಷದ ಜೀವನದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ನಟಿ ''ನನ್ನ ಜೀವನದಲ್ಲಿ ಜೊತೆಯಾದ ಎಲ್ಲರಿಗೂ ಕೃತಜ್ಞರಾಗಿದ್ದೇನೆ'' ಎಂದು ಧನ್ಯವಾದ ತಿಳಿಸುವ ಮೂಲಕ ಹೊಸ ವರ್ಷ ಸ್ವಾಗತಿಸಿದ್ದಾರೆ.

Kajal Aggarwal and Gautam Kitchlu Celebrate New Year In Shimla

ಅಂದ್ಹಾಗೆ ನಟಿ ಕಾಜಲ್ ಅಗರ್‌ವಾಲ್ ಕೊರೊನಾ ವೈರಸ್ ಭೀತಿಯ ನಡೆವೆಯೂ ಅಕ್ಟೋಬರ್ 30 ರಂದು ಉದ್ಯಮಿ ಗೌತಮ್ ಕಿಚಲು ಜೊತೆ ವಿವಾಹವಾದರು. ಈ ಮದುವೆ ಕಾರ್ಯಕ್ರಮದಲ್ಲಿ ಕೇವಲ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಮದುವೆ ಬಳಿಕ ಹನಿಮೂನ್‌ಗೆಂದು ಮಾಲ್ಡೀವ್ಸ್‌ಗೆ ತೆರಳಿದ್ದರು.

ನಂತರ ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಚಿತ್ರದ ಶೂಟಿಂಗ್‌ನಲ್ಲೂ ಕಾಜಲ್ ಭಾಗಿಯಾಗಿದ್ದರು. ಮೊದಲ ದಿನ ಸೆಟ್‌ಗೆ ಪತಿ ಗೌತಮ್ ಜೊತೆಯಲ್ಲಿ ಹೋಗಿದ್ದರು. ನವ ಜೋಡಿಯನ್ನು ನಿರ್ದೇಶಕ ಕೊರಟಲಾ ಶಿವ, ಚಿರಂಜೀವಿ ಸೇರಿದಂತೆ ಚಿತ್ರತಂಡ ಶುಭಹಾರೈಸಿತ್ತು.

Kajal Aggarwal and Gautam Kitchlu Celebrate New Year In Shimla

ಕಾಜಲ್ ಅವರ ಪತಿ ಗೌತಮ್ ಅವರು ಚಿತ್ರರಂಗದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಿನಿಮಾ ಇಂಡಸ್ಟ್ರಿ ಮೇಲೆ ಗೌತಮ್ ಅವರಿಗೆ ಹೆಚ್ಚು ಆಸಕ್ತಿಯಿದ್ದು, ಮುಂದಿನ ದಿನದಲ್ಲಿ ನಿರ್ಮಾಣ ಹಾಗೂ ನಟನೆ ಆರಂಭಿಸಬಹುದು ಎನ್ನಲಾಗಿದೆ.

More from Filmibeat

English summary
Indian actress Kajal Aggarwal and husband Gautam Kitchlu has celebrate new year vacation in Shimla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X