ತ್ರಿಷಾ ನಂತರ ಚಿರಂಜೀವಿ ಸಿನಿಮಾದಿಂದ ಹೊರ ನಡೆದ ನಟಿ ಕಾಜಲ್

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ ಆಚಾರ್ಯ ಸಿನಿಮಾದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿದೆ. ಈ ಸಿನಿಮಾದ ಮೇಲೆ ಚಿರಂಜೀವಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೇನು ಸುಸೂತ್ರವಾಗಿ ಚಿತ್ರೀಕರಣ ನಡೆಯುತ್ತಿದೆ ಎನ್ನುವಷ್ಟೊತ್ತಿಗೆ ನಟಿ ತ್ರಿಷಾ ಸಿನಿಮಾದಿಂದ ಹೊರನಡೆದು ಶಾಕ್ ನೀಡಿದ್ದರು.

Recommended Video

Kajal Agarwal clarified she is not ready to act in Kabja | FILMIBEAT KANNADA

ಮೆಗಾ ಸ್ಟಾರ್ ಜೊತೆ ನಟಿಸಲು ನಾಯಕಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ತ್ರಿಷಾ ಸಿಕ್ಕ ಅವಕಾಶವನ್ನು ಕೈ ಚೆಲ್ಲಿ ಹೋಗಿರುವುದು ಅಚ್ಚರಿ ಮೂಡಿಸಿತ್ತು. ತ್ರಿಷಾ ಜಾಗಕ್ಕೆ ನಟಿ ಕಾಜಲ್ ಅಗರ್ ವಾಲ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೀಗ ಕಾಜಲ್ ಕೂಡ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಮುಂದೆ ಓದಿ..

ಆಚಾರ್ಯ ಸಿನಿಮಾದಿಂದ ಕಾಜಲ್ ಔಟ್?

ಆಚಾರ್ಯ ಸಿನಿಮಾದಿಂದ ಕಾಜಲ್ ಔಟ್?

ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾಗೆ ನಾಯಕಿಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸಿನಿಮಾಗಾಗಿ ನಟಿ ಕಾಜಲ್ ಆಗರ್ ವಾಲ್ ಗೆ ಸ್ಕ್ರೀನ್ ಟೆಸ್ಟ್ ಮಾಡಿಸಿ, ನಂತರ ಆಯ್ಕೆಯಾಗಿದ್ದರು. ಅಭಿಮಾನಿಗಳು ಸಹ ಕಾಜಲ್ ನಾಯಕಿ ಎಂದು ಬಹಿರಂಗ ಪಡಿಸಿದ್ದರು. ಆದರೀಗ ಕಾಜಲ್ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಕಾಜಲ್ ಹೊರಬರಲು ಕಾರಣವೇನು?

ಕಾಜಲ್ ಹೊರಬರಲು ಕಾರಣವೇನು?

ನಟಿ ಕಾಜಲ್ ಅಗರ್ ವಾಲ್ ಕೈಯಲ್ಲಿ ಬೇರೆ ದೊಡ್ಡ ಸಿನಿಮಾ ಇರುವ ಕಾರಣ ಆಚಾರ್ಯ ಸಿನಿಮಾ ಕೈ ಬಿಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಮಿಳಿನ ಬಿಗ್ ಬಜೆಟ್ ಸಿನಿಮಾಗೆ ಸಹಿ ಮಾಡಿರುವುದಲ್ಲದೆ ಮುಂಗಡ ಹಣ ಕೂಡ ಪಡೆದಿದ್ದಾರಂತೆ. ಡೇಟ್ ಕ್ಲ್ಯಾಶ್ ಆಗುವ ಕಾರಣ ಆಚಾರ್ಯ ಸಿನಿಮಾ ಕೈ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಜಲ್ ಜಾಗಕ್ಕೆ ಬರ್ತಾರಾ ಅನುಷ್ಕಾ?

ಕಾಜಲ್ ಜಾಗಕ್ಕೆ ಬರ್ತಾರಾ ಅನುಷ್ಕಾ?

ನಟಿ ಕಾಜಲ್ ಅಗರ್ ವಾಲ್ ಹೊರ ನಡೆದ ಜಾಗಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ಮತ್ತೋರ್ವ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಅನುಷ್ಕಾ ಹೆಸರು ಮೊದಲಿನಿಂದ ಕೇಳಿ ಬರುತ್ತಿತ್ತು. ಆದರೆ ಕಾಜಲ್ ಆಯ್ಕೆಯಾದ ಕಾರಣ ಅನುಷ್ಕಾ, ಆಚಾರ್ಯ ಸಿನಿಮಾದಿಂದ ದೂರ ಉಳಿದಿದ್ದರು. ಆದರೀಗ ಚಿರಂಜೀವಿ ಜೊತೆ ಅನುಷ್ಕಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತ್ರಿಷಾ ಹೊರ ನಡೆದ ಅಸಲಿ ಕಾರಣ ಬಿಚ್ಚಿಟ್ಟ ಚಿರಂಜೀವಿ

ತ್ರಿಷಾ ಹೊರ ನಡೆದ ಅಸಲಿ ಕಾರಣ ಬಿಚ್ಚಿಟ್ಟ ಚಿರಂಜೀವಿ

"ನನ್ನ ಮಗಳು ತ್ರಿಷಾಗೆ ಕಾಸ್ಟ್ಯೂಮ್ ಸಹ ಡಿಸೈನ್ ಮಾಡಿದ್ದರು. ತ್ರಿಷಾ ಹೊರ ನಡೆದಿರುವ ವಿಚಾರ ಕೇಳಿ ನನಗೆ ನಿಜಕ್ಕೂ ಶಾಕ್ ಆಯಿತು. ತ್ರಿಷಾ ನಿರ್ದೇಶಕ ಮಣಿರತ್ನಂ ನಿರ್ದೇಶನದ ಸಿನಿಮಾಗೆ ಸಹಿ ಹಾಕಿದ್ದಾರೆ. ಅನೇಕ ದಿನಗಳ ಹಿಂದೆಯೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಲ್ಲದೆ ಚಿತ್ರಕ್ಕಾಗಿ ಸಾಕಷ್ಟು ದಿನಗಳ ಕಾಲ್ ಶೀಟ್ ನೀಡಿದ್ದಾರೆ. ನಮ್ಮ ಸಿನಿಮಾ ತಂಡದಿಂದ ತ್ರಿಷಾಗೆ ಯಾವುದೆ ಸಮಸ್ಯೆ ಆಗಿಲ್ಲ. ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ" ಎಂದು ಚಿರು ಬಹಿರಂಗ ಪಡಿಸಿದ್ದರು.

More from Filmibeat

English summary
Actress Kajal Aggarwal walk out of Chiranjeevi's Acharya film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X