ಡಾರ್ಲಿಂಗ್ ಪ್ರಭಾಸ್ 'ಸ್ಪಿರಿಟ್' ಚಿತ್ರದಲ್ಲಿ ಬಾಲಿವುಡ್‌ನ ಕೃಷ್ಣಸುಂದರಿ..?

ಪ್ಯಾನ್-ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ 'ಸ್ಪಿರಿಟ್' ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಈ ಚಿತ್ರವನ್ನು 'ಅರ್ಜುನ್ ರೆಡ್ಡಿ' ಮತ್ತು 'ಕಬೀರ್ ಸಿಂಗ್' ಖ್ಯಾತಿಯ ಖಡಕ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ. ಈ ಹೈ-ವೋಲ್ಟೇಜ್ ಪ್ರಾಜೆಕ್ಟ್‌ನಲ್ಲಿ ಬಾಲಿವುಡ್‌ನ ಖ್ಯಾತ ನಾಯಕಿ ಬಣ್ಣ ಹಚ್ಚುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿದೆ.

ಹೌದು, ಅಸಲಿಗೆ ಎಲ್ಲವೂ ಅಂದುಕೊಂಡತೆ ಆಗಿದ್ದರೆ ''ಸ್ಪಿರಿಟ್'' ಚಿತ್ರದಲ್ಲಿ ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಬೇಕಿತ್ತು. ''ಕಲ್ಕಿ'' ನಂತರ ಮತ್ತೊಮ್ಮೆ ತೆರೆ ಹಂಚಿಕೊಳ್ಳಬೇಕಿತ್ತು. ಆದರೆ.. ದೀಪಿಕಾ ಪಡುಕೋಣೆಯ ಹಲವಾರು ಷರತ್ತುಗಳು, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಿರಿಕಿರಿಗೆ ಕಾರಣವಾದವು.

Kajol to star opposite Prabhas in Sandeep reddy vanga s Spirit replacing Kareena

ಈ ಹಿನ್ನೆಲೆ ರಗಳೆಯೇ ಬೇಡ ಎಂದು ಸಂದೀಪ್ ರೆಡ್ಡಿ ವಂಗಾ ತಮ್ಮ ''ಅನಿಮಲ್''ಚಿತ್ರದ ಚೆಲುವೆ ತೃಪ್ತಿ ದಿಮ್ರಿಯವರನ್ನು ಕರೆತಂದರು. ನಾಯಕಿಯ ಪಟ್ಟ ಕಟ್ಟಿದರು. ಇನ್ನೇನು ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಮೊನ್ನೆಯಷ್ಟೇ ಮುಹೂರ್ತ ಕೂಡ ನೆರವೇರಿದೆ. ಹೀಗಿರುವಾಗ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕರೀನಾ ಕಪೂರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಮೊನ್ನೆ ಮೊನ್ನೆ ಹಬ್ಬಿತ್ತು.

ಆದರೆ. ಈಗ ಬೇರೆಯದ್ದೇ ಸುದ್ದಿ ಓಡಾಡುತ್ತಿದೆ. ಆ ಪ್ರಕಾರ ಕರೀನಾ ಕಪೂರ್ ಖಾನ್ ಅವರ ಜಾಗಕ್ಕೆ ಈಗ ಬಾಲಿವುಡ್‌ನ ಅಂದಕಾಲತ್ತಿಲ್‌ನ ಕೃಷ್ಣ ಸುಂದರಿ ಕಾಜೋಲ್ ಟಾಲಿವುಡ್‌ಗೆ ಬರಲಿದ್ದಾರೆ. ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು ಎಲ್ಲರಿಗೆ ಗೊತ್ತಿರುವಂತೆ ಸಂದೀಪ್ ರೆಡ್ಡಿ ವಂಗಾ ಚಿತ್ರಗಳು ಕೇವಲ ಪ್ರೇಮಕಥೆಗಳಾಗಿರುವುದಿಲ್ಲ. ಅವುಗಳಲ್ಲಿ ಸ್ಟ್ರಾಂಗ್ ಫೀಮೇಲ್ ಪಾತ್ರಗಳು ಇರುತ್ತವೆ. 'ಸ್ಪಿರಿಟ್' ಚಿತ್ರದಲ್ಲಿ ಕಾಜೋಲ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಟಾಲಿವುಡ್ ಮತ್ತು ಬಾಲಿವುಡ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಇದು ಕೇವಲ ರೂಮರ್ ಆಗಿದೆ. ಆದರೆ ಈ ಜೋಡಿ ತೆರೆ ಮೇಲೆ ಬಂದರೆ ಸಿನಿಪ್ರಿಯರಿಗೆ ಹಬ್ಬ ಗ್ಯಾರಂಟಿ.

