ನಿಶ್ಚಿತಾರ್ಥದ ಉಂಗುರ ರಿವೀಲ್ ಮಾಡಿದ ನಟಿ ಕಾಜಲ್ ಅಗರ್ವಾಲ್

ದಕ್ಷಿಣ ಭಾರತೀಯ ಸಿನಿಮಾರಂಗದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಇದೇ ತಿಂಗಳು ಬಹುಕಾಲದ ಗೆಳೆಯ ಗೌತಮ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಕಾಜಲ್ ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಮದುವೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಮುಂಬೈನಲ್ಲಿ ಹೊಸ ಮನೆ ಖರೀದಿಸಿ ಮನೆಗೆ ವಸ್ತುಗಳನ್ನು ಜೋಡಿಸಿದ ಕೊಳ್ಳುತ್ತಿರುವ ಫೋಟೋವನ್ನು ಶೇರ್ ಮಾಡಿದ್ದರು.

ಇದೀಗ ಕಾಜಲ್ ನಿಶ್ಚಿತಾರ್ಥದ ರಿಂಗ್ ರಿವೀಲ್ ಆಗಿದೆ. ಕಾಜಲ್ ಕೈ ಬೆರಳಿನ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಜಲ್ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದಾರೆ. ಉಂಗುರ ತೋರಿಸಿ ಸೂಪರ್ ಎಂದು ಆಕ್ಷನ್ ಮಾಡಿ ಹೇಳಿದ್ದಾರೆ. ಇದುವರೆಗೂ ಕಾಜಲ್ ನಿಶ್ಚಿತಾರ್ಥದ ಉಂಗುರ ರಿವೀಲ್ ಆಗಿರಲಿಲ್ಲ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Kajal Aggarwal flaunts huge engagement ring, ahead of her wedding

ಅಂದ್ಹಾಗೆ ಕಾಜಲ್ ಅಕ್ಟೋಬರ್ 30ರಂದು ಮುಂಬೈ ಮೂಲದ ಉದ್ಯಮಿ ಗೌತಮ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತೀರಾ ಖಾಸಗಿಯಾಗಿ ನಡೆಯುವ ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತರು ಮಾತ್ರರು ಭಾಗವಹಿಸಲಿದ್ದಾರೆ. ಕೊರೊನಾ ವೈರಸ್ ಪರಿಣಾಮ ಕಾಜಲ್ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಬಳಿಕ ಕಾಜಲ್ ಪತಿಯ ಜೊತೆ ಮುಂಬೈನಲ್ಲಿ ನೆಲೆಸಲಿದ್ದಾರೆ.

Kajal Aggarwal flaunts huge engagement ring, ahead of her wedding

ಮದುವೆ ಬಳಿಕವೂ ನಟನೆ ಮುಂದುವರೆಸುವುದಾಗಿ ಹೇಳಿರುವ ಕಾಜಲ್, ಮದುವೆ ಸುದ್ದಿಯ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಮೊದಲ ಬಾರಿಗೆ ಕಾಜಲ್ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಲೈವ್ ಟೆಲಿಕಾಸ್ಟ್ ಎಂಬ ತಮಿಳು ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಡಿಜಿಟಲ್ ಲೋಕಕ್ಕೆ ಕಾಲಿಡುತ್ತಿದ್ದಾರೆ.

Recommended Video

Arjun Sarja delighted with Happy News : 20 ವರ್ಷ ಆದ್ಮೇಲೆ ಚಿರು ಮಗನನ್ನು ನಾನೇ ಲಾಂಚ್ ಮಾಡ್ತೀನಿ

More from Filmibeat

English summary
Actress Kajal Aggarwal flaunts huge engagement ring, ahead of her wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X