ಮದುವೆ ಬಳಿಕ ಕಾಜಲ್ ಅಗರ್‌ವಾಲ್ ನಟಿಸಬೇಕಿರುವ ಐದು ಚಿತ್ರಗಳು

ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್ ಅಕ್ಟೋಬರ್ 30 ರಂದು ಉದ್ಯಮಿ ಗೌತಮ್ ಎಂಬುವರ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮದುವೆಗಾಗಿ ಬ್ರೇಕ್ ತೆಗೆದುಕೊಂಡಿದ್ದ ನಟಿ ಕಾಜಲ್ ಅಗರ್‌ವಾಲ್ ಯಾವಾಗ ಚಿತ್ರೀಕರಣಕ್ಕೆ ಮರಳುತ್ತಾರೆ ಎಂಬ ಕುತೂಹಲ ಕಾಡುತ್ತಿದೆ.

ಮತ್ತೊಂದೆಡೆ ಕಾಜಲ್ ಅಗರ್‌ವಾಲ್ ನಟಿಸಬೇಕಿರುವ ಚಿತ್ರಗಳು ಯಾವುದು ಎನ್ನುವುದು ತಿಳಿಯಬೇಕಾದ ಸಂಗತಿ.

* ಚಿರು ಜೊತೆ ಆಚಾರ್ಯ

ಮೆಗಾಸ್ಟಾರ್ ಚಿರಂಜೀವಿ ಜೊತೆ ಆಚಾರ್ಯ ಸಿನಿಮಾದಲ್ಲಿ ಕಾಜಲ್ ನಟಿಸಬೇಕಾಗಿದೆ. ಕಾಜಲ್‌ಗೆ ಮದುವೆ ಫಿಕ್ಸ್ ಆಗುತ್ತಿದ್ದಂತೆ ಈ ಚಿತ್ರದಿಂದ ನಟಿಯನ್ನು ಬದಲಾಯಿಸಲು ತೀರ್ಮಾನಿಸಿದ್ದರು ಎಂಬ ಸುದ್ದಿಯೂ ಸದ್ದು ಮಾಡಿತ್ತು. ನಂತರ, ಅದನ್ನು ಕೇವಲ ವದಂತಿ ಎಂದು ಚಿತ್ರತಂಡ ಸ್ಪಷ್ಟನೆ ನೀಡಿತ್ತು.

Kajal aggarwal Upcoming Movies List

* ಕಮಲ್ ಜೊತೆ ಇಂಡಿಯನ್ 2

ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ಮತ್ತು ಶಂಕರ್ ನಿರ್ದೇಶನದಲ್ಲಿ ಬರುತ್ತಿರುವ ಇಂಡಿಯನ್ 2 ಸಿನಿಮಾದಲ್ಲಿ ಕಾಜಲ್ ನಾಯಕಿಯಾಗಿ ನಟಿಸುತ್ತಿದ್ದಾರೆ.

* ಮುಂಬೈ ಸಗಾ

ಬಾಲಿವುಡ್ ನಟ ಜಾನ್ ಅಬ್ರಾಹಂ, ಇಮ್ರಾನ್ ಹಶ್ಮಿ, ಸುನೀಲ್ ಶೆಟ್ಟಿ ಪ್ರಮುಖ ತಾರಬಳಗದಲ್ಲಿ ನಟಿಸಿರುವ ಮುಂಬೈ ಸಗಾ ಸಿನಿಮಾದಲ್ಲೂ ಕಾಜಲ್ ನಟಿಸುತ್ತಿದ್ದಾರೆ.

Kajal aggarwal Upcoming Movies List

* ಮೋಸಗಾಳ್ಳು

ಮಂಚು ವಿಷ್ಣು, ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಮೋಸಗಾಳ್ಳು ಚಿತ್ರದಲ್ಲಿ ಕಾಜಲ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

* ದುಲ್ಕರ್ ಸಲ್ಮಾನ್ ಜೊತೆ ನಟನೆ

ತಮಿಳಿನಲ್ಲಿ ದುಲ್ಕರ್ ಸಲ್ಮಾನ್ ಮತ್ತು ಅಧಿತಿ ರಾಯ್ ಹೈದರಿ ನಟಿಸಲಿರುವ ಹೇ ಸಿನಾಮಿಕ ಚಿತ್ರದಲ್ಲೂ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Kajal aggarwal Upcoming Movies List: Kajal will join after break with Mosagallu, Acharya, Indian 2, Mumbai saga and Hey sinamika movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X