ಭಾವಿ ಪತಿ ಗೌತಮ್ ಜೊತೆ ಹೊಸ ಮನೆಗೆ ತೆರಳಲು ಸಿದ್ಧರಾದ ಕಾಜಲ್: ಫೋಟೋ ಹಂಚಿಕೊಂಡ ನಟಿ
ದಕ್ಷಿಣ ಭಾರತೀಯ ಸಿನಿಮಾರಂಗದ ಜನಪ್ರಿಯ ಮತ್ತು ಸುಂದರ ನಟಿ ಕಾಜಲ್ ಅಗರ್ವಾಲ್ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಕಾಜಲ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಾಜಲ್ ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ 30ರಂದು ಕಾಜಲ್, ಮುಂಬೈ ಮೂಲದ ಉದ್ಯಮಿ, ಬಹುಕಾಲದ ಗೆಳೆಯ ಗೌತಮ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ತೀರ ಖಾಸಗಿಯಾಗಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗುತ್ತಿದ್ದಾರೆ. ಸದ್ಯದಲ್ಲೇ ಸಾಂಸಾರಿಕ ಜೀವನ ಪ್ರಾರಂಭಿಸುವ ಕಾಜಲ್ ಮತ್ತು ಭಾವಿ ಪತಿ ಗೌತಮ್ ಹೊಸ ಮನೆ ಖರೀದಿ ಮಾಡಿದ್ದಾರೆ.
ಮುಂಬೈನಲ್ಲಿ ಹೊಸ ಮನೆ ಮಾಡಿರುವ ಕಾಜಲ್ ಮತ್ತು ಗೌತಮ್ ಇಬ್ಬರು ಮನೆಗೆ ವಸ್ತುಗಳನ್ನು ಜೋಡಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ಹೊಸ ಮನೆಗೆ ವಸ್ತುಗಳನ್ನು ಜೋಡಿಸಿಕೊಳ್ಳುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಾಜಲ್ ಭಾವಿ ಪತಿ ಗೌತಮ್ ಹೊಸ ಮನೆಗೆ ವಸ್ತುಗಳನ್ನು ಜೋಡಿಸುತ್ತಿರುವುದನ್ನು ಕಾಜಲ್ ಸೆರೆಹಿಡಿದು ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ಏನಾದರು ಸಲಹೆಗಳಿವೇ? ಎಂದು ಕೇಳಿದ್ದಾರೆ.

ಕೊರೊನಾ ವೈರಸ್ ಹಾವಳಿಯ ಪರಿಣಾಮ ಕಾಜಲ್ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಬಳಿಕ ಕಾಜಲ್ ಪತಿಯ ಜೊತೆ ಮುಂಬೈನಲ್ಲಿ ನೆಲೆಸಲಿದ್ದಾರೆ. ಅಲ್ಲದೆ ಮದುವೆ ಬಳಿಕವೂ ನಟನೆ ಮುಂದುವರೆಸುವುದಾಗಿ ಹೇಳಿದ್ದಾರೆ.
2004ರಲ್ಲಿ ಕಾಜಲ್ ಅಗರ್ವಾಲ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಕ್ಯುನ್ ಹೋ ಗಯಾ ನಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ದೊಡ್ಡ ಮಟ್ಟಕ್ಕೆ ಸಕ್ಸಸ್ ಆಗುತ್ತಿದ್ದಂತೆ ತೆಲುಗು ಸಿನಿಮಾರಂಗದಲ್ಲಿ ಕಾಜಲ್ ಬೇಡಿಕೆ ಹೆಚ್ಚಾಯಿತು. ಬಳಿಕ ತೆಲುಗು ಸಿನಿಮಾರಂಗದಲ್ಲೇ ಗಟ್ಟಿಯಾಗಿ ಬೇರುರಿದರು.


Click it and Unblock the Notifications











