ಬಾಕ್ಸಾಫೀಸ್‌ನಲ್ಲಿ 'ಕಲ್ಕಿ' ಕಿಚ್ಚು; ವಿಶ್ವದಾದ್ಯಂತ 3 ದಿನಕ್ಕೆ ಚಿತ್ರ ಗಳಿಸಿದ್ದೆಷ್ಟು?

ಬಾಕ್ಸಾಫೀಸ್‌ನಲ್ಲಿ 'ಕಲ್ಕಿ' ಆರ್ಭಟ ಮುಂದುವರೆದಿದೆ. ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಶನಿವಾರ(ಜೂನ್ 29) ಟಿ20 ಕ್ರಿಕೆಟ್ ಫೈನಲ್ ಪಂದ್ಯ ಇದ್ದರೂ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಪರಿಣಾಮ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡಿದೆ.

ಬಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್ ಎಲ್ಲೂ ಕೂಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿಲ್ಲ. ಚುನಾವಣೆ, ಐಪಿಎಲ್ ಮುಗಿದ ಬಳಿಕ ಜನ ಮತ್ತೆ ಚಿತ್ರಮಂದಿರಗಳ ಮುಖ ಮಾಡಿದ್ದಾರೆ. ಅದು 'ಕಲ್ಕಿ 2898 AD' ಚಿತ್ರಕ್ಕೆ ಪ್ಲಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ 5 ಭಾಷೆಗಳಲ್ಲಿ ತೆರೆಗಪ್ಪಳಿಸಿದೆ.

Kalki 2898 AD 3 Days Box Office Collection Unstoppable Biggest sunday Loading

'ಕಲ್ಕಿ 2898 AD' ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಭರ್ಜರಿಯಾಗಿತ್ತು. ನೈಜಾಂ ರೈಟ್ಸ್ ರೂ. 65 ಕೋಟಿ, ಸೀಡೆಡ್‌ನಲ್ಲಿ ರೂ. 27 ಕೋಟಿ, ಆಂಧ್ರದಲ್ಲಿ 76 ಕೋಟಿ ರೂ. ಸೇರಿ ತೆಲುಗು ರೈಟ್ಸ್ 168 ಕೋಟಿ ರೂ.ಗೆ ಬಿಕರಿಯಾಗಿತ್ತು ಎನ್ನಲಾಗ್ತಿದೆ. ಕರ್ನಾಟಕ 25 ಕೋಟಿ ರೂ, ತಮಿಳುನಾಡಿನಲ್ಲಿ 16 ಕೋಟಿ ರೂ. , ಹಿಂದಿ ವರ್ಷನ್ 85 ಕೋಟಿ ರೂ, ಕೇರಳದಲ್ಲಿ 6 ಕೋಟಿ ರೂ. ಹಾಗೂ ಓವರ್‌ಸೀಸ್‌ 70 ಕೋಟಿ ರೂ. ಸೇರಿ 370 ಕೋಟಿ ರೂ. ಬ್ಯುಸಿನೆಸ್ ಮಾಡಿದ ಅಂದಾಜಿದೆ.

ಪ್ರಭಾಸ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಆದರೆ ಅಮಿತಾಬ್ ಪಾತ್ರಕ್ಕೆ ಹೆಚ್ಚಿನ ತೂಕವಿದೆ. ಅಶ್ವತ್ಥಾಮನಾಗಿ ಬಿಗ್‌ಬಿ ಪರ್ಫಾರ್ಮನ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕೆಲವೆಡೆ ಪ್ರಭಾಸ್ ಕೂಡ ಡಲ್ ಆಗಿಬಿಟ್ಟಿದ್ದಾರೆ. ಅಷ್ಟರಮಟ್ಟಿಗೆ ಅಮಿತಾಬ್ ಅಬ್ಬರಿಸಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇವರಿಬ್ಬರು ಇರುವುದರಿಂದ ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಸಖತ್ ಸದ್ದು ಮಾಡ್ತಿದೆ.

ಭಾರತದಲ್ಲಿ 'ಕಲ್ಕಿ 2898 AD' ಹಿಂದಿ ವರ್ಷನ್ ಮೊದಲ ಎರಡು ದಿನಗಳಲ್ಲಿ 45. 75 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. 3ನೇ ದಿನ 15 ಕೋಟಿ ದಾಟಿದೆ ಎನ್ನಲಾಗ್ತಿದೆ. ಆಂಧ್ರ, ತೆಲಂಗಾಣದಲ್ಲಿ 20 ಕೋಟಿ ರೂ. ಸೇರಿ ವಿಶ್ವದಾದ್ಯಂತ 3ನೇ ದಿನ ಸಿನಿಮಾ 55 ಕೋಟಿ ರೂ. ಗಳಿಕೆ ಕಂಡಿರುವ ಅಂದಾಜಿದೆ. 2 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 298 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಹೇಳಿತ್ತು. ಇದೀಗ 3 ದಿನಕ್ಕೆ 415 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ಘೋಷಿಸಿದ್ದಾರೆ.

Kalki 2898 AD 3 Days Box Office Collection Unstoppable Biggest sunday Loading

3ನೇ ದಿನಕ್ಕೆ 300 ಕೋಟಿ ರೂ. ದಾಟಿ ವಿಶ್ವದಾದ್ಯಂತ 'ಕಲ್ಕಿ' ದರ್ಬಾರ್ ಮುಂದುವರೆದಿದೆ. ಭಾನುವಾರ(ಜೂನ್ 30) ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ನಾಗ್ ಅಶ್ವಿನ್ ನಿರ್ದೇಶನದ ಫ್ಯಾಂಟಸಿ ಸೈನ್ಸ್ ಫಿಕ್ಷನ್ 'ಕಲ್ಕಿ 2898 AD' ಸಿನಿಮಾ ನೋಡುಗರ ಹುಬ್ಬೇರಿಸಿದೆ. ಒಂದಷ್ಟು ನೆಗೆಟಿವ್ ಅಂಶಗಳ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಫಸ್ಟ್‌ ಹಾಫ್ ನೋಡಿ ಬೇಸರಗೊಂಡವರು ಸೆಕೆಂಡ್ ಹಾಫ್ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಸೀಕ್ವೆಲ್ ನೋಡಲು ಉತ್ಸುಕರಾಗಿದ್ದಾರೆ.

ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿದೆ ಕೆಲಸ ಮಾಡಿದ್ದಾರೆ. ಕಮಲ್ ಹಾಸನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಸೇರಿದಂತೆ ಹಲವರು ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಈಗಾಗಲೇ ಸೀಕ್ವೆಲ್‌ನ 60ರಷ್ಟು ಚಿತ್ರೀಕರಣ ನಡೆದಿದ್ದು ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

More from Filmibeat

Read more about: prabhas box office tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X