ಬಾಲಿವುಡ್‌ನಿಂದ ದಕ್ಷಿಣಕ್ಕೆ ಸ್ಟಾರ್ ನಟಿಯರ ದಂಡು...

ದಕ್ಷಿಣ ಭಾರತದ ಚಿತ್ರಗಳು ಈಗ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದರಿಂದಾಗಿ ಬಾಲಿವುಡ್ನ ಸ್ಟಾರ್ ನಟಿಯರು ದಕ್ಷಿಣದ ಚಿತ್ರಗಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಹಾಗೂ ದಿಶಾ ಪಟಾನಿ ಅವರಂತಹ ನಟಿಯರು ಟಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದಾರೆ. ಈಗ ಅದೇ ಸಾಲಿಗೆ ಕಾಜೋಲ್ ಸಹ ಸೇರುವ ಸಾಧ್ಯತೆ ಇದೆ.

Kajol to star opposite Prabhas in Sandeep reddy vanga s Spirit replacing Kareena

ಕಾಜೋಲ್ ಅವರು ದಕ್ಷಿಣದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಧನುಷ್ ಅವರೊಂದಿಗೆ 'ವಿಐಪಿ 2' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದರು. ಅವರ ಅಭಿನಯಕ್ಕೆ ದಕ್ಷಿಣದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಮತ್ತೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ 'ಸ್ಪಿರಿಟ್' ಮೂಲಕ ಕಾಜೋಲ್ ಕಮ್ಬ್ಯಾಕ್ ಮಾಡಿದರೆ ಅದು ದೊಡ್ಡ ಸುದ್ದಿ ಆಗಲಿದೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ತಮ್ಮ ಪ್ರತಿ ಚಿತ್ರದಲ್ಲಿ ನಟಿಯ ಪಾತ್ರಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. 'ಸ್ಪಿರಿಟ್'ನಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಾಜೋಲ್ ಅವರಿಗೆ ಒಂದು ಪವರ್ಫುಲ್ ಮತ್ತು ಚಾಲೆಂಜಿಂಗ್ ಪಾತ್ರವನ್ನು ನೀಡುವ ಸಾಧ್ಯತೆ ಇದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಇದು ಪ್ರಭಾಸ್ ಅಭಿಮಾನಿಗಳಿಗೆ ಮತ್ತು ಕಾಜೋಲ್ ಅಭಿಮಾನಿಗಳಿಗೆ ಡಬಲ್ ಧಮಾಕ.

ಅಧಿಕೃತ ಘೋಷಣೆ ಯಾವಾಗ? ನಿರೀಕ್ಷೆಯಲ್ಲಿ ಫ್ಯಾನ್ಸ್...

ಈ ಸುದ್ದಿಯ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ ದೊಡ್ಡ ಮಟ್ಟದ ರೂಮರ್ಗಳು ಸಾಮಾನ್ಯವಾಗಿ ನಿಜವಾಗುತ್ತವೆ ಎಂಬ ಮಾತು ಚಿತ್ರರಂಗದಲ್ಲಿದೆ. ಪ್ರಭಾಸ್ ಕೈಯಲ್ಲಿ ಈಗಾಗಲೇ ಹಲವು ಬಿಗ್ ಬಜೆಟ್ ಚಿತ್ರಗಳಿವೆ. 'ಸಲಾರ್' ಯಶಸ್ಸಿನ ನಂತರ 'ಕಲ್ಕಿ 2898 ಎಡಿ' ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆಯೇ 'ಸ್ಪಿರಿಟ್' ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ.

More from Filmibeat

Read more about: kajol prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X