6 ಭಾಷೆಗಳಲ್ಲಿ ಮಾತನಾಡುವ 'ಕಲ್ಕಿ'ಯ ಅಶ್ವತ್ಥಾಮ ಟೀಸರ್; ಯಂಗ್ ಬಿಗ್‌ಬಿ ಲುಕ್ ಹೇಗಿದೆ?
ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್, ಕಮಲ್ ಹಾಸನ್ ನಟನೆಯ 'ಕಲ್ಕಿ 2898 AD' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಬಿಗ್‌ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸಹ ನಟಿಸಿದ್ದಾರೆ. ಸದ್ಯ ಚಿತ್ರದಲ್ಲಿ ಅಶ್ವತ್ಥಾಮ ಪಾತ್ರದಲ್ಲಿ ಬಿಗ್‌ಬಿ ಅಮಿತಾಬ್ ಬಚ್ಚನ್ ಟೀಸರ್ ರಿಲೀಸ್ ಆಗಿದೆ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಕಲ್ಕಿ 2898 AD' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಪೌರಾಣಿಕ ಅಂಶಗಳ ಜೊತೆಗೆ ಸೈನ್ಸ್ ಫಿಕ್ಷನ್ ಜಾನರ್‌ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಭೂತ ವರ್ತಮಾನ ಭವಿಷತ್ ಕಾಲಗಳನ್ನು ತೋರಿಸುವ ಸಾಹಸ ಮಾಡಲಾಗುತ್ತಿದೆ. ಮಹಾಭಾರತದ ಅಶ್ವತ್ಥಾಮ ಇನ್ನು ಚಿರಂಜೀವಿಯಾಗಿಯೇ ಉಳಿದಿದ್ದಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಆ ಪಾತ್ರವನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ.

ಕೃಷ್ಣ-ವಿಷ್ಣುವಿನ ಕಾಲ ಹಾಗೂ ಭವಿಷ್ಯದ ಕಥೆ ಚಿತ್ರದಲ್ಲಿದೆ. ಅದಕ್ಕೆ ತಕ್ಕಂತೆ ಪಾತ್ರಗಳನ್ನು ಕಟ್ಟಿಕೊಂಡಿದ್ದು ಅದೇ ಹೆಸರುಗಳಲ್ಲಿ ತೆರೆಮೇಲೆ ಬರಲಿವೆ. ಭೈರವನಾಗಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಪಂದ್ಯದ ನಡುವೆ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ಚಾನೆಲ್‌ನಲ್ಲಿ 'ಕಲ್ಕಿ' ಚಿತ್ರದ ಅಶ್ವತ್ಥಾಮ ಪಾತ್ರ ಪರಿಚಯದ ಟೀಸರ್ ಪ್ರಸಾರವಾಗಿತ್ತು. ಪ್ರಸಾರವಾಯಿತು. "ನಾನು ದ್ರೋಣಾಚಾರ್ಯ ಅಶ್ವತ್ಥಾಮನ ಮಗ" ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವೇಳೆ ಅಶ್ವತ್ಥಾಮನಿಗೆ ಪೆಟ್ಟಾಗಿ ರಕ್ತಸ್ರಾವವಾಗುತ್ತದೆ. ಬಾಲಕನೊಬ್ಬ ಒಂದಷ್ಟು ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾನೆ. ನಿನಗೆ ಸಾವಿಲ್ಲವೇ? ನೀನು ದೇವರಾ? ಎಂದು ಕೇಳಲು ಆರಂಭಿಸುತ್ತಾನೆ. ಅಲ್ಲಿಂದ ಎದ್ದು ಹೊರಡುವ ವೇಳೆ 'ನಾನು ದ್ರೋಣಾಚಾರ್ಯನ ಪುತ್ರ ಅಶ್ವತ್ಥಾಮ' ಎಂದು ಹೇಳುವುದರೊಂದಿಗೆ ಟೀಸರ್ ಮುಕ್ತಾಯವಾಗುತ್ತದೆ. ಇನ್ನು ಟೀಸರ್ ನಡುವೆ ಅಶ್ವತ್ಥಾಮ ಯಂಗರ್ ವರ್ಷನ್ ಝಲಕ್ ತೋರಿಸಲಾಗುತ್ತದೆ. ಅಂದ್ರೆ ಅಶ್ವತ್ಥಾಮನ ಮಹಾಭಾರತ ಕಾಲದ ಕಥೆಯು ಚಿತ್ರದಲ್ಲಿ ಇರಲಿದೆ.
ಸದ್ಯ ಅಶ್ವತ್ಥಾಮ ಪಾತ್ರ ಪರಿಚಯದ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಅಷ್ಟಾಗಿ ರುಚಿಸಿಲ್ಲ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಇನ್ನು ಅಮಿತಾಬ್ ಬಚ್ಚನ್ ಯಂಗರ್ ವರ್ಷನ್ ಲುಕ್ ಬಗ್ಗೆಯೂ ನೆಗೆಟಿವ್ ಕಾಮೆಂಟ್ಸ್ ಬರ್ತಿದೆ. ಅದನ್ನು ಪಕ್ಕಕ್ಕಿಟ್ಟರೆ ಒಂದೇ ಟೀಸರ್‌ನಲ್ಲಿ 6 ಭಾಷೆಗಳನ್ನು ಬಳಸುವ ವಿಭಿನ್ನ ಪ್ರಯತ್ನ ಮಾಡಲಾಗಿದೆ.

ರಾಯ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಬಾಲಕನಿಗೆ ಮೌನವಾಗಿ ಕುಳಿತ ಅಶ್ವತ್ಥಾಮನ ಜೊತೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದು ಗೊತ್ತಾಗಲ್ಲ. ಹಾಗಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾನೆ. ಕೊನೆಗೆ ಬಿಗ್‌ಬಿ ಹಿಂದಿಯಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ.
'ಅಶ್ವ ಅಂಕಲ್ ವೇಯ್ಟ್ ಫಾರ್ ಮಿ' ಕೊನೆಗೆ ಆ ಬಾಲಕ ಹೇಳುವ ಮೂಲಕ ಟೀಸರ್ ಕೊನೆಗೊಳ್ಳುತ್ತದೆ. ಅಂದರೆ 'ಕಲ್ಕಿ 2898 AD' ಇಂಗ್ಲೀಷ್ ಭಾಷೆಗೂ ಡಬ್ ಆಗಿ ಏಕಕಾಲಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸುವುದು ಪಕ್ಕಾ ಆಗಿದೆ. ಈಗಾಗಲೇ ಈ ಸಂಬಂಧ ಹಾಲಿವುಡ್ ಸ್ಟುಡಿಯೋ ಜೊತೆಗೆ ಚಿತ್ರತಂಡ ಚರ್ಚಿಸುತ್ತಿದೆ. ಹಾಲಿವುಡ್ ರೇಂಜ್‌ನಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ 'ಕಲ್ಕಿ 2898 AD' ಸಿನಿಮಾ ನಿರ್ಮಾಣವಾಗುತ್ತಿದೆ. ಮೇ 9ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುತ್ತಿದ್ದು ಜೂನ್ 20ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











